ದೇವಚಳ್ಳ ಗ್ರಾಮ ಪಂಚಾಯತ್ ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಸುಳ್ಯ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರಾದ ಶೈಲೇಶ್ ಅಂಬೆಕಲ್ಲುರವರಿಗೆ ಸೊಸೈಟಿ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷ ಪಿ.ಸಿ ಜಯರಾಮ, ಉಪಾಧ್ಯಕ್ಷ ಮೋಹನ್ ರಾಮ್ ಸುಳ್ಳಿ, ನಿರ್ದೇಶಕರಾದ ಪಿ.ಎಸ್ ಗಂಗಾಧರ, ನಿತ್ಯಾನಂದ ಮುಂಡೋಡಿ, ಜಾಕೆ ಸದಾನಂದ, ಚಂದ್ರಾ ಕೋಲ್ಚಾರ್, ಕೆ.ಸಿ ಸದಾನಂದ, ನಾರಾಯಣ ಗೌಡ ಕೆ.ಸಿ, ದಿನೇಶ್ ಮಡಪ್ಪಾಡಿ, ದಾಮೋದರ ಎನ್.ಎಸ್, ನವೀನ್ ಜಾಕೆ, ಹೇಮಚಂದ್ರ ಕದಿಕಡ್ಕ, ಜಯಲಲಿತಾ ಕೆ.ಎಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ ವಿಶ್ವನಾಥ, ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ್ ಎಂ, ಉಪ ಪ್ರಧಾನ ವ್ಯವಸ್ಥಾಪಕರಾದ ಮನೋಜ್ ಕುಮಾರ್, ಕುಸುಮಾಧರ್, ಆಂತರಿಕ ಲೆಕ್ಕಪರಿಶೋಧಕ ಗುಮ್ಮಣ್ಣ ಗೌಡ, ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.