
ಅರಂತೋಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಆಚರಿಸಿದ ಶಾಲಾ ಅಭಿವೃಧಿ ಸಮಿತಿಯಿಂದ ಸ್ಪೀಕರ್ ಯು ಟಿ ಖಾದರ್ ರವರನ್ನು ಮಂಗಳೂರಿನಲ್ಲಿ ಭೇಟಿ ಮಾಡಿ ಆಂಗ್ಲ ಮಾಧ್ಯಮ ತರಗತಿ ಮಂಜೂರಾತಿ ಗೊಳಿಸುವ ಬಗ್ಗೆ ಮನವಿ ಸಲ್ಲಿಸಲಾಯಿತು.ಮತ್ತು ಶಾಲೆ ಯನ್ನು ಅಭಿವೃಧಿ ಪಡಿಸುವ ಕುರಿತು ಮನವಿ ನೀಡಿದರು. ಅರಂತೋಡು ಶಾಲೆ ಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಸಹಕಾರ ವನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಶಾಲಾ ಮುಖ್ಯ ಉಪಾಧ್ಯಯ ಗೋಪಾಲ ಕೃಷ್ಣ ಬನ,ಎಸ್ ಡಿ ಎಮ್ ಸಿ ಅಧ್ಯಕ್ಷ ಸುರೇಶ ಉಳುವಾರು,ಹಿರಿಯ ವಿದ್ಯಾರ್ಥಿ ಸಂಘ ಉಪಾಧ್ಯಕ್ಷ ಅಮೀರ್ ಕುಕ್ಕುಂಬಳ,ಎಸ್ ಡಿ ಎಮ್ ಸಿ ಸದಸ್ಯ ಸಂಸುದ್ದಿನ್ ಅರಂತೋಡು ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ರಾಜೀವಿ ಬೆಳ್ಳಾರೆ,ತಾಜುದ್ದೀನ್ ಆರಂತೋಡು ಇದ್ದರು.