Ad Widget

ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದ ಕಳಿಯಾಟಮಹೋತ್ಸವ ಹಸಿರು ಕಾಣಿಕೆ ಸಮರ್ಪನಣೆ ಹಿನ್ನಲೆ ಪಾಟಾಳಿ ಯಾನೆ ಗಾಣಿಗ ಸಂಘದ ವತಿಯಿಂದ ವಿಶೇಷ ಸಭೆ – ನೂತನ ಸಂಚಾಲಕರುಗಳ ನೇಮಕ

ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ಕ್ಷೇತ್ರದ ಕಳಿಯಾಟಮಹೋತ್ಸವದ ಅಂಗವಾಗಿ ಸುಳ್ಯ ತಾಲೂಕಿನ ಸಮಾಜ ಬಾಂದವರು ವಿಜ್ರಂಭಣೆಯೊಂದಿಗೆ ಕೊಂಡೊಯ್ಯಲು ಉದ್ದೇಶಿಸಿರುವ ಹಸಿರು ಕಾಣಿಕೆ(ಹೊರೆ ಕಾಣಿಕೆ) ವಿಚಾರವಾಗಿ ಸುಳ್ಯ ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ವತಿಯಿಂದ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಉದ್ದಂತಡ್ಕರವರ ಅಧ್ಯಕ್ಷತೆಯಲ್ಲಿ ಚೆನ್ನಕೇಶವ ದೇವಾಲದಲ್ಲಿ ವಿಶೇಷ ಸಭೆ ಜರುಗಿತು.

. . . . . . . . .

ಸಭೆಯಲ್ಲಿ ಹಸಿರುವಾಣಿ ವ್ಯವಸ್ಥೆಯ ಯಶಸ್ವಿಗಾಗಿ ಸಂಘದ ಜೊತೆ ಕೈಜೋಡಿಸಲು ಕಿರಣ್ ಕುಮಾರ್ ಬಿಳಿಯಾರು ಇವರನ್ನು ಗೌರವ ಸಂಚಾಲಕರಾಗಿ, ಬಾಲಚಂದ್ರ ಅಡ್ಕಾರು PWD ಗುತ್ತಿಗೆದಾರರು ಸುಳ್ಯ ಇವರನ್ನು ಸಂಚಾಲಕರಾಗಿ
ಹಾಗೂ ಪ್ರದೀಪ್ ಪೆರಾಜೆ ನಿರ್ದೇಶಕರು ಕೃ.ಪ.ಸ.ಸಂಘ ಪೆರಾಜೆ ಕೊಡಗು ಇವರನ್ನು ಸಹ ಸಂಚಾಲಕರಾಗಿ ನೇಮಿಸಲಾಯಿತು. ಈ ಸಂದರ್ಭದಲ್ಲಿ ಪಾಟಾಳಿ ಯಾನೆ ಗಾಣಿಗ ಸಂಘದ ಕಾರ್ಯದರ್ಶಿ ಸುರೇಶ್ ಕರ್ಲಪ್ಪಾಡಿ ಹಾಗು ಪ್ರಮುಖರಾದ ಮಹಾಲಿಂಗ ಬಾಜರ್ತೊಟ್ಟಿ,ಚಂದ್ರಶೇಖರ ಪನ್ನೆ , ರಮೇಶ್ ಇರಂತಮಜಲು ವೆಂಕಟ್ರಮಣ ಬೇರ್ಪಡ್ಕ ಮತ್ತು ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರುಗಳು, ಬೈಲುವಾರು ಸಮಿತಿಯ ಸಂಚಾಲಕ ಸಚಿತ್ ಕಲ್ಮಡ್ಕ ಹಾಗೂ ಸಹಸಂಚಾಲಕರು, ಸದಸ್ಯರುಗಳು, ಮಹಿಳಾ ಸಮಿತಿಯ ಸಂಚಾಲಕಿ ಪ್ರೇಮಾ ಚಂದ ಕುಡೆಕಲ್ಲು ಹಾಗೂ ಸಹ ಸಂಚಾಲಕಿ, ಸದಸ್ಯರುಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಾಂಧವರು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading