Ad Widget

ಅ.26, 27 ರಂದು ತಾಲೂಕು ಪ್ರಾಥಮಿಕ, ಪ್ರೌಢಶಾಲಾ ವಿಭಾಗದ ತಾಲೂಕು ಮಟ್ಟದ ಕ್ರೀಡಾಕೂಟ,ಕ್ರೀಡಾ ವಿಕ್ರಮ-2023 -ರೆ.ಫಾ.ವಿಕ್ಟರ್ ಡಿಸೋಜಾ

ಕೊಡಿಯಾಲಬೈಲ್ ಎಂ.ಜಿ.ಎಂ. ಶಾಲಾ ಮೈದಾನದಲ್ಲಿ ಕ್ರೀಡಾಕೂಟವು -ಸೈಂಟ್ ಜೋಸೆಫ್ – ಸೈಂಟ್ ಬ್ರಿಜಿಡ್ಸ್ ವಿದ್ಯಾಸಂಸ್ಥೆಗಳ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ ಮತ್ತು
ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆಗಳು ಸುಳ್ಯ ಹಾಗೂ ಸೈಂಟ್ ಬ್ರಿಜಿಡ್ಜ್ ಅನುದಾನಿತ ಹಿ. ಪ್ರಾ. ಶಾಲೆ ಸುಳ್ಯ ಇವರ ಸಹಯೋಗದಲ್ಲಿ
ಸುಳ್ಯ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟ ಕ್ರೀಡಾ ವಿಕ್ರಮ – 2023
ಅ.26 ಮತ್ತು 27 ರಂದು ಸುಳ್ಯದ ಕೊಡಿಯಾಲಬೈಲಿನ ಮಹಾತ್ಮಗಾಂಧಿ ಮಲ್ನಾಡ್ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸೈಂಟ್ ‌ಜೋಸೆಫ್ ವಿದ್ಯಾಸಂಸ್ಥೆ ಸಂಚಾಲಕ ರೆ.ಫಾ.ವಿಕ್ಟರ್ ಡಿಸೋಜಾ ಹೇಳಿದರು.

. . . . . . .

ಅವರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಾರ್ಯಕ್ರಮದ ವಿವರ ನೀಡುತ್ತಾ ಅ.26 ರಂದು ಶಾಸಕಿ ಭಾಗೀರಥಿ ಮುರುಳ್ಯ ಕ್ರೀಡಾಕೂಟ ಉದ್ಘಾಟಿಸುವರು ಉಬರಡ್ಕ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಸೂಂತೋಡು ಗೌರವ ವಂದನೆ ಸ್ವೀಕರಿಸಲಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ಮಂಗಳೂರು ಕಥೋಲಿಕ್ ಶಿಕ್ಷಣ ಮಂಡಳಿ ಕಾರ್ಯದರ್ಶಿ ರೆl ಫಾ| ಆ್ಯಂಟನಿ ಮೈಕಲ್ ಸೆರಾ ವಹಿಸಲಿದ್ದಾರೆ ,ಧ್ವಜಾರೋಹಣವನ್ನು ಸೈಂಟ್ ಜೋಸೆಫ್ – ಸೈಂಟ್ ಬ್ರಿಜಿಡ್ಸ್ ಸಂಸ್ಥೆ ಸಂಚಾಲಕ ರೆ| ಫಾ| ವಿಕ್ಟರ್ ಡಿ’ಸೋಜ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಅಲ್ಲದೇ ವಿಶೇಷವಾಗಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಲಕ್ಷ್ಮೀಶ ರೈ ರೆಂಜಾಳ ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳು,ಸಂಶೀರ್ ಜಯನಗರ ಅಂತರಾಷ್ಟ್ರೀಯ ಕ್ರೀಡಾಪಟು, ಆದರ್ಶ ಎಸ್‌.ಪಿ. ರಾಷ್ಟ್ರೀಯ ಕ್ರೀಡಾಪಟು, ಬ್ರಯಾನ್ ರಾಲ್ ಸ್ಟನ್ ಗೋವಿಯಸ್ ರಾಷ್ಟ್ರೀಯ ಚೆಸ್ ಪಟು ಇವರುಗಳನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಹೇಳಿದರು.

ಸಮಾರೋಪ : ಅ. 27ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಅಧ್ಯಕ್ಷತೆಯನ್ನು
ರೆlಫಾ| ಲೋರೆನ್ಸ್ ಮಸ್ಕರೇನಸ್ ವಲಯ ಶ್ರೇಷ್ಠ ಧರ್ಮಗುರುಗಳು, ಪುತ್ತೂರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಲವು ಮಂದಿ ಗಣ್ಯರು‌ ಭಾಗವಹಿಸಲಿದ್ದಾರೆ. ಎರಡು ದಿನಗಳ ಕ್ರೀಡಾಕೂಟದಲ್ಲಿ ತಾಲೂಕಿನ 900 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. 80 ಮಂದಿ ತೀರ್ಪು ಗಾರರು‌ ಆಗಮಿಸಲಿದ್ದಾರೆ.‌ ಎರಡು ದಿನದಲ್ಲಿ 5 ರಿಂದ 6 ಸಾವಿರ ಮಂದಿ‌ ಭಾಗವಹಿಸಲಿದ್ದು ಎಲ್ಲರಿಗೂ ಊಟದ ವ್ಯವಸ್ಥೆ ‌ಮಾಡಲಾಗಿದೆ ಎಂದು ವಿವರ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಸೈಂಟ್ ಜೋಸೆಫ್ ಪ್ರಾ.ಶಾಲೆ ಪೋಷಕ ಸಮಿತಿ ಅಧ್ಯಕ್ಷ ಜೆ.ಕೆ.ರೈ, ಮುಖ್ಯೋಪಾಧ್ಯಾಯಿನಿ ಬಿನೋಮಾ, ಸೈಂಟ್ ಬ್ರಿಜಿಡ್ಸ್ ದೈ.ಶಿ.ಶಿಕ್ಷಕ ಉಮೇಶ್, ಸೈಂಟ್ ಜೋಸೆಫ್ ‌ದೈ.ಶಿ.ಶಿಕ್ಷಕ ಕೊರಗಪ್ಪ, ಸುಳ್ಯ ಸೈಂಟ್ ಬ್ರಿಜಿಡ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ನವೀನ್ ಮಚಾದೋ ಉಪಸ್ಥಿತರಿದ್ದರು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!