ಸುಳ್ಯ ನಗರ ಪಂಚಾಯತ್ ಸಿಬ್ಬಂದಿ ಶಶಿಕಲಾ ಇವರ ಕೊರಳಲ್ಲಿ ಹುಲಿ ಉಗುರಿನ ಮಾದರಿಯ ಒಂದು ಪೆಂಡೆಂಟ್ ಹಾಕಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ನಿನ್ನೆ ತಡ ರಾತ್ರಿಯಿಂದಲು ವೈರಲ್ ಆಗುತ್ತಿದ್ದು ಇಂದು ಈ ಕುರಿತಂತೆ ಮುಂಜಾನೆ ಅಮರ ಸುದ್ದಿ ವರದಿ ಪ್ರಕಟಿಸಿದ ಬೆನ್ನಲ್ಲೆ ಅರಣ್ಯಾಧಿಕಾರಿಗಳಿಗೆ ನಗರ ಪಂಚಾಯತ್ ಸಿಬ್ಬಂದಿ ಶಶಿಕಲಾ ಇವರು ದೂರವಾಣಿ ಕರೆಮಾಡಿ ಅದು ಹುಲಿ ಉಗುರಿನ ಮಾದರಿಯಲ್ಲಿ ಇರುವ ಪೆಂಡೆಂಟ್ ಅದು ಹುಲಿ ಉಗುರು ಅಲ್ಲಾ ಬೇಕಿದ್ದಲ್ಲಿ ಅದನ್ನು ವಿಧಿವಿಜ್ಞಾನ ಇಲಾಖೆಗೆ ಕಳುಹಿಸಲು ಸಿದ್ದವಾಗಿದ್ದೇನೆ ಎಂದು ನಗರ ಪಂಚಾಯತ್ ಸಿಬ್ಬಂದಿ ತಿಳಿಸಿದ್ದಾರೆ ಹಾಗೆಯೇ ಅವರು ನಮಗೆ ತಂದು ಕೊಟ್ಟಲ್ಲಿ ನಾವು ಅದನ್ನು ಪಡೆದುಕೊಂಡು ಕಾನೂನು ರೀತಿಯಲ್ಲಿ ವಿಧಿವಿಜ್ಞಾನ ಕಳುಹಿಸಲಾಗುವುದು ಮತ್ತು ಇದರ ಸತ್ಯಾಸತ್ಯತೆಯನ್ನು ಹುಡುಕಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಮಂಜುನಾಥ್ ದೂರವಾಣಿ ಮೂಲಕ ತಿಳಿಸಿದ್ದಾರೆ.
ತನಿಖೆ ಯಾವ ರೀತಿಯಲ್ಲಿ ಇರಲಿದೆ ಗೊತ್ತಾ ?
ಅರಣ್ಯ ಅಧಿಕಾರಿಗಳು ಪೆಂಡೆಂಟ್ ಗಳನ್ನು ಯಾರ ಬಳಿ ಇದೆ ಅವರಲ್ಲಿ ಮಾಹಿತಿ ಕ್ರೂಢಿಕರಿಸಿ ಆ ಪೆಂಡೆಂಟ್ ಬಗ್ಗೆ ತನಿಖೆ ನಡೆಸುವುದು . ಹುಲಿ ಉಗುರಿನ ಮಾದರಿಯಲ್ಲಿ ಆಭರಣಗಳನ್ನು ಕೆಲವರು ಮಾಡಿಸುತ್ತಿದ್ದು ಅವುಗಳು ಎಲ್ಲವು ಹುಲಿ ಉಗುರುಗಳು ಆಗಿರುವುದಿಲ್ಲಾ ಅಲ್ಲದೇ ಅದೇ ಮಾದರಿಯಲ್ಲಿ ಇದ್ದ ಕೂಡಲೇ ಪ್ರಕರಣ ದಾಖಲಿಸುವುದು ಅಸಾಧ್ಯವಾಗಿದೆ ಈ ಬಗ್ಗೆ ಆ ಪೆಂಡೆಂಟ್ ಗಳನ್ನು ಪರಿಶೀಲನೆ ನಡೆಸಿ ಅದು ಹುಲಿ ಉಗುರು ಎಂದು ಸಾಬೀತು ಆದಲ್ಲಿ ಮಾತ್ರ ಕ್ರಮ ಜರಗಿಸುವುದು ಅಲ್ಲದೇ ಅಧಿಕಾರಿಗಳು ಇಂತಹ ಸಂದರ್ಭಗಳಲ್ಲಿ ಅವರನ್ನು ಕಛೇರಿಗೆ ಕರೆಸಿ ಅಥವಾ ಅಲ್ಲಿಗೆ ತೆರಳಿ ವಶಪಡಿಸಿಕೊಂಡು ತನಿಖೆ ನಡೆಸಬಹುದಾಗಿದೆ ಅಲ್ಲದೇ ಅದು ಯಾವ ರೀತಿಯಲ್ಲಿ ತನಿಖೆ ನಡೆಸಬೇಕು ಎಂಬುವುದು ತನಿಖಾಧಿಕಾರಿಯ ಪರಾಮಾಧಿಕಾರವಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳ ಉನ್ನತ ಮೂಲಗಳಿಂದ ತಿಳಿದು ಬಂದಿದೆ.