
ವೆಂಕಟ್ ವಳಲಂಬೆಯವರನ್ನು ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷರಾಗಿ ನೇಮಕಗೊಳಿಸಿದ ಬೆನ್ನಲ್ಲೆ ಸುಳ್ಯ ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನದಿಂದಾಗಿ ನಾಯಕರು ಅಸಹಕಾರ ಚಳವಳಿ ನಡೆಸಿ, ಕಚೇರಿಗೆ ಬೀಗ ಜಡಿದಿದ್ದರು ಇಂದು ಬೆಳಗ್ಗೆ ಕಚೇರಿ ಬಾಗಿಲು ತೆರೆಯಲಾಗಿದ್ದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲರು ಸುಳ್ಯಕ್ಕೆ ಬಂದು ಕೋರ್ ಕಮಿಟಿಯವರೊಂದಿಗೆ ಮಾತುಕತೆ ನಡೆಸಲಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ ನಿನ್ನೆಯ ಜಿಲ್ಲಾ ಸಮಿತಿ ಸಭೆಯಲ್ಲಿ ಸುಳ್ಯ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ ಭಾಗವಹಿಸಿದ್ದು ಇಂದು ಸುಳ್ಯಕ್ಕೆ ಜಿಲ್ಲಾಧ್ಯಕ್ಷರು ಆಗಮಿಸಿ ಇತ್ಯರ್ಥ ಪಡಿಸಲಿದ್ದಾರೆ ಎಂದು ಉನ್ನತ ಮೂಲಗಳ ಪ್ರಕಾರ ತಿಳಿದುಬಂದಿದೆ.