Ad Widget

ಸುಳ್ಯ ; 1 ಕೋಟಿ 65 ಲಕ್ಷ ರೂ. ವೆಚ್ಚದ ಜಿ.ಪಂ. ಇಂಜಿನಿಯರಿಂಗ್ ಇಲಾಖೆಯ ನೂತನ ಕಟ್ಟಡದ ಗುದ್ದಲಿಪೂಜೆ

ಸುಳ್ಯದ ಜಿ.ಪಂ. ಇಂಜಿನಿಯರಿಂಗ್ ಉಪವಿಭಾಗದ ಹೊಸಕಟ್ಟಡ ನಿರ್ಮಾಣ ಕಾಮಗಾರಿಗೆ ಫೆ.1ರಂದು ಗುದ್ದಲಿಪೂಜೆ ನಡೆಯಿತು.

. . . . . . . . .

1 ಕೋಟಿ 65 ಲಕ್ಷ ರೂ. ವೆಚ್ಚದ ಈ ಕಟ್ಟಡ ಕಾಮಗಾರಿಗೆ ಶಾಸಕಿ ಕು. ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ನೆರವೇರಿಸಿದರು.

ಪುರೋಹಿತ ಆಲಂಗಾರು ಹರೀಶ್ ಭಟ್‌ರವರ ಪೌರೋಹಿತ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿ.ಪಂ. ಇಂಜಿನಿಯರಿಂಗ್ ಉಪವಿಭಾಗದ ಎಇಇ ರುಕ್ಮಾಂಗದರವರು ಅಲ್ಲದೆ, ಇಂಜಿನಿಯರ್‌ಗಳಾದ ಜನಾರ್ದನ, ಮಣಿಕಂಠ ಮತ್ತು ಇಲಾಖೆಯ ಸಿಬ್ಬಂದಿಗಳು ಸುಳ್ಯ ನ.ಪಂ. ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಬೋಧ್ ಶೆಟ್ಟಿ ಮೇನಾಲ ಕಂಟ್ರಾಕ್ಟರ್ ರವಿಪ್ರಸಾದ್ ಕೇರ್ಪಳ ಮತ್ತಿತರರು ಉಪಸ್ಥಿತರಿದ್ದರು.

Related Posts

error: Content is protected !!
ವಾಟ್ಸ್‌ಆಪ್‌ ಗ್ರೂಪ್‌ಗೆ ಸೇರಿ