Ad Widget

ದೇವಚಳ್ಳ ಗ್ರಾ.ಪಂ.ಅಧ್ಯಕ್ಷರ ಆಯ್ಕೆ – ಅಧ್ಯಕ್ಷರಾಗಿ ಶೈಲೇಶ್ ಅಂಬೆಕಲ್ಲು ಅವಿರೋಧ ಆಯ್ಕೆ

. . . . . . . . .

ಪ್ರತಿಷ್ಠಿತ ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸಂಪೂರ್ಣಗೊಳ್ಳದೇ ಮೂರನೇ ಬಾರಿಗೆ ದಿನ ನಿಗದಿಯಾಗಿತ್ತು. ಅಧ್ಯಕ್ಷತೆಗೆ ಹಿ.ವ.(ಎ) ಕೆಟಗರಿಗರಿಗೆ ಮೀಸಲಾಗಿದ್ದು, ಎರಡು ಬಾರಿ ಅಧ್ಯಕ್ಷತೆಗೆ ನಾಮಪತ್ರ ಸಲ್ಲಿಸಿದವರು ಹಿಂಪಡೆದಿದ್ದರಿಂದ ಮೂರನೇ ಬಾರಿಗೆ ದಿನ ನಿಗದಿಯಾಗಿತ್ತು. ಇಂದು ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಹಿ.ವ.(ಎ) ಕೆಟಗರಿ ಸದಸ್ಯರು ನಾಮಪತ್ರ ಸಲ್ಲಿಸದೇ ಇರುವುದರಿಂದ ಕರ್ನಾಟಕ ಗ್ತಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಕಲಂ 44 ರ ಅನ್ವಯ ಹಿ.ವ.( ಬಿ) ಕೆಟಗರಿಯ ಸದಸ್ಯರು ನಾಮಪತ್ರ ಸಲ್ಲಿಸಲು ಅವಕಾಶವಿದ್ದ ಹಿನ್ನೆಲೆಯಲ್ಲಿ ಶೈಲೇಶ್ ಅಂಬೆಕಲ್ಲು ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷತೆಗೆ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಶೈಲೇಶ್ ಅಂಬೆಕಲ್ಲು ಅವಿರೋಧವಾಗಿ ಆಯ್ಕೆಯಾದರು.ಈ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಲೀಲಾವತಿ ಸೇವಾಜೆ, ಸದಸ್ಯರಾದ ಪ್ರಶಾಂತ್ ಮಾವಿನಕಟ್ಟೆ, ದುರ್ಗದಾಸ್ ಮೆತ್ತಡ್ಕ, ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯರಾದ ಸುಲೋಚನ ದೇವ, ಸದಸ್ಯೆ ರಾಜೇಶ್ವರಿ ಉಪಸ್ಥಿತರಿದ್ದರು. ಚುನಾವಣಾ ಪ್ರಕ್ರಿಯೆಯನ್ನು ತೋಟಗಾರಿಕಾ ಇಲಾಖೆಯ ಅಧಿಕಾರಿ ಅರಬಣ್ಣ ಪೂಜಾರ ನಡೆಸಿಕೊಟ್ಟರು. ಪಿ.ಡಿ.ಓ ಗುರುಪ್ರಸಾದ್ ಸಹಕರಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading