ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಕಾರು ಅತೀ ವೇಗದ ಚಾಲನೆಯಿಂದಾಗಿ ಅಡ್ಕಾರು ನ್ಯಾಯಬೆಲೆ ಅಂಗಡಿಯ ಮುಂಭಾಗದ ಬಳಿ ಮುಖ್ಯರಸ್ತೆ ದಾಟುತ್ತಿದ್ದ ದನಕ್ಕೆ ಢಿಕ್ಕಿ ಹೊಡೆದು ದನ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಕಾರು ಅಪಘಾತವೆಸಗಿ ಚಾಲಕ ನಿಲ್ಲಿಸದೇ ಪರಾರಿಯಾಗಿದ್ದು, ಢಿಕ್ಕಿ ಹೊಡೆದ ರಭಸಕ್ಕೆ ದನ ಸ್ಥಳದಲ್ಲೇ ಬಿದ್ದಿತು ವಿಚಾರ ತಿಳಿದು ಸ್ಥಳಕ್ಕೆ ತೆರಳಿದ ಪಶು ವೈದ್ಯಕೀಯ ಆ್ಯಬುಲೆನ್ಸ್ ಪರೀಕ್ಷಿಸಿದಾಗ ದನವು ಸತ್ತಿರುವುದಾಗಿ ತಿಳಿಸಿದ್ದಾರೆ ದನವು ಅಡ್ಕಾರ್ ನ ನಾರಾಯಣ ಎಂಬುವವರ ದನ ಎಂದು ತಿಳಿದು ಬಂದಿದೆ.