
ಸುಳ್ಯದ ಗುತ್ತಿಗಾರಿನ ಆಚಳ್ಳಿಯ ಸಿರಿಯಾಕ್ ಮ್ಯಾಥ್ಯೂ ಎಂಬುವವರ ಮಗ ಸೈಬಿನ್ ಎಂಬಾತ ತನ್ನ ಮೈಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದ್ದು ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು ಹಳೆ ಮನೆಯ ಪಕ್ಕ ಜಮಾವಾಣೆಯಾಗುತ್ತಿದ್ದು ಪೋಲೀಸರು ಸ್ಥಳಕ್ಕೆ ಆಗಮಿಸಿ ಜನರನ್ನು ಚದುರಿಸಿದ್ದು ಯಾವ ಕಾರಣಕ್ಕಾಗಿ ಈತ ಯಾವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುವುದು ತನಿಖೆಯಿಂದ ತಿಳಿದು ಬರಬೇಕಿದ್ದು ಈತ ನಿನ್ನೆ ಗುತ್ತಿಗಾರು ಪೇಟೆಗೆ ಆಗಮಿಸಿ ಎಲ್ಲರ ಜೊತೆ ಲವಲವಿಕೆಯಿಂದ ಮಾತನಾಡಿದ್ದು ಇಂದು ಪೇಟೆಗೆ ಬಂದಿಲ್ಲಾ ಅಲ್ಲದೇ ಈ ಘಟನೆಯು ಹಳೆ ಮನೆಯಲ್ಲಿ ಹಣ್ಣು ಅಡಿಕೆ ಶೇಖರಿಸಿದ್ದ ಕೊಠಡಿಯಲ್ಲಿ ಸುಮಾರು 2:30 ರಿಂದ 3:30 ರ ಒಳಗೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.