ಗಾಂಧಿ ಜಯಂತಿಯ ಅಂಗವಾಗಿ ಕರ್ನಾಟಕ ಸರಕಾರದ ಸ್ವಚ್ಛತಾ ಹಿ ಸೇವಾ ಅಭಿಯಾನ (ಸೆ15ರಿಂದ ಅ2)ಆಂದೋಲನದ ಅಂಗವಾಗಿ ಗುತ್ತಿಗಾರು ಗ್ರಾಮ ಪಂಚಾಯತ್ ಗ ಅರಿವು ಕೇಂದ್ರದಲ್ಲಿ ನವೋದಯ ಮೊರಾರ್ಜಿ ದೇಸಾಯಿ ವಸತಿ ಶಾಲಾ ಪ್ರವೇಶ ಪರೀಕ್ಷಾ ತರಬೇತಿ ಕೇಂದ್ರ ದ ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಲು ಪ್ರಾಯೋಗಿಕ ಚಟುವಟಿಕೆ ನಡೆಸಲಾಯಿತು, ವಿದ್ಯಾರ್ಥಿಗಳು ಸಂಗ್ರಹಿಸಿದ ತಮ್ಮ ಮನೆ ಮನೆಯ ಕಸವನ್ನು ಘನ ತ್ಯಾಜ್ಯ ಘಟಕಕ್ಕೆ ತಂದರು. ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ನಿರ್ವಹಣೆಯನ್ನು ಮಾಡಿದ ರೀತಿಯನ್ನು ನೋಡಿಕೊಂಡು ಅತಿಥಿಗಳಾದ ಡಾಕ್ಟರ್ ನಂದಕುಮಾರ್ ತಾಲೂಕು ಆಡಳಿತ ವೈದ್ಯಾಧಿಕಾರಿ, ಸುಮಿತ್ರಾ ಮೂಕಮಲೆ ಅಧ್ಯಕ್ಷರು ಗ್ರಾಮ ಪಂಚಾಯತ್ ಗುತ್ತಿಗಾರು ಮತ್ತು ಎನ್ ಆರ್ ಎಲ್ ಎಂ ಎಂಬಿಕೆ ಮಿತ್ರ ಕುಮಾರಿ ಚಿಕ್ಮುಳಿ ಮೌಲ್ಯಮಾಪನ ಮಾಡಿದರು. ನಂತರ ವಿದ್ಯಾರ್ಥಿಗಳ ಪ್ರಶಂಸಾ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾದ ಡಾ. ನಂದಕುಮಾರ್ ಸರ್ ಮೌಲ್ಯಮಾಪನದ ಸಂದರ್ಭ ಗಮನಿಸಿದ ವಿದ್ಯಾರ್ಥಿಗಳ ಕಸ ಸಂಗ್ರಹಣಾ ಕಾರ್ಯವೈಕರಿಗಳ ಬಗ್ಗೆ ವಿವರಿಸುತ್ತ ಸ್ವಚ್ಛತಾ ಮಾಹಿತಿ ನೀಡಿದರು . ಉತ್ತಮವಾಗಿ ತ್ಯಾಜ್ಯ ವಿಲೇವಾರಿ ಚಟುವಟಿಕೆಯಲ್ಲಿ ತೊಡಗಿಕೊಂಡ ಎರಡು ವಿದ್ಯಾರ್ಥಿಗಳಿಗೆ ಒಣ ಕಸ ಸಂಗ್ರಹಣಾ ತೊಟ್ಟಿಯನ್ನು ನೀಡಲಾಯಿತು ಉಳಿದ 20 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನವನ್ನು ನೀಡಲಾಯಿತು. ವಿದ್ಯಾರ್ಥಿಗಳ ಪೋಷಕರು ಪಂಚಾಯತ್ ಸಿಬ್ಬಂದಿ ಚೋಮಯ್ಯ ಯಶಸ್ವಿಗೆ ಸಹಕರಿಸಿದರು, ಅಮರ ಸಂಜೀವಿನಿ ಒಕ್ಕೂಟದ ಅಧ್ಯಕ್ಷ ತರಬೇತಿ ಕೇಂದ್ರದ ಶಿಕ್ಷಕಿ ದಿವ್ಯ ಸುಜನ್ ಗುಡ್ಡೆಮನೆ ಪ್ರಾಸ್ತಾವಿಕ ಮಾತುಗಳಿಂದ ಸ್ವಾಗತಿಸಿದರು. ಗ್ರಂಥಾಲಯ ಮೇಲ್ವಿಚಾರಕಿ ಅಭಿಲಾಷ ಮೋಟ್ನೂರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.
- Thursday
- November 21st, 2024