
ಪಂಜ ಲಯನ್ಸ್ ಕ್ಲಬ್ ವತಿಯಿಂದ ಗಾಂಧಿ ಜಯಂತಿ ಆಚರಣೆ ಹಾಗೂ ಪಂಬೆತ್ತಾಡಿ ಗ್ರಾಮದ ಮಂಚಿಕಟ್ಟೆ ಕಾಲೋನಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಅ.2ರಂದು ನಡೆಯಿತು. . ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲlದಿಲೀಪ್ ಬಾಬ್ಲು ಬೆಟ್ಟು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಲl ಡಾl ಪ್ರಕಾಶ್ ಡಿಸೋಜರವರು ಮಾತನಾಡಿ ಸ್ವಚ್ಛತೆಯ ಮಹತ್ವವನ್ನು ತಿಳಿಸಿದರು, ವೇದಿಕೆಯಲ್ಲಿ ಯುವಕ ಮಂಡಲ ಅಧ್ಯಕ್ಷ ನಾಗಪ್ಪ ಗೌಡ, ವಲಯ 1ರ ವಲಯಾಧ್ಯಕ್ಷ ಲl ಸಂತೋಷ್ ಜಾಕೆ, ಕಾರ್ಯಕ್ರಮ ಸಂಯೋಜಕರಾದ ಲl ಬಾಲಕೃಷ್ಣ ಗೌಡ ಕುದ್ವ, ಕೋಶಾಧ್ಯಕ್ಷ ,ಲ lಆನಂದ ಗೌಡ, ಕಾರ್ಯದರ್ಶಿ ಲl ವಾಸುದೇವ ಮೇಲ್ಪಾಡಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮ ನಂತರ ಕಾಲೋನಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ನ ಪೂರ್ವಧ್ಯಕ್ಷರುಗಳು, ಎಲ್ಲಾ ಸದಸ್ಯರು, ಹಾಗೂ ಕಾಲೊನಿಯ ನಿವಾಸಿಗಳು ಉಪಸ್ಥಿತರಿದ್ದರು.
