ಭಾರತೀಯ ಜನತಾ ಪಾರ್ಟಿ ಸುಳ್ಳ ಮಂಡಲ ಮಾನ್ಯ ಸಿದ್ದರಾಮಯ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರಕಾರ, ಇವರಿಗೆ ತಾಲೂಕು ದಂಡಾಧಿಕಾರಿಗಳು ಸುಳ್ಯ ಇವರ ಮೂಲಕ ಬಿಜೆಪಿ ಸುಳ್ಯ ಮಂಡಲ ಮನವಿ ಸಲ್ಲಿಸಿತು. ಈ ಮನವಿಯಲ್ಲಿ ಇತ್ತೀಚೆಗೆ ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ರಾಲಿ ಸಂದರ್ಭದಲ್ಲಿ ವಿಕೃತಿ ಮೆರೆದ ಕಿಡಿಗೇಡಿಗಳು ಪೂರ್ವಯೋಜಿತ ವ್ಯವಸ್ಥಿತ ಷಡ್ಯಂತ್ರವನ್ನು ಮಾಡಿ ಹಿಂದೂಗಳನ್ನು ಗುರಿಯಾಗಿರಿಸಿ ಮಾರಾಣಾಂತಿಕ ಹಲ್ಲೆ ನಡೆಸಿದಲ್ಲದೆ, ಹಿಂದೂ ಮನೆಗಳನ್ನು ಮಾತ್ರ ಗುರಿಯಾಗಿರಿಸಿ ದಾಳಿ ಮಾಡಿ ಹಿಂದೂ ಮಹಿಳೆಯರು, ಮಕ್ಕಳ ಮೇಲೆ ಹಲ್ಲೆ ನಡೆಸಿ, ಕೊಲೆ ಇನುತ್ನ ನಡೆಸಿರುತ್ತಾರೆ.
ಮೆರವಣಿಗೆಯ ಸಂದರ್ಭದಲ್ಲಿ ದೇಶದ್ರೋಹಿ, ಉದ್ರೇಕಕಾರಿ, ಬೆದರಿಕೆಯ ಘೋಷಣೆ, ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ರೀತಿಯಲ್ಲಿ ತಲವಾರು, ಮಾರಕಾಸ್ತ್ರಗಳ ಪ್ರದರ್ಶನದ ಮೂಲಕ ಪರಿಸರದಲ್ಲಿ ಭೀತಿಯ ವಾತಾವರಣ ಉಂಟು ಮಾಡಿದ್ದಾರೆ. ಕಾನೂನು ಉಲ್ಲಂಘನೆ, ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ, ಪೋಲಿಸರ ಕರ್ತವ್ಯಕ್ಕೆ ಅಡ್ಡಿ ಮತ್ತು ಅವರ ಮೇಲೆ ಹಲ್ಲೆಯ ಪ್ರಯತ್ನ ಮಾಡುವ ಮೂಲಕ ರಾಜ್ಯದ ಜನರಲ್ಲಿ ಭೀತಿ ಹುಟ್ಟಿಸುವ ಮತ್ತು ಕೋಮು ಗಲಭೆ ಸೃಷ್ಟಿಸುವ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು -ಕ್ರಮ ಜರುಗಿಸಬೇಕಾಗಿ ಈ ಮೂಲಕ ಒತ್ತಾಯಿಸುತ್ತಿದ್ದೇವೆ ಎಂದು ತಿಳಿಸಿದ್ದು ಈ ನಿಯೋಗದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ , ಸುಬೋದ್ ಶೆಟ್ಟಿ ಮೇನಾಲ , ರಾಕೇಶ್ ರೈ ಕೆಡೆಂಜಿ , ಸುನೀಲ್ ಕೇರ್ಪಳ್ಳ , ಪುಸ್ಪಾವತಿ ಬಾಳಿಲ , ಸುಭದ ಎಸ್ ರೈ , ಜಿನ್ನಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.