
ನಗರ ಪಂಚಾಯತ್ ನಿಂದ ಒಂದು ಬ್ಯಾನರ್ ಗೆ ಪರವಾನಿಗೆ ಪಡೆದಿದ್ದರು ಇನ್ನೊಂದು ಬ್ಯಾನರ್ ಗೆ ಪರವಾನಿಗೆ ಪಡೆದಿರಲಿಲ್ಲ. ಅಲ್ಲದೇ ಇಂದು ಹೆಚ್ಚು ಜನ ಸೇರುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಪೋಲಿಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಸೂಚಿಸಿದ ಮೇರೆಗೆ ತೆರವುಗೊಳಿಸಲಾಗಿದೆ. ಅಲ್ಲದೇ ಬ್ಯಾನರ್ ಅಳವಡಿಕೆ ಮಾಡಲಾದವರನ್ನು ಕರೆಸಿ ಮಾತುಕತೆ ನಡೆಸಲಾಗುವುದು ಅವರಿಗೆ ಈಗಾಗಲೇ ನಾವು ತಿಳಿಸಿದ್ದೇವೆ ಎಂದು ನಗರ ಪಂಚಾಯತ್ ಮುಖ್ಯಾಧಿಕಾರಿ ತಿಳಿಸಿದ್ದಾರೆ.