
ಪಂಜದಲ್ಲಿ ಇರುವ ಏಕೈಕ ಸಮುಚ್ಚಯ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ ಸಮುದಾಯ ಆಸ್ಪತ್ರೆಯನ್ನಾಗಿ ದಿನದ 24 ಗಂಟೆಯೂ ಸೇವೆಯನ್ನು ಒದಗಿಸುವಂತೆ ಮಾಡಲು ಪಂಜ ಗಾಂಧಿ ವಿದ್ಯಾಪೀಠದ ವತಿಯಿಂದ ಗಾಂಧಿ ಜಯಂತಿಯಂದು ಉಪವಾಸ ಸತ್ಯಾಗ್ರಹ ಆರಂಭಿಸಲಾಗಿದೆ. ಪಂಜ ಗಾಂಧಿ ವಿದ್ಯಾಪೀಠದ ಅಧ್ಯಕ್ಷ ಪುರುಷೋತ್ತಮ ಮುಡೂರು ಅವರು ಮಾತನಾಡಿ” ಇಲ್ಲಿ ಈಗಾಗಲೇ ಆರೋಗ್ಯ ಸಮುಚ್ಚಯ ಆಸ್ಪತ್ರೆ ಇದ್ದು ದಿನದ 24 ಗಂಟೆ ಸೇವೆ ಒದಗಿಸುವಲ್ಲಿ ವಿಫಲವಾಗಿದೆ. ಇರುವ ಓರ್ವ ವೈದ್ಯರು ಹಗಲು ಹೊತ್ತಿ ಹೊತ್ತಿನಲ್ಲಿ ಕಾರ್ಯನಿರ್ವಹಿಸಿದರೆ ರಾತ್ರಿ ಹೊತ್ತಲ್ಲಿ ಯಾರು ಇರೋದಿಲ್ಲ. ಅದಲ್ಲದೆ ಸಿಬ್ಬಂದಿಗಳ ಕೊರತೆ ಕೂಡ ಇದೆ. ಪಂಜ ನಾಡಕಚೇರಿ ವ್ಯಾಪ್ತಿಯಲ್ಲಿ ಸುಮಾರು 21 ಗ್ರಾಮಗಳ ಜನರು ಚಿಕಿತ್ಸೆ ಪಡೆಯಲು ಇದೇ ಆಸ್ಪತ್ರೆಯನ್ನು ಆಲಂಬಿಸಿರುತ್ತಾರೆ .ಇಲ್ಲಿ ಬಂದು ವೈದ್ಯರು ಇಲ್ಲದಿದ್ದಾಗ ವಾಪಸ್ ಹೋಗುವ ಪರಿಸ್ಥಿತಿ ಕೂಡ ಎಷ್ಟು ಬಾರಿ ಆಗುತ್ತಾ ಇದೆ .ಸರ್ಕಾರದವರು ಸುಮಾರು ಮೂರು ಎಕರೆಯಷ್ಟು ಜಾಗವನ್ನ ಆಸ್ಪತ್ರೆ ಅಭಿವೃದ್ಧಿಗೆ ಮೀಸಲಾಗಿ ಇಟ್ಟಿರುವರು .ಅಲ್ಲದೆ ಸುಮಾರು ಎರಡು ಕೋಟಿ ವೆಚ್ಚದಲ್ಲಿ ನೂತನ ಆಸ್ಪತ್ರೆಯನ್ನು ಕೂಡ ನಿರ್ಮಿಸಿ ಅದರಲ್ಲಿ 12 ಬೆಡ್ ಗಳನ್ನು ಹಾಕುವ ವ್ಯವಸ್ಥೆ ಕೂಡ ಇದೆ. ಈ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯತ್ ಹಾಗೂ ಉಳಿದ ಇಲಾಖೆಗಳಿಗೆ ಮನವಿ ಸಲ್ಲಿಸಿದರು ಇಲ್ಲಿಯವರೆಗೆ ಏನು ಪ್ರಯೋಜನ ಆಗಿಲ್ಲ. ಆದುದರಿಂದ ಸರಕಾರದವರು ಕೂಡಲೇ ಇತ್ತ ಕಡೆ ಗಮನಹರಿಸಿ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ ಇಲ್ಲಿ ದಿನದ 24 ಗಂಟೆಯೂ ಸೇವೆಯನ್ನು ಒದಗಿಸುವಂತೆ ಮಾಡಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ ಎಂದು ಅವರು ತಿಳಿಸಿದರು. ಈಗಾಗಲೇ ಗ್ರಾಮ ಪಂಚಾಯತ್ ಹಾಗೂ ಊರಿನ ಹಲವು ಗಣ್ಯರು ಬಂದು ಉಪವಾಸ ಸತ್ಯಾಗ್ರಕ್ಕೆ ಬೆಂಬಲ ಸೂಚಿಸಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿರುವರು . ಈ ಸಂದರ್ಭದಲ್ಲಿ ಪೀಠದ ಸಂಚಾಲಕ ಜಿನ್ನಪ್ಪ ಗೌಡ ಅಳಪೆ ಹಾಗೂ ಪಶುವೈದ್ಯ ಡಾ l ದೇವಿ ಪ್ರಸಾದ್ ಕಾನತ್ತೂರು ಉಪಸ್ಥಿತರಿದ್ದರು.
