ಸುಳ್ಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮತ್ತು ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಹಾಗೂ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಜ್ಜಾವರ ಹಾಗೂ ಇತರೆ ಸಂಘ ಸಂಸ್ಥೆಗಳ ಸಹೋಗಯೊಂದಿಗೆ ಅಜ್ಜಾವರ ಶ್ರೀ ಮಹೀಶ ಮರ್ಧಿನಿ ದೇವಾಲದ ಬಳಿಯಲ್ಲಿ ಜರುಗುತ್ತಿರುವ 1753 ನೇ ಮದ್ಯವರ್ಜನ ಶಿಬಿರವು ವಿದ್ಯುಕ್ತವಾಗಿ ಚಾಲನೆ ಗೊಂಡಿದ್ದು ಈ ಶಿಭಿರದಲ್ಲಿ ಶಿಬಿರಾರ್ಥಿಗಳ ಸಂಖ್ಯೆಯಲ್ಲಿ ಈವರ್ಷ ಪರಾಜ್ಯದಲ್ಲಿ ಮೊದಲ ಸ್ಥಾನ ಪಡೆದ ಅಜ್ಜಾವರದ ಮದ್ಯವರ್ಜನ ಶಿಬಿರವು ಶಿಬಿರಾರ್ಥಿಗಳ ಸಂಖ್ಯೆ 130 ಕ್ಕೇರಿದ್ದು ರಾಜ್ಯದಲ್ಲಿ ಈ ಭಾರಿ ಮಾದರಿಯಾಗಿ ಭಾರಿ ಪ್ರಶಂಸೆಗೆ ಪಾತ್ರವಾಗಿದೆ . ಅಲ್ಲದೇ ಸುಮಾರು 70ಕ್ಕು ಹೆಚ್ಚು ಜನರನ್ನು ಸ್ಥಳವಕಾಶ ಮತ್ತು ವ್ಯವಸ್ಥೆಯ ದೃಷ್ಟಿಯಿಂದ ಹಿಂತುರುಗಿ ಕಳುಹಿಸಲಾಗಿದ್ದು ಶಿಭಿರದಲ್ಲಿ ಭಾಗವಹಿದ ಶಿಭಿರಾರ್ಥಿಗಳು ಮದ್ಯ ಮುಕ್ತರಾಗಿ ಸಮಾಜದ ಹೊಸ ಬೆಳಕಾಗಿ ಜವಾಬ್ದಾರಿಯುತ ಪ್ರಜೆಯಾಗಿ ಹೊರಹೊಮ್ಮಲ್ಲಿದ್ದಾರೆ ಎಂಬುವುದು ಸಂತಸದ ವಿಚಾರವಾಗಿದೆ . ಅಲ್ಲದೇ ಮದ್ಯ ಮುಕ್ತ ಸಂಯಮ ಮಂಡಳಿಯ ಈ ಕಾರ್ಯಕ್ರಮ ಮಾದರಿಯಾಗಿ ಹೊರಹೊಮ್ಮಲಿದ್ದು ಇಂತಹ ಅನೇಕ ಕಾರ್ಯಕ್ರಮವು ಶಿವಪ್ರಸಾದ್ ಅಡ್ಪಂಗಾಯರ ನೇತ್ರತ್ವದಲ್ಲಿ ಇನ್ನಷ್ಟು ಇಂತಹ ಅದ್ಬುತ ಕಾರ್ಯಕ್ರಮ ಜರುಗುವಂತಾಗಲಿ ಅಲ್ಲದೇ ಅಣ್ಣಪ್ಪ ಹಾಗೂ ಮಂಜುನಾಥ ಸ್ವಾಮಿಯ ಕೃಪೆಯಿಂದ ಇನ್ನಷ್ಟು ಸಮಾಜವು ಮದ್ಯಮುಕ್ತವಾಗಲಿ ಎನ್ನುವುದು ನಮ್ಮ ಹಾರೈಕೆಯಾಗಿದೆ.
ಯೋಜನಾಧಿಕಾರಿಗಳಿಂದ ಹರ್ಷ !
ಸುಳ್ಯ ತಾಲೂಕಿನಲ್ಲಿ ಮಾದರಿ ಶಿಬಿರವಾಗಲಿದ್ದು ನಾವು ಸುಮಾರು 60-ರಿಂದ 80ರ ನಿರೀಕ್ಷೆಯಲ್ಲಿದ್ದೇವೆವು ಅಲ್ಲದೆ ಅಷ್ಟು ಜನರಿಗೆ ಬೇಕಾಗುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದೇವೆವು ಇಂದು ನಮ್ಮ ನಿರೀಕ್ಷೆ ಮೀರಿ ಸುಮಾರು 200ಕ್ಕು ಅಧಿಕ ಶಿಭಿರಾರ್ಥಿಗಳು ಬಂದಿದ್ದು ಸ್ಥಳ ಮತ್ತು ಔಷಧೀಯ ಪ್ರಮಾಣ ಅನುಗುಣವಾಗಿ ನಾವು ಇದೀಗ 135 ಜನರನ್ನು ಮಾತ್ರ ಒಳ ಪ್ರವೇಶಿಸಿದ್ದು ಉಳಿದವರನ್ನು ನಾವು ಮುಂದಿನ ಶಿಬಿರದಲ್ಲಿ ಭಾಗವಹಿಸುವಂತೆ ಮಾಡುತ್ತೇವೆ ಅಲ್ಲದೇ ಈ ಶಿಬಿರವು ಮಾದರಿಯಾಗಲಿದೆ ಎಂದು ತಮ್ಮ ಹರ್ಷವನ್ನು ಸುಳ್ಯ ಯೋಜಾಧಿಕಾರಿಗಳಾದ ನಾಗೇಶ್ ಪಿ ವ್ಯಕ್ತಪಡಿಸಿದರು. ಮೇಲ್ವಿಚಾರಕಿ ವಿಶಾಲಕ್ಷಿ ಮಾತನಾಡಿ ನಾನು ಅಜ್ಜಾವರ ಗ್ರಾಮಕ್ಕೆ ಬಂದಿರುವುದು ನನ್ನ ಸುಯೋಗ ಅಲ್ಲದೇ ನನ್ನ ಜೊತೆ ಕೆಲಸ ಮಾಡಿದ ಎಲ್ಲಾ ಸೇವಾ ಪ್ರತಿನಿಧಿಗಳು ಮತ್ತು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗು ಧನ್ಯವಾದಗಳು ಅಲ್ಲದೇ ಈ ರೀತಿಯ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಎಲ್ಲೆಡೆ ನಡೆಯಲಿ ಎಂದು ಹಾರೈಸಿದರು.