ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ರಿಕ್ಷಾ ಚಾಲಕ ಹೊಟ್ಟೆಪಾಡಿಗಾಗಿ ತಮ್ಮಷ್ಟಕ್ಕೆ ತಾವೇ ಖುದ್ದಾಗಿ ಕೆಲಸ ನಿರ್ವಹಿಸಿ ಮನೆ ಸಾಕುತ್ತಿದ್ದಾರೆ ಆದರೆ ಇದೀಗ ಇದೇ ಬಡ ಅಟೋ ಚಾಲಕನ ಮೇಲೆ ಖಾಸಗಿ ಬಸ್ಸಿನ ನಿರ್ವಾಹಕ ಮತ್ತೊಮ್ಮೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ನಿನ್ನೆ ಸಂಜೆ ವಿವೇಕಾನಂದ ವೃತ್ತದ ಬಳಿ ಪ್ರಸನ್ನ ಎಂಬುವವರ ಮೇಲೆ ಖಾಸಗಿ ಬಸ್ ನಿರ್ವಾಹಕ ಹಲ್ಲೆ ನಡೆಸಿದ್ದು ಇದೀಗ ಸುಳ್ಯ ಠಾಣೆಯ ಮುಂದೆ ರಿಕ್ಷಾ ಚಾಲಕರು ಜಮಾವಣೆಯಾಗಿದ್ದು ಇದೀಗ ಪೋಲಿಸರು ಇಬ್ಬರನ್ನು ಕರೆಸಿ ಮಾತುಕತೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
- Thursday
- November 21st, 2024