- Thursday
- November 21st, 2024
ಸುಳ್ಯದ ಬಸ್ ನಿಲ್ದಾಣದ ಎದುರು ಇರುವ ಹೋಟೆಲ್ ಲಕ್ಷ್ಮಿ ವಿಲಾಸ್ ಗೆ ಖ್ಯಾತ ತುಳು ಚಲನಚಿತ್ರ ನಟರಾದ ನವೀನ್ ಡಿ ಪಡೀಲ್, ಉಮೇಶ್ ಮಿಜಾರ್ ಆಗಮಿಸಿದ್ದರು. ಈ ವೇಳೆ ಮಾಲಕರಾದ ಲಕ್ಷ್ಮೀಶ ಹಾಗೂ ಸಿಬ್ಬಂದಿಗಳು ಆತ್ಮೀಯವಾಗಿ ಬರಮಾಡಿಕೊಂಡರು.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಸರಿಗಮಪ ಸೀಸನ್ -20 ರ ಮೆಗಾ ಆಡಿಷನ್ ನಲ್ಲಿ ಅಮರಮುಡ್ನೂರು ಗ್ರಾಮದ ಕೊಂಡೆಬಾಯಿ ಪಲ್ಲವಿ ಕೆ.ಆರ್ ಆಯ್ಕೆಯಾಗಿರುತ್ತಾರೆ. ವಿಶ್ವದಾದ್ಯಂತ ನಡೆಸಿದ ಆಡಿಷನ್ ನಲ್ಲಿ ಸುಮಾರು 1 ಲಕ್ಷ ಗಾಯಕರು ಭಾಗವಹಿಸಿದ್ದರು. ಮೆಗಾ ಆಡಿಷನ್ ನಲ್ಲಿ ಪಲ್ಲವಿಯವರು ಸ್ಪರ್ಧಿಯಾಗಿ ಅದ್ಭುತ ಗಾಯನದ ಮೂಲಕ ತೀರ್ಪುಗಾರರಿಂದ ಮೆಚ್ಚುಗೆ ಪಡೆದು ಆಯ್ಕೆಯಾದರು. ಇವರು ಅಮರಮುಡ್ನೂರು...
ಶಾಲಾ ಕೊಠಡಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಉತ್ತಮ ರೀತಿಯಲ್ಲಿ ದುರಸ್ತಿಗೆ ತೀರ್ಮಾನ. ಅಜ್ಜಾವರ ಗ್ರಾಮದ ದೊಡ್ಡೇರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಅದನ್ನು ಶಾಲೆಗೆ ಶಾಸಕಿ ಕು. ಭಾಗೀರಥಿ ಮುರುಳ್ಯರು ಭೇಟಿ ನೀಡಿದ ಸಂದರ್ಭದಲ್ಲಿ ಊರವರ ಮತ್ತು ತಾವು ತಾಲೂಕು ಪಂಚಾಯತ್ ಅನುದಾನ ಒದಗಿಸಿ ಕಟ್ಟಡದ ಕಾಮಗಾರಿ ನಡೆಸುವಂತೆ ಹೇಳಿದ್ದರು ಅದೇ ಮಾದರಿಯಲ್ಲಿ ದಿನಾಂಕ...
ಸೌಜನ್ಯ ಪರ ಹೋರಾಟ ಸಮಿತಿ ಐವರ್ನಾಡು ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಭೆ ಆರಂಭವಾಗಿದ್ದು ಮಹೇಶ್ ಶೆಟ್ಟಿ ತಿಮರೋಡಿ, ವಾಗ್ಮಿ ತಮ್ಮಣ್ಣ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಪ್ರಸನ್ನ ರವಿ, ಸೌಜನ್ಯಳ ತಾಯಿ ಕುಸುಮಾವತಿ ಸೇರಿದಂತೆ ಸಾವಿರಾರು ಜನ ಆಗಮಿಸಿದ್ದಾರೆ.
ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿದ್ದಾಗ ಮಾತ್ರ ನಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ಹಾಗಾಗಿ ನಾವೆಲ್ಲರೂ ಸ್ವಯಂಪ್ರೇರಿತವಾಗಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಹಿರಿಯರು ಹೇಳಿದ ಮಾತಿನಂತೆ “ಸ್ವಚ್ಛತಾ ಅಭಿಯಾನ ಎನ್ನುವುದು ನಮ್ಮ ಮನೆಯ ಪರಿಸರದಿಂದಲೇ, ನಮ್ಮಿಂದಲೇ ಅಂದರೆ ವಿದ್ಯಾರ್ಥಿಗಳಿಂದಲೇ ಪ್ರಾರಂಭವಾದಾಗ ಮಾತ್ರ ಸಂಪೂರ್ಣವಾಗಿ ಯಶಸ್ವಿಯಾಗಲು ಸಾಧ್ಯ.” ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದರೆ ಮೊದಲಿಗೆ ಅವರಲ್ಲಿ ಸ್ವಚ್ಚತೆಯ ಬಗ್ಗೆ ಅರಿವು...
ಇನ್ವರ್ಟರ್ ಪ್ಲಗ್ ತೆಗೆಯುವ ವೇಳೆ ವಿದ್ಯುತ್ ಶಾಕ್ ಹೊಡೆದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಅ.6 ರಂದು ಬೊಮ್ಮಾರಿನಲ್ಲಿ ನಡೆದಿದೆ. ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಮ್ಮಾರು ಬಾಬು ಕುಲಾಲ್ ಎಂಬವರ ಪತ್ನಿ ಲಲಿತಾ(55 ಪ್ರಾಯ) ಎಂಬವರೇ ಮೃತ ದುರ್ದೈವಿ. ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಪ್ಲಗ್ ತೆಗೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಶಾಕ್ ಹೊಡೆದಿದೆ. ಶಾಕ್...
ಸೌಜನ್ಯ ಪರ ಹೋರಾಟ ಸಮಿತಿ ಐವರ್ನಾಡು ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಭೆ ಇಂದು (ಅ.08) ಐವರ್ನಾಡಿನ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಕಾರ್ಯಕ್ರಮಕ್ಕೆ ಸೌಜನ್ಯ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ, ತುಳು ಜಾನಪದ ವಾಗ್ಮಿ ತಮ್ಮಣ್ಣ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಪ್ರಸನ್ನ ರವಿ, ಸೌಜನ್ಯಳ ತಾಯಿ ಕುಸುಮಾವತಿ,...
ಕೆವಿಜಿ ಕುಟುಂಬದ ಸಹೋದರರ ಮಧ್ಯೆ ಶಕುನಿಯೊಬ್ಬ ವಿಷ ಬೀಜ ಬಿತ್ತಿ ಪೋಷಿಸುತ್ತಿದ್ದು, ಊರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ವರದಿಯೊಂದು ವೈರಲ್ ಆಗಿದ್ದು, ಇದು ಸತ್ಯವೇ ಆಗಿದ್ದಲ್ಲಿ ವಿದ್ಯಾರ್ಥಿ ಸಮೂಹ, ಸಿಬ್ಬಂದಿಗಳು ಹಾಗೂ ಕುರುಂಜಿ ಅಭಿಮಾನಿಗಳು ಆ ಶಕುನಿಯನ್ನು ಪತ್ತೆಹಚ್ಚಿ ಹೊರಗಟ್ಟಲು ಹೋರಾಟ ಮಾಡಬೇಕಾಗಿದೆ. ಈ ಬಗ್ಗೆ ವೈರಲ್ ಆಗಿರುವ...