ಸುಬ್ರಹ್ಮಣ್ಯ: ಸೇವಾ ಕೈಂಕರ್ಯವೆಂಬ ಶ್ರೇಷ್ಠ ಮನೋಭಾವನೆ ಯುವ ಜನಾಂಗದಲ್ಲಿ ಅನುರಣಿತವಾಗಲು ಎನ್ನೆಸ್ಸೆಸ್ ರಹದಾರಿ. ಯುವ ವಿದ್ಯಾರ್ಥಿಗಳ ಭವಿಷ್ಯದ ಕನಸುಗಳನ್ನು ಈಡೇರಿಸುವ ಶಕ್ತಿ ರಾಷ್ಟ್ರೀಯ ಸೇವಾ ಯೋಜನೆಯಾಗಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಇದು ರಹದಾರಿ. ಸೇವೆಯು ಬದುಕಿನ ಅವಿಭಾಜ್ಯ ಅಂಗ ಎಂಬ ಪಾಠವನ್ನು ವಿದ್ಯಾರ್ಥಿ ಯುವ ಜನಾಂಗಕ್ಕೆ ಬೋಧಿಸುವ ಅನನ್ಯ ಕಾರ್ಯವನ್ನು ಎನ್‌ಎಸ್‌ಎಸ್ ನೆರವೇರಿಸುತ್ತಾ ಬಂದಿದೆ.ಬದುಕನ್ನು ಕಟ್ಟಿಕೊಳ್ಳಲು ಯೋಜನೆ ಬುನಾದಿಯಾಗುತ್ತದೆ.ಅರ್ಪಣಾ ಮನೋಭಾವನೆಯಿಂದ ಸೇವಾ ಕೈಂಕರ್ಯವನ್ನು ನೆರವೇರಿಸಲು ರಾಷ್ಟೀಯ ಸೇವಾ ಯೋಜನೆ ನೀಡುವ ಜ್ಞಾನ ಅತ್ಯವಶ್ಯಕ ಎಂದು ಉಪ್ಪಿನಂಗಡಿ ಸರಕಾರಿ ಪ್ರಥಮ ದೆರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ಹೇಳಿದರು.
ಕೈಕಂಬ ಉನ್ನತೀಕರಿಸಿದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ವಾರ ನಡೆಯುವ ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನ ರಾಷ್ಟೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಮನಶುದ್ಧಿ ಮತ್ತು ಮನಸಿನ ಒಳಗಿರುವ ಕತ್ತಲೆಯನ್ನು ನಿವಾರಿಸಲು ರಾಷ್ಟೀಯ ಸೇವಾ ಯೋಜನೆಯಲ್ಲಿ ಭಾಗವಹಿಸುವುದು ಪ್ರಧಾನ.ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಶ್ರೇಷ್ಠ ಮನೋಭಾವನೆ ಅನುರಣಿತವಾಗಲು ಎನ್ನೆಸ್ಸೆಸ್ ಪ್ರಧಾನ ಎಂದರು.
ಬಿಳಿನೆಲೆ ಗ್ರಾ.ಪಂ.ಅಧ್ಯಕ್ಷೆ ಶಾರದಾ ದಿನೇಶ್ ಧ್ವಜಾರೋಹಣ ನೆರವೇರಿಸಿದರು. ಶಿಬಿರವನ್ನು ಕೈಕಂಬ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮೋಹನ್ ಕಳಿಗೆ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್ ವಹಿಸಿದ್ದರು.ಕೈಕಂಬ ಶಾಲಾ ಮುಖ್ಯಗುರು ಪವಿತ್ರ.ಎ, ಗ್ರಾ.ಪಂ.ಸದಸ್ಯೆ ಭವ್ಯಾ ಕುಕ್ಕಾಜೆ, ಬಿಳಿನೆಲೆ ಗ್ರಾಮದ ಗ್ರಾಮ ಲೆಕ್ಕಿಗರಾದ ಶ್ರುತಿ, ಎಸ್‌ಎಸ್‌ಪಿಯು ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ರಾಜೇಶ್ ಮಾವನಕಟ್ಟೆ ಮುಖ್ಯಅತಿಥಿಗಳಾಗಿದ್ದರು. ಎನ್ನೆಸ್ಸೆಸ್ ಯೋಜನಾಧಿಕಾರಿಗಳಾದ ಸೌಮ್ಯಾ ದಿನೇಶ್, ಭವ್ಯಶ್ರೀ ಹರೀಶ್ ಕುಲ್ಕುಂದ, ಘಟಕದ ನಾಯಕರುಗಳಾದ ಪವನ್ ಮತ್ತು ಕಾವ್ಯ ವೇದಿಕೆಯಲ್ಲಿದ್ದರು.ಸೌಮ್ಯಾ ದಿನೇಶ್ ಸ್ವಾಗತಿಸಿದರು. ಉಪನ್ಯಾಸಕಿ ಸವಿತಾ ಕೈಲಾಸ್ ವಂದಿಸಿದರು.
- Thursday
- November 21st, 2024