Ad Widget

ಕೆವಿಜಿ ಕುಟುಂಬಕ್ಕೆ ಹುಳಿ ಹಿಂಡುತ್ತಿರುವ ಶುಕುನಿ ಯಾರು? ಇಲ್ಲಿದೆ ವೈರಲ್ ಆಗಿರುವ ವರದಿ

ಕೆವಿಜಿ ಕುಟುಂಬದ ಸಹೋದರರ ಮಧ್ಯೆ ಶಕುನಿಯೊಬ್ಬ ವಿಷ ಬೀಜ ಬಿತ್ತಿ ಪೋಷಿಸುತ್ತಿದ್ದು, ಊರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ವರದಿಯೊಂದು ವೈರಲ್ ಆಗಿದ್ದು, ಇದು ಸತ್ಯವೇ ಆಗಿದ್ದಲ್ಲಿ ವಿದ್ಯಾರ್ಥಿ ಸಮೂಹ, ಸಿಬ್ಬಂದಿಗಳು ಹಾಗೂ ಕುರುಂಜಿ ಅಭಿಮಾನಿಗಳು ಆ ಶಕುನಿಯನ್ನು ಪತ್ತೆಹಚ್ಚಿ ಹೊರಗಟ್ಟಲು ಹೋರಾಟ ಮಾಡಬೇಕಾಗಿದೆ. ಈ ಬಗ್ಗೆ ವೈರಲ್ ಆಗಿರುವ ಬರಹವನ್ನು ಯಥವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ.
ದಕ್ಷಿಣಕನ್ನಡ ಜಿಲ್ಲೆಯ ಸಮಸ್ತ ಜನರಿಗೆ ನನ್ನ ಪ್ರೀತಿ ಪೂರ್ವಕ ನಮಸ್ಕಾರಗಳು.
ಮಹಾಭಾರತದಲ್ಲಿನ ಅತ್ಯಂತ ಕುತೂಹಲಕಾರಿ ಪಾತ್ರಗಳಲ್ಲಿ ‘ಶಕುನಿ’ ಪಾತ್ರ ಕೂಡ ಒಂದು.
ಇಂದಿಗೂ ಕೂಡ ಜನರು ಶಕುನಿಯನ್ನು ದೂಷಿಸುತ್ತಾ ರೆ.ಮೋಸ ಮಾಡುವ ಮನೋಭಾವದ ಜನರನ್ನು, ಕುತಂತ್ರ
ಬುದ್ದಿಯುಳ್ಳವರನ್ನು ನೋಡಿದಾಗಲೆಲ್ಲ ಅವರನ್ನು ಆಡುಮಾತಿನಲ್ಲಿ ಅವನೊಬ್ಬ ಶಕುನಿ ಎಂದು ಹೇಳುವುದು ಸರ್ವೇಸಾಮಾನ್ಯ . ಅಂತಹ ಕಲಿಯುಗ ಶಕುನಿಯೊಬ್ಬ ನಮ್ಮ ನಿಮ್ಮೆಲ್ಲರ ಅಮರ ಸುಳ್ಯದ ನಮ್ಮ ಹೆಮ್ಮೆಯ ದಿವಂಗತ ಅಮರ ಶಿಲ್ಪಿ ಕುರುಂಜಿ ಡಾ l ವೆಂಕಟ್ರಮಣ ಗೌಡರವರು ಕಷ್ಟ ಪಟ್ಟು ಸ್ಥಾಪಿಸಿದ ವಿದ್ಯಾಸಂಸ್ಥೆಯಲ್ಲಿ ಬ್ರಹದಾಕರದ ವಿಷಜಂತುವೊಂದು ತನ್ನ ಮೋಸದ ವಿಷವನ್ನು ಕಾರುತ್ತ ಜನರಿಗೆ ಮಂಕುಬೂದಿ ಏರೆಚುತಿದ್ದಾನೆ.ಇದು ಇವತ್ತು ನಿನ್ನೆಯಿಂದ ಅಲ್ಲ ಆದರೆ ಇಂದಿನ ದಿನಗಳಲ್ಲಿ ಸ್ಪಷ್ಟವಾಗಿ ಜನರಿಗೆ ಮನವರಿಕೆಯಾಗಿದೆ ಎಂಬುದು ನನ್ನ ಆಶಯ.ನಿನ್ನೆ ಮೊನ್ನೆಯಷ್ಟೇ ನಮ್ಮ ಶ್ರೀಯುತ ದಿವಂಗತ ಕೆವಿಜಿ ಯವರ, ಎರಡನೇ ಪುತ್ರರಾದ ಡಾಕ್ಟರ್ ರೇಣುಕಾ ಪ್ರಸಾದ್ ಅವರು ತಿಳಿದೋ ತಿಳಿಯದೆಯೋ ಮಾಡಿದ ತಪ್ಪಿಗಾಗಿ ಜೈಲುಶಿಕ್ಷೆ ಗೆ ಗುರಿಯಾಗಿದ್ದಾರೆ.ಅದು ನಮಗೆಲ್ಲರಿಗೂ ಸಹಿಸಲಾಗದ ನೋವನ್ನು ಉಂಟುಮಾಡಿದೆ . ಸುಳ್ಯ ಪುತ್ತೂರು ಪರಿಸರದ ಜನರು ಈಗಲೂ ಹೇಳುತ್ತಿರುವುದು ದಿವಂಗತ ಶ್ರೀ ಕೆವಿಜಿಯವರ ಪುತ್ರರಾದ ಡಾಕ್ಟರ್.ಚಿದಾನಂದ ಹಾಗೂ ಡಾಕ್ಟರ್ ರೇಣುಕಾ ಪ್ರಸಾದ್ ರವರು ಒಗ್ಗಟ್ಟಿನಲ್ಲಿ ಇರುತ್ತಿದ್ದರೆ ಈ ರೀತಿಯ ಕೆಟ್ಟ ಪರಿಸ್ಥಿತಿ ನಮ್ಮಕುರುಂಜಿ ಸಂಸಾರಕ್ಕೆ ಬರುತ್ತಿರಲಿಲ್ಲ.ಇವರಿಬ್ಬರ ನಡುವೆ ಹುಳಿ ಹಿಂಡಿ ವೈರತ್ವ ಬೆಳೆಸಿ ತನ್ನ ಬೇಳೆ ಬೇಯಿಸುತ್ತಿರುವ ಶಕುನಿಗೆ ಸುಳ್ಯದ ಯೋಗ್ಯ ಜನತೆಯ ದಿಕ್ಕಾರ. ನಿನ್ನೆ ನಡೆದ ಡಿಡೀರ್ ಬೆಳವಣಿಗೆಯಲ್ಲಿ ಕೆವಿಜಿ ಎಜುಕೇಷನ್ ಅಕಾಡಮಿ ಅಧ್ಯಕ್ಷರಾದ ಡಾಕ್ಟರ್.ಚಿದಾನಂದ ಕುರುಂಜಿ ಹಾಗೂ ಕೆ ಸಿ ಅಕ್ಷಯ ಕುರುಂಜಿ ಇವರ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ,ಯಾವುದೇ ಕಾನೂನಿನ ಗಂಧ ಗಾಳಿ ಗೊತ್ತಿಲ್ಲದೆ ಅಥವಾ ಜನರ ಕಣ್ಣಿಗೆ ಮಣ್ಣೆರಚಲು
ಶಕುನಿಯ ಜೊತೆಗೂಡಿ ಕೆಲವೊಂದು ಜನ ಪ್ರಯತ್ನ ಪಟ್ಟಿರುವುದು ನಮಗೆ ಕಂಡು ಬಂದಿದೆ,ನಿನ್ನೆ ಅಕಾಡಮಿ ಅದ್ಯಕ್ಷರು ತೆಗೆದುಕೊಂಡ ನಿರ್ಧಾರ ಸರಿಯಾಗಿ ಯೇ ಇದೆ. ಅವರು ಏಷ್ಟೋ ಜನರ ಬಾಳಿನ ಬೆಳಕಾದ ವೈದ್ಯರು ( ವೈದ್ಯೋ ನಾರಾಯಣೋ ಹರೀ) ಇಂತಹ ಪರಿಸ್ಥಿಯಲ್ಲಿ ತನ್ನ ಒಡ ಹುಟ್ಟಿದ ತಮ್ಮ ತಮ್ಮನ ಸಂಸಾರಕ್ಕೆ ಕೆಡುಕು ಬಯಸ ಬಹುದೇ? ನೀವೇ ಯೋಚನೆ ಮಾಡಿ !,ಅಲ್ಲದೆ ವಿದ್ಯಾ ಸಂಸ್ಥೆ ಗಳು ಕೆವಿಜಿ ಅಕಾಡಮಿ ಯ ಅಧೀನ ದಲ್ಲಿ ಇರುವ ಕಾರಣ ಅದರ ಅಧ್ಯಕ್ಷ ರು,ಉಪಾಧ್ಯಕ್ಷರು ,ನಿರ್ದೇಶಕರು, ಯಾವ ಸಂಸ್ಥೆಗಳಿಗೆ ಯಾವಾಗ ಬೇಕಾದರೂ ಹೋಗುವ ಸಂಪೂರ್ಣ ಅಧಿಕಾರ ಇದೆ .ಆದರೂ ಇಷ್ಟು ದಿನ ಕೆವಿಜಿ ಅಕಾಡಮಿ ಅದ್ಯಕ್ಷರು ತನ್ನ ತಮ್ಮ ರೇಣುಕಾ ಪ್ರಸಾದ್ ಮೇಲೆ ಇದ್ದ ಪ್ರೀತಿಯ ಕಾರಣ ತುಂಬಾ ತಾಳ್ಮೆಯಿಂದ ವ್ಯವಹರಸಿದ್ದಾರೆ ಎಸ್ಟೋ ಸಲ ಮೀಟಿಂಗ್ ನೋಟಿಸ್ ಕೂಡ ಕಳಿಸಿದ್ದರು .ಶಕುನಿ ತನ್ನ ಕಪಿ ಮುಷ್ಠಿಯಲ್ಲಿ ಡಾಕ್ಟರ್ ರೇಣುಕಾ ಪ್ರಸಾದ್ ಹಾಗೂ ಸಂಸ್ಥೆ ಗಳ ಮುಖ್ಯಸ್ಥರನ್ನು ಹಿಡಿದಿಟ್ಟಿರುವ ಕಾರಣ ಯಾರಿಗೂ ಹೋಗಲು ಅವಕಾಶ ಕೊಡುತ್ತಿರಲಿಲ್ಲ. ಆದರೂ ಅಧ್ಯಕ್ಷರ ತಾಳ್ಮೆ ಗೆ ನನ್ನದೊಂದು ಸಲಾಂ.ಈಗಿನ ಪರಿಸ್ಥಿತಿಯಲ್ಲಿ ಅದ್ಯಕ್ಷರು ತಮ್ಮ ತಮ್ಮನ ಸಂಸಾರ , ಕೆವಿಜಿ ಸಂಸ್ಥೆಗಳು ಹಾಗೂ ಅಲ್ಲಿನ ಉದ್ಯೋಗಿಗಳ ಹಿತದೃಷ್ಟಿ ಇಂದ ತೆಗೆದು ಕೊಂಡ ನಿರ್ಧಾರ ಕಾನೂನಿನ ಚೌಕಟ್ಟಿನಲ್ಲಿ ಸರಿಯಾಗಿದೆ. ತಂದೆಯ ಕಾಲ ನಂತರ ಮಕ್ಕಳಲ್ಲಿ ಒಬ್ಬರಿಗೆ ತೊಂದರೆ ಆದಾಗ ಹಿರಿಯ ಮಗನಾಗಿ ತಮ್ಮನ ಸಂಸಾರದ ಹೊಣೆಹೊತ್ತುಕೊಳ್ಳುವದು ನಮ್ಮ ಭಾರತೀಯ ಸಂಸ್ಕೃತಿಯ ಪರಂಪರೆ ಎಂದರೆ ತಪ್ಪಾಗಲಾರದು.ಇಂತಹ ಪರಿಸ್ಥಿತಿಯಲ್ಲಿ ಕೆವಿಜಿ ಸಂಸಾರವನ್ನು ಒಡೆದು, ಹರಿದು ,ಹಂಚಿ ತಿನ್ನಲು ಒಬ್ಬ ಶಕುನಿ ಅವನ ಜೊತೆ ಕೆಲವು ರಣಹದ್ದು ಗಳು ಹಾಗೂ ತಿಂದ ಮನೆಗೆ ದ್ರೋಹ ಬಗೆಯುತ್ತಿರುವ ಕೆಲವು ಸಂಗ ಸಂಸ್ಥೆಗಳ ಪ್ರಮುಖರು ಮಾಡುತ್ತಿರುವ ಷಡ್ಯಂತ್ರ ಒಂದೇ ಎರಡೇ ,ಇಂಥ ನಯವಂಚಕರು
ಶಕುನಿಯು ಕೆವಿಜಿ ಸಂಸ್ಥೆಗಳಿಂದ ಕೊಳ್ಳೆಹೊಡೆದು ಅದೆಷ್ಟೋ ಹಣ, ಆಸ್ತಿ ,ಬೆಲೆಬಾಳುವ ಉಡುಗೊರೆಗಳ ಆಸೆಗೆ ಮಣಿದು ನ್ಯಾಯಕ್ಕೆ ವಿರುದ್ದವಾಗಿ ಹೋರಾಡುತ್ತಿದ್ದಾರೆ, ಇಷ್ಟೇ ಅಲ್ಲ ಅಮರ ಶಿಲ್ಪಿ ಕಷ್ಟ ಪಟ್ಟು ಕಟ್ಟಿದ ವಿದ್ಯಾಮಂದಿರ ಗಳಲ್ಲಿ ಶಕುನಿಯ ಅದೆಷ್ಟೋ ಅನೈತಿಕ ವ್ಯವಹಾರಗಳು, ಎಸ್ಟೊಂದು ಬಡ ಉದ್ಯೋಗಿಗಳು ಅವನ ಕಪಿಮುಷ್ಟಿಯಲ್ಲಿ ಬಂಧಿಯಾಗಿ ವಿಲಿ ವಿಲಿ ಒದ್ದಾಡುತ್ತಿದ್ದಾರೆ ಅವನು ಕೆವಿಜಿ ಸಂಸ್ಥೆಇಂದ ಕೊಳ್ಳೆ ಹೊಡೆದು(ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ)ಬಡ ಮಹಿಳಾ ಉದ್ಯೋಗಿಗಳಿಗೆ ಹಣದ ಆಮಿಷ ಒಡ್ಡಿ , ಉ ದ್ಯೋಗದಲ್ಲಿ ಬಡ್ತಿಯ ಆಮಿಷ ಒಡ್ಡಿ ಮಾನ ಹರಣಮಾಡುತಿದ್ದಾನೆ.
ಒಬ್ಬ ನೀಚ ಕೀಚಕ, ರಾವಣನಂತಹ ನರ ರಾಕ್ಷಸ ಇರುವಂತದ್ದು ಎಲ್ಲರ ಗಮನಕ್ಕೆ ಬಂದಿದೆ ಆದರೂ ಕೆಲವು ಪಕ್ಷದ ಮುಖಂಡರು ಸಂಘ ಸಂಸ್ಥೆಗಳು ,ಆರಕ್ಷಕರು, ಅವನು ನೀಡುವ ಎಂಜಲು ಕಾಸಿನ ಆಸೆಗೆ ಕಣ್ಣಿದ್ದೂ ಕುರುಡರಾಗಿದ್ದರೆ. ಮಾತನಾಡಿದರೆ
ಎಲ್ಲಿ ದುಡ್ಡಿನ ಮದದಿಂದ ನಮ್ಮನ್ನು ಶಿಕ್ಷೆಗೆ ಗುರಿಪಡಿಸುತ್ತಾನೆ ಎಂಬ ಭಯದಿಂದ ಸರ್ವೇಸಾಮಾನ್ಯರು ಮಾತನಾಡುವುದಿಲ್ಲ
ಇಷ್ಟೆಲ್ಲಾ ಕರ್ಮಕಾಂಡಗಳ ಸರದಾರ ಆ ಶಕುನಿ ಯಾವತ್ತೂ ಮುಂದೆ ಬಂದು ಯಾವ ಕೆಲಸದಲ್ಲೂ ಬಾಗಿ ಆಗುವುದಿಲ್ಲ ನಿನ್ನೆ ಕೂಡ ನೋಡಿರಬಹುದು, ಬೆನ್ನ ಹಿಂದೆ ನಿಂತು ಬೇರೆಯವರನ್ನು ಛೂ ಬಿಡೋ ಖದೀಮ,ಇನ್ನಾದರೂ ಡಾಕ್ಟರ್. ರೇಣುಕಾ ಪ್ರಸಾದ್ ಅವರು ಹಾಗೂ ಅವರ ಮನೆಯವರು ಅವನ ಮೊಸದಾಟಕ್ಕೆ ಬಲಿಯಾಗದೆ ಅವನ ಯಾವ ಮಾತನ್ನು ಕೇಳದೇ ,ನಿಮ್ಮ ಕೆವಿಜಿ ಸಂಸಾರವನ್ನು ಸೇರಿ ಕೊಳ್ಳಿ,ಆಗಿ ಹೋದ ಕಾಲಕ್ಕೆ ಚಿಂತಿಸದೆ ಎಲ್ಲರೂ ಒಗ್ಗಟ್ಟಾಗಿ ಅಮರ ಶಿಲ್ಪಿ ಕೆವಿಜಿ ಹೆಸರನ್ನುಅಮರವಾಗುವಂತೆ ಮಾಡಿ ಅವರು ಸ್ವರ್ಗದಲ್ಲಿ ಶಾಂತಿ ಇಂದ ಇರೋ ರೀತಿ ನೋಡಿಕೊಳ್ಳಿ . ಕುರುಂಜಿ ಸಂಸಾರವನ್ನು ಉಳಿಸಿ ಬೆಳೆಸಲು ನಾವು ಸಿದ್ದರಾಗೋಣ , ಡಾಕ್ಟರ್. ರೇಣುಕಾ ಪ್ರಸಾದ್ ಸಂಸಾರಕ್ಕೆ ಕೆಟ್ಟ ಸಲಹೆ ಸೂಚನೆ ಕೊಟ್ಟು ಕೆವಿಜಿ ಸಂಸಾರಕ್ಕೆ ಮುಳ್ಳಾಗಿರುವ ಆ ಶಕುನಿ ಯನ್ನು ಈ ನಮ್ಮ ಅಮರ ಸುಳ್ಯಯದಿಂದ ಗಡಿಪಾರು ಮಾಡಲು ಪಣ ತೊಡೋಣ,ಬನ್ನಿ ಎಲ್ಲರೂ ಕೈ ಜೋಡಿಸಿ ಕೆವಿಜಿ ಕುಟುಂಬವನ್ನು ಒಂದು ಮಾಡಿಸಿ .ಅದೆಷ್ಟೋ ಜನರ ಬಾಳಿಗೆ ಬೆಳಕಾಗಿರೊ ನಮ್ಮ ಕೆವಿಜಿ ವಿದ್ಯಾಸಂಸ್ಥೆಗಳು ಮುಗಿಲಿನೆತ್ತರಕ್ಕೆ ಬೆಳೆದು ಕಂಗೊಳಿಸಲಿ ಎಂಬುದು ಕೆವಿಜಿ ಅಭಿಮಾನಿಯಾದ ನನ್ನ ಹಾಗೂ ನಮ್ಮ ನಿಮ್ಮೆಲ್ಲರ ಹೆಬ್ಬಯಕೆ ಅಲ್ಲವೇ. ಇದರ ಮೂಲಕ ದಿವಂಗತ ಅಮರ ಶಿಲ್ಪಿ ಕೆವಿಜಿಯವರಿಗೆ ಗೌರವ ಸಲ್ಲಿಸೋಣ. ಎಂದು ಬರೆದ ಬರಹಗಳು ಇದೀಗ ಸುಳ್ಯ ತಾಲೂಕಿನೆಲ್ಲೆಡೆ ವೈರಲ್ ಅಗುತ್ತಿದ್ದು ಈ ವಿಚಾರದಲ್ಲಿ ಶಕುನಿ ಎಂದರೆ ಯಾರು ? ಯಾಕೆ ಅವರ ವಿರುದ್ದು ಈ ಕುಟುಂಬ ಕ್ರಮ ಕೈಗೊಳ್ಳುತ್ತಿಲ್ಲಾ ಎಂಬೆಲ್ಲಾ ಪ್ರಶ್ನೆಗಳು ಉದ್ಬವಿಸಿದ್ದು ಕಾಲವೇ ಎಲ್ಲದಕ್ಕು ಉತ್ತರಿಸಲಿದೆ.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!