ವೆಟರನ್ಸ್ ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ತಮಿಳುನಾಡಿನ ತಿರುನಲ್ವೇಲಿಯ ಅಣ್ಣಾ ಸ್ಟೇಡಿಯಂನಲ್ಲಿ ಫೆಬ್ರವರಿ 2 ರಿಂದ 4ರವರೆಗೆ ನಡೆದ 43ನೇ ರಾಷ್ಟ್ರ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಕಡಬ ತಾಲೂಕಿನ ಬಳ್ಪ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ನೇತ್ರಾವತಿ ಹೊಪ್ಪಾಳೆ ( ಶ್ರೀ ಗಣೇಶ್ ಪೂಜಾರಿ ಹೊಪ್ಪಾಳೆ ಇವರ ಪತ್ನಿ ) ಇವರು 4×400ಮೀ ರಿಲೇಯಲ್ಲಿ ಪ್ರಥಮ, 4×100 ಮೀ ರಿಲೇ, ಲಾಂಗ್ ಜಂಪ್, 100 ಮೀ ಹರ್ಡಲ್ಸ್ ನಲ್ಲಿ ದ್ವಿತೀಯ ಮತ್ತು 100 ಮೀ ಓಟದಲ್ಲಿ ತೃತೀಯ ಸ್ಥಾನ ಗಳಿಸಿ, ಸೆಪ್ಟೆಂಬರ್‌ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
- Tuesday
- December 3rd, 2024