ಬೆಂಗಳೂರು ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠಧೀಶರಾದ ಶ್ರೀ
ಪೂರ್ಣಾನಂದ ಪುರಿ ಮಹಾಸ್ವಾಮೀಜಿ ಆಶೀರ್ವಚನ ನೀಡುತ್ತಾ ‘ಗಾಣಿಗ ಸಮುದಾಯವನ್ನು ಒಟ್ಟಾಗಿಸಲು ಸಂಘಟನೆ ಸ್ಥಾಪಿಸಲಾಗಿದೆ. ಆ ಬಳಿಕ ಸಮುದಾಯವು ಸಾಕಷ್ಟು ಸಂಘಟಿತರಾಗಿದ್ದಾರೆ, ಸಮುದಾಯದ ಮಧ್ಯೆ ಸಂಬಂಧಗಳು ಬೆಳೆದಿದೆ. ಸಂಘಟನೆಯನ್ನು ಕಟ್ಟಿ ಬೆಳೆಸುವವರಿಗೆ ಸಮುದಾಯ ಪ್ರೋತ್ಸಾಹ ನೀಡಬೇಕು ಎಂದು ಅವರು ಹೇಳಿದರು.ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನದ ವತಿಯಿಂದ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಲಾಗುತ್ತಿದೆ ಅಲ್ಲದೇ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬೆಳೆಸಲು ಎಲ್ಲಾ ಪ್ರೋತ್ಸಾಹ ನೀಡಲಾಗುತಿದೆ ಎಂದು ಹೇಳಿದರು. ನೈತಿಕವಾಗಿ ಮತ್ತು ಸಂಸ್ಕಾರಯುತವಾಗಿ ಬದುಕಿ ಮನುಷ್ಯ ಜೀವನವನ್ನು ಸಾರ್ಥಕವಾಗಿಸಬೇಕು ಅಲ್ಲದೇ ಇಲ್ಲಿ ಅನಾಥ ಮಕ್ಕಳು ಇದ್ದರೆ ನಮ್ಮ ಮಠದಲ್ಲಿ ಅವರನ್ನು ವಿಧ್ಯಾಭ್ಯಾಸ ನೀಡಿ ಸಮಾಜಕ್ಕೆ ಓರ್ವ ಉತ್ತಮ ವ್ಯಕ್ತಿಯನ್ನಾಗಿ ಮಾಡುವ ಕೆಲಸವನ್ನು ನಮ್ಮ ಮಠ ಮಾಡಲಿದೆ ಎಂದು ಹೇಳಿದರು.ತಮ್ಮ ತಮ್ಮ ಮಕ್ಕಳಿಗೆ ಸಂಸ್ಕಾರ ಮತ್ತು ನೈತಿಕತೆಯ ಪಾಠವನ್ನು ಕಲಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಮಾಜಿ ಸ್ಪೀಕರ್ ಸುದರ್ಶನ್ ಮಾತನಾಡಿ’ ಸರಕಾರ ಬಜೆಟ್‌ನಲ್ಲಿ ಘೋಷಿಸಿರುವ ಅನುದಾನಗಳನ್ನು ಸಮಾನಾಗಿ ಹಂಚಿ ಸಾಮಾಜಿಕ ನ್ಯಾಯ ಒದಗಿಸಬೇಕು. ಈ ನಿಟ್ಟಿನಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸಲು ಪ್ರತಿ ಸಮುದಾಯದ ಗಣತಿ ಮಾಡಬೇಕಾಗಿರುವುದು ಅತೀ ಅಗತ್ಯ ದೇಶದ ಪ್ರಧಾನಿ ಇದೇ ಸಮುದಾಯಕ್ಕೆ ಸೇರಿದವರಾಗಿದ್ದು ಅವರು ನಮ್ಮ ದೇಶದ ಗಣತಿ ನಡೆಸಬೇಕು ಎಂದರು. ಸಂಘಟನೆಯಿದ್ದರೆ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ರಾಜ್ಯ ಗಾಣಿಗರ ಸಂಘದ ಅಧ್ಯಕ್ಷ ರಾಜಶಖರ್ ಮಾತನಾಡಿ ನಿಮ್ಮ ಧ್ವನಿಗೆ ಧ್ವನಿಯಾಗಲು ನಾವು ಬೆಂಗಳೂರಿನಲ್ಲಿ ಇದ್ದೇವೆ ಸಮುದಾಯದ ಪರವಾಗಿ ನಾವು ಯಾವತ್ತು ನಿಲ್ಲುತ್ತೇವೆ ಈ ಹಿಂದಿನ ಸರಕಾರದ ನಿಗಮವನ್ನು ಮುಂದುವೆಸುವ ಸಲುವಾಗಿ ನವಂಬರ್ ತಿಂಗಳಿನಲ್ಲಿ ರಾಜ್ಯಮಟ್ಟದ ಗಾಣಿಗ ಸಮ್ಮಿಲನ ಹಮ್ಮಿಕೊಳ್ಳಲಾಗುವುದು ಈ ಕಾರ್ಯಕ್ರಮಕ್ಕೆ ಇಲ್ಲಿನ ಗಾಣಿಗರು ಬರಬೇಕು ಎಂದು ಹೇಳಿದರು.
ಅಖಿಲ ಕರ್ನಾಟಕ ರಾಜ್ಯ ಗಾಣಿಗರ ಸಂಘದ ಉಪಾಧ್ಯಕ್ಷ ಅಂಕ ಶೆಟ್ಟಿ ಮತಾನಾಡಿ ನಿಮ್ಮ ಜೊತೆಗೆ ನಾವಿದ್ದೇವೆ ನಿಮಗೆ ಏನೇ ಸಮಸ್ಯೆಗಳು ಆದಲ್ಲಿ ನಮ್ಮ ಗಮನಕ್ಕೆ ತನ್ನಿ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಗಾಣಿಗ ಸಮಾಜವು ಮಾದರಿಯಾಗಿ ಒಗ್ಗಟ್ಟಾಗಿ ತೋರಿಸಕೊಡಬೇಕು ನಾವೆಲ್ಲರು ಒಂದೇ ಎಂಬ ಭರವಸೆಯ ಮಾತುಗಳನ್ನಾಡಿದರು.
ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಉದ್ದಂತಡ್ಕ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅಥಿತಿಗಳಾಗಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ ಪಾಟಾಳಿ ಪರಿವಾರಕಾನ, ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಅಪ್ಪು ಪಾಟಾಳಿ ಜಯನಗರ, ನಿವೃತ್ತ ಉಪ ತಹಶೀಲ್ದಾರ್ ಮಹಾಲಿಂಗ ದೇರೆಬೈಲು, ಸಂಘದ ಆಂತರಿಕ ಲೆಕ್ಕ ಪರಿಶೋಧಕ ಮಹಾಲಿಂಗನ್ ಬಾಜರ್ತೊಟ್ಟಿ, ಸ್ವಿಗ್ಗಿ ಇಂಡಿಯಾ ನಿರ್ದೇಶಕ ಪ್ರೀತಮ್ ಕೆ.ಎಸ್, ಚಾರ್ಟೆಡ್ ಅಕೌಂಟೆಂಟ್ ದಯಾನಂದ ಕೆ, ಮಂಗಳೂರು ವಾಣಿಯ ಗಾಣಿಗ ಸಂಘದ ಅಧ್ಯಕ್ಷ ರಾಮ ಮುಗ್ರೋಡಿ, ಪುತ್ತೂರು ವಾಣಿಯ ಗಾಣಿಗ ಸಂಘದ ಅಧ್ಯಕ್ಷ ಪ್ರಸಾದ್ ಬಾಕಿಮಾರ್, ವಿಟ್ಲ ವಾಣಿಯ ಗಾಣಿಗ ಸಂಘದ ಅಧ್ಯಕ್ಷ ಉದಯ ದಂಬೆ, ಈಶ್ವರಮಂಗಲ ವಾಣಿಯ ಗಾಣಿಗ ಸಂಘದ ಅಧ್ಯಕ್ಷ ಮಹಾಲಿಂಗ ಈಶ್ವರಮಂಗಲ ಭಾಗವಹಿಸಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸನ್ಮಾನ.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ
ನಾಟಿವೈದ್ಯ ಅಜ್ಜಾವರ ಗ್ರಾಮದ ಮಾನ ಬಂಟ್ರಬೈಲ್,ಸಂಪಾಜೆಯ ಯಕ್ಷಗಾನ ಕಲಾವಿದ ಬಣ್ಣದ ಸುಬ್ರಾಯ ಸಂಪಾಜೆ, ಸಮಾಜ ಸೇವಾ ಕ್ಷೇತ್ರದ ಸಾಧನೆಗಾಗಿ ಅಜ್ಜಾವರದ ಸುಬ್ಬ ಪಾಟಾಳಿ ಕಾಂತಮಂಗಲ, ನಿವೃತ್ತ ಯೋಧರಾದ ಬೆಳ್ಳಾರೆಯ ಚಂದ್ರಶೇಖರ ಬೆಳ್ಳಾರೆ, ಅಜ್ಜಾವರ ಗ್ರಾಮದ ಲೋಕೇಶ್ ಇರಂತಮಜಲು, ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಆರಕ್ಷಕರಾದ ದಿನೇಶ್ ನಾರ್ಣಕಜೆ, ಸುಳ್ಯ ವಕೀಲರ ಸಂಘದ ಅಧ್ಯಕ್ಷ ನಾರಾಯಣ ಕೆ, ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ಕೇರ್ಪಳ, ವಿಜ್ಞಾನಿ ವಿಭಾಗದಲ್ಲಿ ಪ್ರವೀಣ್ ಎ ಎಸ್ ಜಯನಗರ , ಕ್ರೀಡಾ ಕ್ಷೇತ್ರದ ಸಾಧನೆಗಾಗಿ ವನಿತಾ ಸಚಿತ್ ಪೆರಿಯಪ್ಪು, ಕ್ರೀಡಾ ಕ್ಷೇತ್ರದಲ್ಲಿ ಮನೋಜ್ ಕುಮಾರ್ ಸೂಂತೂಡು ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ವೇಳೆಯಲ್ಲಿ ವಿವಿಧ ಪಕ್ಷಗಳ ಮತ್ತು ವಿವಿಧ ಕ್ಷೇತ್ರಗಳ ನಾಯಕರುಗಾಳಾದ ಹರೀಶ್ ಕಂಜಿಪಿಲಿ , ಪಿ ಸಿ ಜಯರಾಂ , ಎಂ ವೆಂಕಪ್ಪ ಗೌಡ ,ಸುಧಾಕರ ರೈ , ಸುಭೋದ್ ಶೆಟ್ಟಿ ಮೇನಾಲ, ಗೋಕುಲ್ ದಾಸ್ , ಶಾಫಿ ಕುತ್ತಮೊಟ್ಟೆ , ಪ್ರಭಾಕರ ಶಿಶಿಲ , ಗುರುರಾಜ್ ಅಜ್ಜಾವರ , ಚನಿಯ ಕಲ್ತಡ್ಕ , ಮಹೇಶ್ ರೈ ಸೇರಿದಂತೆ ಇತರ ಹಲವಾರು ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಸ್ವಾಗತ ಸಮಿತಿಯ ಸಂಚಾಲಕ ಶಂಕರ ಪಾಟಾಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರವೀಣ್ ಜಯನಗರ ಹಾಗೂ ಉಪನ್ಯಾಸಕಿ ಸಾವಿತ್ರಿ ಜಯನಗರ ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನದ ಭೋಜನದ ಬಳಿಕ ಗಜಾನನ ನಾಟ್ಯಾಂಜಲಿ ಶ್ರೀಮತಿ ಸುಜಾತ ಕಲಾಕ್ಷೇತ್ರ ಮುಳ್ಳೇರಿಯ ಇವರ ಶಿಷ್ಯ ವೃಂದದಿಂದ ನೃತ್ಯ ಶಿಲ್ಪಂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.