
ಕುಕ್ಕೆ ಸುಬ್ರಹ್ಮಣ್ಯ ಲೋಕೋಪಯೋಗಿ ವಿಶೇಷ ಉಪವಿಭಾಗಕ್ಕೆ ನೂತನವಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಬಿ. ಸೋಮು ಅವರು ಆಗಮಿಸಿ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿಯವರಾದ ಇವರು ಸುಮಾರು 20 ವರ್ಷಗಳ ಕಾಲ ನೀರಾವರಿ ಇಲಾಖೆಯಲ್ಲಿದ್ದು ಇದೀಗ ಸುಬ್ರಹ್ಮಣ್ಯ ವಿಶೇಷ ಉಪ ವಿಭಾಗಕ್ಕೆ ವರ್ಗಾವಣೆಯಾಗಿ ಬಂದಿರುವರು. ಇಲ್ಲಿಯವರೆಗೆ ಪ್ರಭಾರ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಆಗಿದ್ದ ಪ್ರಮೋದ್ ಕುಮಾರ್ ರವರು ಅಧಿಕಾರ ಹಸ್ತಾಂತರಿಸಿರುವರು.
