
ಕೊಡಿಯಾಲಬೈಲು ಜಟ್ಟಿಪಳ್ಳವಾಗಿ ಸುಳ್ಯ ನಗರವನ್ನು ಸಂಪರ್ಕ ಕಲ್ಪಿಸುವ ರಸ್ತೆ ಮಳೆ ಬಂದೋಡನೇ ಚರಂಡಿ ವ್ಯವಸ್ಥೆ ಸರಿ ಇಲ್ಲದೇ ರಸ್ತೆ ಹಾಗೂ ಸೇತುವೆ ಮೇಲೆ ನೀರು ಹರಿಯುವಂತಾಗಿದೆ. ಕೊಡಿಯಾಲಬೈಲು ಸೇತುವೆಯ ಮೇಲ್ಭಾಗದಲ್ಲಿ ಅವೈಜ್ಞಾನಿಕ ವ್ಯವಸ್ಥೆಗಳಿಂದಾಗಿ ಮಳೆ ಸುರಿದ ತಕ್ಷಣವೇ ನೀರು ಶೇಕರಣೆಯಾಗಿ ಹೊಳೆಯಂತಾಗುತ್ತಿದೆ. ಹೊಳೆಗೆ ಸರಿಯಾಗಿ ನೀರು ಹರಿಯದೇ ಸೇತುವೆಯ ಮೇಲೆಯೇ ತುಂಬಿ ನಿಲ್ಲುತ್ತಿದ್ದು ಈ ರಸ್ತೆಯಲ್ಲಿ ಓಡಾಡುವ ಸಾವಿರಾರು ವಿಧ್ಯಾರ್ಥಿಗಳು ಸಾರ್ವಜನಿಕರಿಗೆ ನಡೆದಾಡಲು ಮತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಈ ಸಮಸ್ಯೆ ಗೊತ್ತಿದ್ದರೂ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಇನ್ನದರೂ ಎಚ್ಚೆತ್ತು ಕ್ರಮಕೈಗೊಳ್ಳುತ್ತಾರೆಯೇ ಎಂದು ಕಾದುನೋಡಬೇಕಿದೆ.