ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ ( ರಿ) ಬಿ ಯಂ ಯಸ್ ಸಂಯೋಜಿತ ಸುಳ್ಯ ಇದರ ವತಿಯಿಂದ ಗಾಂಧಿನಗರ ಹಾಗೂ ಜಾಲ್ಸೂರಿನಲ್ಲಿ ರಿಕ್ಷಾ ತಂಗುದಾಣಕ್ಕೆ ಛಾವಣಿ ನಿರ್ಮಿಸಿಕೊಡಬೇಕೆಂದು ಸುಳ್ಯ ಶಾಸಕರಾದ ಕು. ಭಾಗೀರಥಿ ಮುರುಳ್ಯರಿಗೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಸುಳ್ಯ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ, ಜಾಲ್ಸೂರು ಸಂಘದ ಅಧ್ಯಕ್ಷ ಗೋಪಾಲ ಅಡ್ಕಾರು, ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮರ್ಕಂಜ ಉಪಸ್ಥಿತರಿದ್ದರು.
- Thursday
- November 21st, 2024