
ಬಾಳುಗೋಡು ಗ್ರಾಮದಲ್ಲಿ ನಡೆದಿರುವ ವಿವಿಧ ಕಾಮಗಾರಿಗಳ ಉದ್ಘಾಟನೆ ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಿದರು. ರೂ 27 ಲಕ್ಷ ವೆಚ್ಚದ ದ.ಕ. ಜಿಲ್ಲಾ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಬಾಳುಗೋಡು ನೂತನ ಕಟ್ಟಡ ಉದ್ಘಾಟನೆ ಮಾಡಲಾಯಿತು, ಬಾಳುಗೋಡು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗುವ ಬಿಎಸ್ಎನ್ಎಲ್ ಮೊಬೈಲ್ ಚಾರ್ಜ್ ಕಾಮಾಗಾರಿಗೆ ಚಾಲನೆ ನೀಡಲಾಯಿತು. ನಂತರ ಬಾಳುಗೋಡಿನ ಉಪ್ಪುಕಳ ಹೊಳೆಗೆ ಗ್ರಾಮಸೇತು ಬಂಧ ಯೋಜನೆಯಡಿಯಲ್ಲಿ ನಿರ್ಮಾಣವಾದ ರೂ 47ಲಕ್ಷ ವೆಚ್ಚದ ಸೇತುವೆ ಲೋಕಾರ್ಪಣೆ ಮಾಡಲಾಯಿತು. ನಂತರ ಬಾಳುಗೋಡು ಗ್ರಾಮದ ಕಾಂತುಕುಮೇರಿ ಎಂಬಲ್ಲಿ 50 ಲಕ್ಷದ ಕಾಂಕ್ರಿಟ್ ರಸ್ತೆಯನ್ನು ಉದ್ಘಾಟನೆ ನೆರವೇರಿಸಿ, ಬಾಳುಗೋಡು ಗ್ರಾಮ ವ್ಯಾಪ್ತಿಯ ಕಾರ್ಗೊಡು ಎಂಬಲ್ಲಿ ಗ್ರಾಮಸೇತು ಬಂಧ ಯೋಜನೆಯಡಿಯಲ್ಲಿ ನಿರ್ಮಾಣವಾದ 10 ಲಕ್ಷ ವೆಚ್ಚದ ಸೇತುವೆ ಲೋಕಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹರಿಹರಪಲ್ಲತ್ತಡ್ಕ ಗ್ರಾ.ಪಂ.ಮಾಜಿ ಅಧ್ಯಕ್ಷ ಚಂದ್ರಹಾಸ ಶಿವಾಲ, ಗ್ರಾ.ಪಂ.ಅಧ್ಯಕ್ಷ ವಿಜಯಕುಮಾರ್ ಅಂಙಣ, ಮಾಜಿ ಅಧ್ಯಕ್ಷ ಹಾಗೂ ಹಾಲಿ ಉಪಾಧ್ಯಕ್ಷ ಜಯಂತ್ ಬಾಳುಗೋಡು, ಡಾ. ಸೋಮಶೇಖರ ಕಟ್ಟೆಮನೆ, ಗ್ರಾ.ಪಂ.ಸದಸ್ಯರಾದ ಶಿಲ್ಪಾ ಕೊತ್ನಡ್ಕ, ಬಿಂದು ಗುಂಡಿಹಿತ್ಲು, ಚಿದಾನಂದ ಗೌಡ ಉಪ್ಪುಕಳ, ಓಬಯ್ಯ ಕಜೆಗದ್ದೆ, ಕಳಿಗೆ ನಿತ್ಯಾನಂದ, ಅಂಬಾದಾಸ್ ಕೆ.ವಿ., ಧರ್ಮಪಾಲ ಮುಚ್ಚಾರ, ಗುತ್ತಿಗೆದಾರ ರಾಧಾಕೃಷ್ಣ ಕಟ್ಟೆಮನೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.