
ಪೆರಾಜೆ:ಶ್ರೀ ಕಾವೇರಿ ಯುವಕ ಮಂಡಲದ ಇದರ ವಾರ್ಷಿಕ ಸಭೆಯು ಅಧ್ಯಕ್ಷ ರಾದ ಶ್ರೀ ದಯಾನಂದ ದೋಳ್ತಿಲ ಇವರ ಅಧ್ಯಕ್ಷತೆಯಲ್ಲಿ ಪೆರುಮುಂಡ ಅಂಗನವಾಡಿ ಕೇಂದ್ರದ ವಠಾರದಲ್ಲಿ ದಿನಾಂಕ 4.2.2024ನೇ ಆದಿತ್ಯವಾರ ನಡೆಯಿತು. ಅಧ್ಯಕ್ಷರಾದ ಶ್ರೀ ದಯಾನಂದ ದೋಳ್ತಿಲ, ಕಾರ್ಯದರ್ಶಿ ಮಂಜುನಾಥ(ಗುಲಾಬಿ), ಖಜಾಂಜಿ ವಿಪಿನ್ ಪೆರಂಗಾಜೆ ಅವರ ಅವಧಿ ಮುಗಿದಿದ್ದು ನೂತನ ಅಧ್ಯಕ್ಷರಾಗಿ ನೋಹಿತ್ ನಿಡ್ಯಮಲೆ,ಕಾರ್ಯದರ್ಶಿಯಾಗಿ ವಿಕೀತ್ ಕೊಳಂಗಾಯ, ಖಜಾಂಜಿ ಯಾಗಿ ದೀಕ್ಷಿತ್ ಪೆರುಮುಂಡ ಅವರನ್ನು ಸರ್ವ ಸದಸ್ಯರ ಸಮ್ಮುಖದಲ್ಲಿ ಆಯ್ಕೆಯಾದರು.
