ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಮತ್ತು ದೈವಗಳ ನೇಮೋತ್ಸವವು ಸಂಪನ್ನಗೊಂಡಿತು.
ಫೆ. ೧ರಂದು ಗಣಪತಿ ಹೋಮ, ಏಕಾದಶ ರುದ್ರಾಭಿಷೇಕ ನವಕ ಕಲಶಾಭಿಷೇಕ, ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಿತು. ಸಂಜೆ ದೈವಗಳ ಭಂಡಾರ ತೆಗೆದ ಬಳಿಕ ಚೆಂಡೆವಾದನ ನಡೆಯಿತು. ರಾತ್ರಿ ದೇವರ ಉತ್ಸವ ಬಲಿ ಹೊರಟು, ವಸಂತ ಕಟ್ಟೆ ಪೂಜೆ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಿತು.
ಫೆ.೨.ರಂದು ಉಳ್ಳಾಕ್ಲು -ಉಳ್ಳಾಲ್ತಿ ನೇಮ, ಕುಮಾರ ದೈವದ ನೇಮ ನಡೆಯಿತು. ಶ್ರೀ ದೇವರಿಗೆ ಪೂಜೆಯ ಬಳಿಕ ರಕ್ತೇಶ್ವರಿ ದೈವದ ನೇಮ, ಧೂಮಾವತಿ ದೈವದ ನೇಮ ನಡೆಯಿತು. ಮಧ್ಯಾಹ್ನ ಮಹಾಪೂಜೆ, ದೈವಗಳ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆದು ಸಂಜೆ ಗುಳಿಗ ಕೋಲ ನಡೆಯಿತು.
ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಕೆ ಬೆಳ್ಯಪ್ಪ ಗೌಡ, ಪ್ರಧಾನ ಅರ್ಚಕ ಪರಮೇಶ್ವರ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳು ಸೇವಾ ಸಮಿತಿ ಸದಸ್ಯರು, ಹಾಗೂ ನೂರಾರು ಭಕ್ತರು ಪಾಲ್ಗೊಂಡಿದ್ದರು.