
ನಮ್ಮ ಸುಳ್ಯ ಮಂಡಲದಲ್ಲಿನ ಕೆಲ ಗೊಂದಲಗಳು ಮತ್ತು ಇಂದಿನ ದಿಢೀರ್ ಸಭೆಯಿಂದ ಪಕ್ಷಕ್ಕೆ ಗೊಂದಲ ಮತ್ತು ಸಮಸ್ಯೆಗಳು ಆಗುವುದಿಲ್ಲ. ಅಲ್ಲದೆ ಈ ಹಿಂದೆಯು ಅಸಹಕಾರ ಚಳುವಳಿ ನಡೆದಿತ್ತು. ನಂತರದ ದಿನಗಳಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಕಾರ್ಯಗಳನ್ನು ಮಾಡಿದ್ದೇವೆ. ಅಲ್ಲದೇ ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಹಿಂದೆ ರಚಿಸಿದ ಪೇಜ್ ಪ್ರಮುಖರು ಮತ್ತು ವಾರ್ಡ್ ಗಳ ಕಾರ್ಯಕರ್ತರು ಇದ್ದಾರೆ. ಇಂದು ಸಭೆ ಸೇರಿದವರ ತೀರ್ಮಾನಕ್ಕೆ ಗೊಂದಲಪಡಬೇಕಾಗಿಲ್ಲ ಅಧ್ಯಕ್ಷರ ವಿರುದ್ದವಾಗಿ ಅಲ್ಲಾ ಇದು ನಮ್ಮ ಪಕ್ಷದಲ್ಲಿ ಎಲ್ಲವೂ ಒಮ್ಮೆ ಹೀಗೆ ಆಗಿ ಮತ್ತೆ ನಾವು ಒಗ್ಗಟ್ಟಾಗಿ ಕೆಲಸ ಕಾರ್ಯಗಳು ಮಾಡುತ್ತೇವೆ ಎಂದು ನಿಯೋಜಿತ ಅಧ್ಯಕ್ಷರಾದ ವೆಂಕಟ್ ವಳಲಂಬೆ ಅಮರ ಸುದ್ದಿಗೆ ಪ್ರತಿಕ್ರಿಯೆ ನೀಡಿದ್ದಾರೆ .
