Ad Widget

ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನಾಗರಿಕರಿಗೆ ಠಾಣಾ ವತಿಯಿಂದ ಜಾಗೃತಿ ಪ್ರಕಟಣೆ ಪ್ರಕಟ.

ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ಗ್ರಾಮದ ನಾಗರೀಕರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ತಾವುಗಳು ತಮ್ಮಮನೆಯಿಂದ ಹೊರ ಪ್ರದೇಶಗಳಿಗೆ/ಪರ ಊರುಗಳಿಗೆ ತೆರಳುವ ಸಮಯ ಮನೆಗೆ ಲಾಕ್ ಹಾಕಿಕೊಂಡು ತಪ್ಪದೇ ಅಕ್ಕ ಪಕ್ಕದ ಮನೆಗಳಿಗೆ ಮಾಹಿತಿ ನೀಡಿ ತಮ್ಮ ಮನೆಯ ಮೇಲೆ ನಿಗಾ ಇಡುವಂತೆ ತಿಳಿಸಿ ಹೊರಡುವುದು ಹಾಗೂ ಮನೆಯ ಬಾಗಿಲುಗಳಿಗೆ ಬೀಗವನ್ನು ಹಾಕದೇ door locker ಗಳನ್ನು ಅಳವಡಿಸಿಕೊಳ್ಳುವುದು. ತಾವು ಮನೆ ಬಿಟ್ಟು ಹೊರಡುವ ಸಮಯ ತಾವು ಮನೆಯನ್ನು ಬಿಟ್ಟು ಹೊರಡುತ್ತಿರುವ ಬಗ್ಗೆ ತಮ್ಮ ತಮ್ಮ ಗ್ರಾಮದ ಬೀಟ್ ಪೊಲೀಸ್ ಅಥವಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ತೆರಳುವುದು. ಹೊರಡುವ ಮುಂಚೆ ಪ್ರತಿದಿನ ಮನೆಗೆ ಹಾಕಲಾಗುವ ಪತ್ರಿಕೆ, ಹಾಲು, ಕರೆಂಟ್ ಬಿಲ್,ಕೋರಿಯರ್ ಇತ್ಯಾದಿಗಳನ್ನು ತಾವು ವಾಪಾಸ್ ಬರುವವರೆಗೆ ಹಾಕದಂತೆ ತಿಳಿಸುವುದು. ತಪ್ಪದೇ ಚಿನ್ನ, ಒಡವೆಗಳನ್ನು ಅಗತ್ಯಕ್ಕಿಂತ ಹೆಚ್ಚು ಮನೆಯಲ್ಲಿ ಇಟ್ಟುಕೊಳ್ಳದೆ ಬ್ಯಾಂಕ್ ಲಾಕರ್ ಗಳಲ್ಲಿ ಇಡುವಂತೆ ಕೋರಿಕೆ.ಯಾರಾದರೂ ತಮ್ಮ ಗ್ರಾಮಗಳಲ್ಲಿ ಅಪರಿಚಿತ /ಅನುಮಾನಾಸ್ಪದ ವ್ಯಕ್ತಿಗಳು ಕಂಡುಬoದರೆ ಕೂಡಲೇ ಬೀಟ್ ಪೊಲೀಸ್ ರಿಗಾಗಲಿ ಅಥವಾ ತುರ್ತು ಕರೆ 112 ನಂಬರ್ ಗಾಗಲಿ ಕೂಡಲೇ ಕರೆಮಾಡಿ ತಿಳಿಸುವುದು.ರಾತ್ರಿ ವೇಳೆ ಮನೆಯ ಸುತ್ತ ಮುತ್ತ ಸಾಕಷ್ಟು ವಿದ್ಯುತ್ ಬೆಳಕು ಇರುವಂತೆ ನೋಡಿಕೊಳ್ಳುವುದು. ಮನೆಯ ಸುತ್ತ ಮುತ್ತ CCTV ಕ್ಯಾಮರಾ ಗಳನ್ನು ಅಳವಡಿಸಿಕೊಳ್ಳುವುದು. ಇತರೆ ಅಗತ್ಯ ಕ್ರಮಗಳನ್ನು ಕೈಗೊಂಡು ಯಾವುದೇ ರೀತಿಯ ಕಳ್ಳತನ ಆಗದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲು ಸುಳ್ಯ ಪೊಲೀಸ್ ಠಾಣೆ /ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿ ಸಹಕರಿಸುವಂತೆ ಠಾಣಾ ವ್ಯಾಪ್ತಿಯ ಎಲ್ಲಾ ಗ್ರಾಮದ ನಾಗರೀಕರಲ್ಲಿ ವಿನಂತಿಸಲಾಗಿದ್ದು ಈ ಕುರಿತಾಗಿ ಪತ್ರಿಕಾ ಪ್ರಕಟಣೆ ಯಲ್ಲಿ ಪೊಲೀಸ್ ಉಪ ನಿರೀಕ್ಷಕರು ಮತ್ತು ಸಿಬ್ಬಂದಿವರ್ಗ ಸುಳ್ಯ ಪೊಲೀಸ್ ಠಾಣೆ ತಿಳಿಸಿದ್ದಾರೆ.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!