

ಕೊಲ್ಲಮೊಗ್ರದಲ್ಲಿ ನಡೆಯುವ ಕಾರ್ಯನಿರತ ಪತ್ರಕರ್ತರ ಗ್ರಾಮವಾಸ್ತವ್ಯ ಕಾರ್ಯಕ್ರಮವು ಫೆಬ್ರವರಿ 10 ರಂದು ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಪೂರ್ಣ ಸಹಕಾರ ನೀಡುವುದಾಗಿ ಪುತ್ತೂರು ಎ.ಸಿ. ಜುಬಿನ್ ಮಹಾಪಾತ್ರ ಭರವಸೆ ನೀಡಿದ್ದಾರೆ.

ಫೆ.01 ರಂದು ಸುಳ್ಯ ತಾಲೂಕು ಕಚೇರಿಯಲ್ಲಿ ನಡೆಸಲಾದ ಅಧಿಕಾರಿಗಳ ಸಭೆಯಲ್ಲಿ ಎ.ಸಿ. ಜುಬಿನ್ ಮಹಾಪಾತ್ರ ಮತನಾಡುತ್ತಾ ಸರಕಾರವು ಜನತ ದರ್ಶನ ಹಾಗೂ ಗ್ರಾಮ ವಾಸ್ತವ್ಯ ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿ ನಡೆಯುತ್ತಿದ್ದವು ಅದೇ ಮಾದರಿಯಲ್ಲಿ ಈ ಗ್ರಾಮ ವಾಸ್ತವ್ಯ ನಡೆಯಲಿದೆ ಅಲ್ಲದೇ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಮಸ್ಯೆಗಳನ್ನು ಪರಿಹರಿಸುವ ಕೆಲಸಗಳನ್ನು ಮಾಡಬೇಕು ಅಲ್ಲದೆ ಸುಳ್ಯದ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತಾರೆ ಎಂದು ಮೆಚ್ಚುಗೆಯ ಮಾತುಗಳ ಜೊತೆಗೆ ಪತ್ರಕರ್ತರ ಗ್ರಾಮ ವಾಸ್ತವ್ಯಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ತಹಶೀಲ್ದಾರ್ ಜಿ ಮಂಜುನಾಥ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾದ ನಾಯಕ್ ಇಂದಾಜೆಯವರ ಉಪಸ್ಥಿತಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳಿಗೆ ಕೂಡ ಗ್ರಾಮವಾಸ್ತವ್ಯದ ಯಶಸ್ಸಿಗೆ ಸಹಕರಿಸುವಂತೆ ಅವರು ಸೂಚಿಸಿದರು.
ಸಭೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಪುಷ್ಪರಾಜ ಶೆಟ್ಟಿ, ಕಟ್ಟ ಭಾಸ್ಕರ ರೈ, ಗಂಗಾಧರ ಕಲ್ಲಪಳ್ಳಿ, ಪ್ರಜ್ಞಾ, ದಯಾನಂದ ಕಲ್ನಾರ್ , ತೇಜೇಶ್ವರ್ ಕುಂದಲ್ಪಾಡಿ , ಮಿಥುನ್ ಕರ್ಲಪ್ಪಾಡಿ , ಪದ್ಮನಾಭ ಮುಂಡಕಜೆ , ಹಿರಿಯ ಪತ್ರಕರ್ತರಾದ ಹರೀಶ್ ಬಂಟ್ವಾಳ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.