
ಅಲೆಟ್ಟಿ ಗ್ರಾಮದ ಕುಂಬಕ್ಕೋಡು ಎಂಬಲ್ಲಿ ಮನೆಗೆ ಬೆಂಕಿ ಬಿದ್ದು ಅಪಾರ ಪ್ರಮಾಣದ ಅಡಿಕೆ ಮತ್ತು ರಬ್ಬರ್ ಬೆಂಕಿಗೆ ಆಹುತಿಯಾದ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ಕುಂಬಕ್ಕೋಡಿನ ಕೆ ಅಬ್ದುಲ್ಲ ಎಂಬುವವರ ಮನೆಗೆ ಬೆಂಕಿ ಬಿದ್ದ ಪರಿಣಾಮ ಅಡಿಕೆ ಮತ್ತು ರಬ್ಬರ್ ನಾಶವಾಗಿದೆ. ಇವರು ಮೂಲತಃ ಬಂದಡ್ಕದಲ್ಲಿನ ಮನೆಯಲ್ಲಿ ವಾಸ್ತವ್ಯವಾಗಿದ್ದರು ಎಂದು ಹೇಳಲಾಗುತ್ತಿದ್ದು, ಸದ್ಯ ರಾತ್ರಿ ನೆರೆಹೊರೆಯವರು ಗಮನಿಸಿ ಬೆಂಕಿಯನ್ನು ನಂದಿಸಿರುವುದಾಗಿ ತಿಳಿದುು ಬಂದಿದೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ