

ಇತಿಹಾಸ ಪ್ರಸಿದ್ಧ ಅಜ್ಜಾವರ ಮೇನಾಲ ಮಖಾಂ ಉರೂಸ್ ಹಾಗೂ ಐದು ದಿನಗಳ ಧಾರ್ಮಿಕ ಪ್ರಭಾಷಣ 2024 ಫೆಬ್ರವರಿ 02 ರಿಂದ ಫೆಬ್ರವರಿ 06 ರ ತನಕ ಅದ್ಧೂರಿಯಾಗಿ ಜರಗಿತು.

ಫೆಬ್ರವರಿ 02 ರಂದು ಶುಕ್ರವಾರ ಅಜ್ಞಾವರ ಮುಹಿಯುದ್ದೀನ್ ಜುಮಾ ಮಸೀದಿ ಅಂಗಣದಲ್ಲಿ ಸಭಾ ಕಾರ್ಯಕ್ರಮವನ್ನು ಬಹು:ಸಯ್ಯದ್ ಮೈನುಲ್ ಅಬಿಧೀನ್ ಜೆಫ್ರಿ ತಂಬಳ್ ಬೆಳ್ತಂಗಡಿ ದುಆ ನೇತೃತ್ವ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರ. ನಂತರ ಧಾರ್ಮಿಕ ಮತಪ್ರವಚನ ನಡೆಯಿತು. ಬಹು ಅಬ್ದುಲ್ ಖಾದರ್ ಮುನವ್ವರಿ ಖತೀಬರು ಅಜ್ಜಾವರ, ಉಪನ್ಯಾಸ ನೀಡಿದರು.
ಫೆಬ್ರವರಿ 03ರಂದು ಶನಿವಾರ ಅಜ್ಜಾವರ ಮುಹಿಯುದ್ದೀನ್ ಜುಮಾ ಮಸೀದಿ ಅಂಗಣದಲ್ಲಿ ಸಭಾ ಕಾರ್ಯಕ್ರಮದಲ್ಲಿ ಭಾಷಣಗಾರ ರಿಯಾಝ್ ಫೈಝಿ ಎಮ್ಮೆಮಾಡು ಉಪನ್ಯಾಸ ನೀಡಿದರು.
ಫೆಬ್ರವರಿ 04ರಂದು ಆದಿತ್ಯವಾರ ಮೇನಾಲ ದರ್ಗಾ ಶರೀಫ್ ನಲ್ಲಿ ಮಗ್ರಿಬ್ ನಮಾಜು ಬಳಿಕ ಮಖಾಂ ಅಲಂಕಾರ ನಡೆಯಲಿದೆ. ದಿಕ್ ಹಲ್ಕಾ ನೇತೃತ್ವ ಹಾಗೂ ಉದ್ಘಾಟನೆಯನ್ನು ಅಲ್ ಹಾಜ್ ಸಯ್ಯದ್ ಝನುಲ್ ಅಬಿಧೀನ್ ತಂಬಳ್ ಕುನ್ನುಂಗೈ ನೆರವೇರಿಸಲಿದ್ದಾರೆ. ನಂತರ ಬಹು ಅಬ್ದುಲ್ ರಝಾಕ್ ಅಬ್ ರಾರಿ ಉಪನ್ಯಾಸ ನೀಡಿದರು. ಫೆಬ್ರವರಿ 05 ರಂದು ಸೋಮವಾರ ಮೇನಾಲ ದರ್ಗಾ ಶರೀಫ್ ವಠಾರದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಬಹು ಸಯ್ಯದ್ ಹಕೀಂ ತಂಬಳ್ ಅವರ ಗೌರವ ಉಪಸ್ಥಿತಿಯಲ್ಲಿ ಬಹು ಮಾಹಿನ್ ಮನ್ಸಾನಿ ವೆಂಬಾಯಂ ಉಪನ್ಯಾಸ ನೀಡಿದರು.
ಫೆಬ್ರವರಿ 06 ರಂದು ನಡೆದ ಉರೂಸ್ ಸಮಾರೋಪ ಸಮಾರಂಭಕ್ಕೆ ಮುನ್ನ ಸೌಹಾರ್ದ ಸಂಗಮ ಕಾರ್ಯಕ್ರಮ ನಡೆಯಿತು. ಬಳಿಕ ಸೌಹಾರ್ದ ಸಂಗಮ ಕಾರ್ಯಕ್ರಮವು ಸಂಜೆ 7.00 ಕ್ಕೆ ಪ್ರಾರಂಭಗೊಂಡು ಖತೀಬರಾದ ಬಹು ಅಬ್ದುಲ್ ಖಾದರ್ ಮುನವರಿ ದುವಾ ನೇತೃತ್ವ ವಹಿಸಲಿದ್ದಾರೆ ಅಧ್ಯಕ್ಷತೆಯನ್ನು ದರ್ಗಾ ಶರೀಫ್ ಮುಕೇಸರರಾದ ಎಂ. ಗುಡ್ಡಪ್ಪ ರೈ ವಹಿಸಿದ್ದರು ಕಾರ್ಯಕ್ರಮ ಮುಖ್ಯ ಅತಿಥಿಗಳಾದ ಎಂ.ಬಿ ಸದಾಶಿವ ಮಾತನಾಡಿ ಸೌಹಾರ್ದತೆಯ ನೆಲೆಗಟ್ಟಿನಲ್ಲಿ ನಮ್ಮ ಸಮಾಜ, ದೇಶ ನೆಲೆ ನಿಂತಿದೆ. ಆದುದರಿಂದ ಸೌಹಾರ್ದತೆಯ ಬದುಕನ್ನು ಮುನ್ನಡೆಸುವುದು ಪ್ರತಿಯೊಬ್ಬರ ಕರ್ತವ್ಯ ಅಲ್ಲದೆ ಸೌಹಾರ್ದತೆ ಸಾರುವ ಪುಣ್ಯ ಸ್ಥಳ ಇದಾಗಿದ್ದು ತಲ-ತಲಾಂತರಗಳಿಂದ ಇಲ್ಲಿ ನೆಲೆ ನಿಂತಿರುವ ಸೌಹಾರ್ದತೆ ಸಮಾಜಕ್ಕೆ ಮಾದರಿ ಎಂದು ಅವರು ಹೇಳಿದರು.
ಇಕ್ಬಾಲ್ ಬಾಳಿಲ ಮತನಾಡುತ್ತಾ ನಮ್ಮ ಪ್ರತಿಯೊಂದು ಚರಿತ್ರೆಯಲ್ಲಿಯೂ ಸೌಹಾರ್ದತೆಯ ಸಂದೇಶವನ್ನು ಸಾರುತ್ತಿದೆ ಆದ್ದರಿಂದ ಮನುಷ್ಯನಾದವನು ಸೌಹಾರ್ದತೆಯಿಂದ ಬಾಳಿ ಬದುಕಬೇಕು ಪ್ರತಿಯೊಂದು ಧರ್ಮವೂ ಕೂಡ ಮಾನವೀಯತೆಯನ್ನು ಪ್ರತಿಪಾದಿಸುತ್ತದೆ ಎಂದು ಅವರು ಹೇಳಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಗುಡ್ಡಪ್ಪ ರೈ ಮೇನಾಲ ಮತನಾಡುತ್ತಾ ಇಲ್ಲಿ ಈ ರೀತಿಯಲ್ಲಿ ಸರ್ವ ಧರ್ಮಿಯರು ಸೇರಿ ಮಾಡುವ ಕೆಲಸಗಳಿಂದ ಇಡೀ ನಾಡಿಗೆ ಉತ್ತಮ ಸಂದೇಶ ಅಲ್ಲದೆ ನಾನು ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಿರುವುದು ಸಂತೋಷ ಮೂಡಿದೆ ಎಂದು ಹೇಳಿದರು ಸಮರೋಪ ಸಮಾರಂಭದ ಸ್ವಾಗತವನ್ನು ಶಾಫಿ ದಾರಿಮಿ ಅಜ್ಜಾವರ ನೆರವೇರಿಸಿ ಮುಹಮ್ಮದ್ ರಫೀಕ್ ಅಜ್ಜಾವರ ವಂದಿಸಿ ನಿರೂಪಿಸಿದರು.ನಂತರ ನಡೆದ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಪ್ರಭಾಷಣಗಾರ ಬಹು ಹಾಪಿಳ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಉಪನ್ಯಾಸ ನೀಡಿದರು ಸೌಹಾರ್ದ ಸಂಗಮ ಸಭಾ ವೇದಿಕೆಯಲ್ಲಿ ಹನೀಫ್ ಮೌಲವಿ, ಸುಳ್ಯ ತಾಲೂಕು ಮದ್ರಸಾ ಮ್ಯಾನೇಜ್‌ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್ ಸಂಪಾಜೆ, ಅಜ್ಜಾವರ ಮೇನಾಲ ಜಮಾ ಅತ್ ಕಮಿಟಿ ಅಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಎ, ಉಪಾಧ್ಯಕ್ಷ ಅಂದ ಹಾಜಿ ಪ್ರಗತಿ, ಪ್ರಧಾನ ಕಾರ್ಯದರ್ಶಿ ಶಾಫಿ ಮುಕ್ರಿ, ಖಜಾಂಜಿ ಶರೀಫ್ ರಿಲಾಕ್ಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.