Ad Widget

ಸುಬ್ರಹ್ಮಣ್ಯ: ಹೆಲ್ಮೆಟ್ ಕಡ್ಡಾಯ ಬಗ್ಗೆ ಅರಿವು ಮೂಡಿಸಿದ ವಿದ್ಯಾರ್ಥಿಗಳು

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಹೆಲ್ಮೆಟ್ ಕಡ್ಡಾಯದ ಬಗ್ಗೆ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮವನ್ನು ಇಂದು ಗುರುವಾರ ವಿದ್ಯಾರ್ಥಿಗಳು ಮುಖ್ಯರಸ್ತೆಯಲ್ಲಿ ಸಾಗಿ ಕಾಶಿಕಟ್ಟೆ ಸರ್ಕಲ್ ಗೆ ಬಂದು ಕಾಲೇಜಿಗೆ ಹಿಂತುರುಗಿದರು .ವಿದ್ಯಾರ್ಥಿಗಳು ಘೋಷಣಾ ಫಲಕದೊಂದಿಗೆ ಮೆರವಣಿಗೆಯಲ್ಲಿ ಮೌನವಾಗಿ ಕಾಲೇಜಿನವರೆಗೆ ಸಾಗಿರುವರು. ವಿದ್ಯಾರ್ಥಿಗಳೊಂದಿಗೆ ಉಪನ್ಯಾಸಕರು ಕೂಡ ಸಾತ್ ನೀಡಿರುವರು.

ಕೊಲ್ಲಮೊಗ್ರು : ಅ.07 ರಂದು ಆಧಾರ್ ನೋಂದಣಿ ಮತ್ತು ತಿದ್ದುಪಡಿ ಹಾಗೂ ಡ್ರೈವಿಂಗ್ ಲೈಸನ್ಸ್ ನೋಂದಣಿ ಕಾರ್ಯಕ್ರಮ

ವರದಿ : ಉಲ್ಲಾಸ್ ಕಜ್ಜೋಡಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ, ಕೊಲ್ಲಮೊಗ್ರು ಗ್ರಾಮ ಗೌಡ ಸಮುದಾಯ ಸಮಿತಿ ಹಾಗೂ ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇವುಗಳ ಸಹಭಾಗಿತ್ವದಲ್ಲಿ ಅ.07 ಶನಿವಾರದಂದು ಕೊಲ್ಲಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಛೇರಿಯಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಹಾಗೂ ಡ್ರೈವಿಂಗ್ ಲೈಸನ್ಸ್ ನೋಂದಣಿ...
Ad Widget

ಇಂದು ಸಂಜೆ ಸುಳ್ಯಕ್ಕೆ ಆಗಮಿಸಲಿದೆ ಶೌರ್ಯ ಜಾಗರಣ ರಥ ಯಾತ್ರೆ

ವಿಶ್ವ ಹಿಂದೂ ಪರಿಷತ್ ಭಜರಂಗದಳದ ನೇತೃತ್ವದಲ್ಲಿ ದೇಶದಾದ್ಯಂತ ನಡೆಯುತ್ತಿರುವ ಶೌರ್ಯ ಜಾಗರಣ ರಥ ಯಾತ್ರೆ ಅ.6 ರಂದು ಸುಳ್ಯಕ್ಕೆ ಆಗಮಿಸಲಿದೆ. ಇದರ ಅಂಗವಾಗಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಸುಳ್ಯ ಪ್ರಖಂಡ ಹಾಗೂ ಕಡಬ ಪ್ರಖಂಡದ ನೇತೃತ್ವದಲ್ಲಿ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿಬೃಹತ್‌ ಹಿಂದೂ ಶೌರ್ಯ ಸಂಗಮ ನಡೆಯಲಿದೆ. ಸೆ.25ರಂದು ಚಿತ್ರದುರ್ಗದಿಂದ ಹೊರಟ ರಥಯಾತ್ರೆಯು...

ಚೂಂತಾರು ವೇ.ಮೂ. ಲಕ್ಷ್ಮೀನಾರಾಯಣ ಭಟ್ಟರ ಸ್ಮರಣಾರ್ಥ ವೆಂಕಟ್ರಮಣ ಭಟ್ ಮತ್ತು ಪದ್ಮನಾಭ ಭಟ್ಟರಿಗೆ ವೈದಿಕರಿಗೆ ಪುರಸ್ಕಾರ

ವೇದಮೂರ್ತಿ ಲಕ್ಷ್ಮೀನಾರಾಯಣ ಭಟ್ ಚೂಂತಾರುರವರ ಸ್ಮರಣಾರ್ಥ ವೈದಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಅವರ ಪುಣ್ಯತಿಥಿಯ ದಿನವಾದ ಅ. 3ರಂದು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಆಶ್ರಯದಲ್ಲಿ ಚೂಂತಾರು ಉಪಾಸನಾದಲ್ಲಿ ನಡೆಯಿತು. ಪ್ರಥಮ ವರ್ಷದ ಪುರಸ್ಕಾರವನ್ನು ಕೊಳ್ತಿಗೆ ಗ್ರಾಮದ ಚೌರ್ಕಾಡು ಮನೆತನದವರಾದ ದರ್ಭೆ ವೆಂಕಟ್ರಮಣ ಭಟ್ ಮತ್ತು ಐವರ್ನಾಡು ದೇವಸ್ಥಾನದ ಅರ್ಚಕರಾದ ಪರಕ್ಕಜೆ...

ಅ.07 ಸುಳ್ಯದಲ್ಲಿ ವಿದ್ಯುತ್ ವ್ಯತ್ಯಯ

ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್‌ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರುಗಳಲ್ಲಿ ಅ.07 ಶನಿವಾರದಂದು ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ 11ಕೆ.ವಿ ಕೇರ್ಪಳ,  ಶ್ರೀರಾಂಪೇಟಿ, ಜಬಳೆ, ಡಿಪೋ, ತೋಡಿಕಾನ, ಕೋಲ್ಚಾರ್, ದೇವರಗುಂಡ, ಅಜ್ಜಾವರ, ಉಬರಡ್ಕ, ಕಲ್ಲುಗುಂಡಿ, ಮಂಡೆಕೋಲು ಫೀಡರುಗಳಲ್ಲಿ ಬೆಳಿಗ್ಗೆ 10:00 ರಿಂದ ಸಾಯಂಕಾಲ 6:00...

ಡಾ. ಅನುರಾಧಾ ಕುರುಂಜಿಯವರಿಗೆ ಎನ್ಎಸ್ಎಸ್ ಸೇವಾ ಸಂಗಮದಿಂದ ಸನ್ಮಾನ

ಇತ್ತೀಚೆಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟೀಯ ಪ್ರಶಸ್ತಿ ಪಡೆದ ಉಪನ್ಯಾಸಕರು, ವ್ಯಕ್ತಿತ್ವ ವಿಕಸನ ತರಬೇತುದಾರು ಆದ ಡಾ. ಅನುರಾಧಾ ಕುರುಂಜಿಯವರನ್ನು ಕೆವಿಜಿ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆಯ ಹಿರಿಯ ವಿದ್ಯಾರ್ಥಿಗಳ ಸಂಘ ಎನ್.ಎಸ್. ಎಸ್. ಸೇವಾ ಸಂಗಮದ ವತಿಯಿಂದ ಸನ್ಮಾನಿಸಲಾಯಿತು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾವು ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುತ್ತೂರಿನ ರಾಮಕೃಷ್ಣ...

ಸುಬ್ರಹ್ಮಣ್ಯ  ಲೋಕೋಪಯೋಗಿ ವಿಶೇಷ ಉಪವಿಭಾಗಕ್ಕೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನೇಮಕ

ಕುಕ್ಕೆ ಸುಬ್ರಹ್ಮಣ್ಯ  ಲೋಕೋಪಯೋಗಿ ವಿಶೇಷ ಉಪವಿಭಾಗಕ್ಕೆ ನೂತನವಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಬಿ. ಸೋಮು ಅವರು ಆಗಮಿಸಿ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿಯವರಾದ ಇವರು ಸುಮಾರು 20 ವರ್ಷಗಳ ಕಾಲ ನೀರಾವರಿ ಇಲಾಖೆಯಲ್ಲಿದ್ದು ಇದೀಗ ಸುಬ್ರಹ್ಮಣ್ಯ ವಿಶೇಷ ಉಪ ವಿಭಾಗಕ್ಕೆ ವರ್ಗಾವಣೆಯಾಗಿ ಬಂದಿರುವರು. ಇಲ್ಲಿಯವರೆಗೆ ಪ್ರಭಾರ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್...

ಮಾವಿನಕಟ್ಟೆ ಚಿರಾಯು ಸ್ಪೋಟ್ಸ್ ಕ್ಲಬ್ ವತಿಯಿಂದ ಗ್ರಾ.ಪಂ.ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು ಅವರಿಗೆ ಅಭಿನಂದನೆ

ದೇವಚಳ್ಳ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಆಯ್ಕೆ ಯಾದ ಶೈಲೇಶ್ ಅಂಬೆಕಲ್ಲು ರವರನ್ನು ಮಾವಿನಕಟ್ಟೆಯ ಚಿರಾಯು ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರುಗಳಾದ ಪ್ರವೀಣ್, ವಿಜಯಕಾಂತ್, ದಿನೇಶ್ ಮನೋಜ್, ಅಖಿಲ್ ಇವರು ಭೇಟಿ ಯಾಗಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ರಾಜೇಶ್ ಅಂಬೆಕಲ್ಲು ಉಪಸ್ಥಿತರಿದ್ದರು.
error: Content is protected !!