Ad Widget

ಜು.13: “ಕ್ರಿಯೇಟ್ ಹೋಪ್ ಇನ್ ದಿ ವರ್ಲ್ಡ್” ಧ್ಯೆಯವಾಕ್ಯದೊಂದಿಗೆ ಸಿಟಿ ರೋಟರಿ ಕ್ಲಬ್ ಪದಗ್ರಹಣ

ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯಾದ ರೋಟರಿ ಕ್ಲಬ್ ಸುಳ್ಯ ಸಿಟಿ 2016ರಲ್ಲಿ ಆರಂಭಗೊಂಡು ಕಳೆದ ಏಳು ವರ್ಷಗಳಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಂಡು ರೋಟರಿ ಜಿಲ್ಲೆ 3181 ನಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಯುವಕರಿಂದಲೇ ಕೂಡಿದ ಸಂಸ್ಥೆ ಯಾಗಿದ್ದು
2023-24ನೇ ಸಾಲಿನ ಕ್ಲಬ್‌ನ ಎಂಟನೇ ವರ್ಷದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು 13ರಂದು ರೋಟರಿ ಕಮ್ಯುನಿಟಿ ಹಾಲ್ ಕಾರ್ ಸ್ಟ್ರೀಟ್ ಸುಳ್ಯ ಇಲ್ಲಿ ಜರುಗಲಿದ್ದು ನೂತನ ಅಧ್ಯಕ್ಷರಾಗಿ ರೊ| ಗಿರೀಶ್ ನಾರ್ಕೋಡು, ಕಾರ್ಯದರ್ಶಿಯಾಗಿ ರೊ| ಚೇತನ್ ಪಿ.ಯನ್, ಖಜಾಂಜಿಯಾಗಿ ಹೇಮಂತ್ ಕಾಮತ್ ಅಧಿಕಾರ ಸ್ವೀಕಾರ ಮಾಡಿಕೊಳ್ಳಲಿದ್ದಾರೆ. ರೊ| ಆನಂದ ಖಂಡಿಗ ರವರು ಪದಗ್ರಹಣ ನೇರವೇರಿಸಲಿದ್ದು ಮುಖ್ಯ ಅತಿಥಿಗಳಾಗಿ ರೊ| ರಾಜೇಂದ್ರ ಕಲ್‌ಬಾವಿ, ರೋ ನರಸಿಂಹ ಜೈ, ರೊ| ಸುಜಿತ್ ಪಿ.ಕೆ, ರೂ ಕೇಶವ ಪಿ.ಕೆ. ಇವರುಗಳು ಭಾಗವಹಿಸಲಿದ್ದಾರೆ ಎಂದು ಗಿರೀಶ್ ನಾರ್ಕೋಡು ತಿಳಿಸಿದರು.

ಈ ವರ್ಷದ ಅಂತರಾಷ್ಟ್ರೀಯ ರೋಟರಿ ಅಧ್ಯಕ್ಷರ ಕ್ರಿಯೇಟ್ ಹೋಪ್ ಇನ್ ದಿ ವರ್ಲ್ಡ್’ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು, ನಮ್ಮ ಜಿಲ್ಲೆ 3181ಆಶಯದಂತೆ ಅಂಗನವಾಡಿಗಳ ಪುನಶ್ವೇತನ ಮತ್ತು ನೀರಿನ ಸಂರಕ್ಷಣೆ ಬಗ್ಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ. ಈಗಾಗಲೇ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೆಟ್ಟಿ ನಾರ್ಕೋಡು ಇಲ್ಲಿಗೆ 4ಲಕ್ಷ ರೂ. ವೆಚ್ಚದಲ್ಲಿ ಅಗತ್ಯವಿರುವ ಶೌಚಾಲಯ ನಿರ್ಮಾಣ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಹಾಗೆಯೇ ಜು. 13ರಂದು ನಡೆಯುವ ಪದಗ್ರಹಣ ಕಾರ್ಯಕ್ರಮದ ಸಂದರ್ಭದಲ್ಲಿ ಶಾಲೆಯಲ್ಲಿ ನೂತನವಾಗಿ ಆರಂಭಗೊಂಡಿರುವ ಇಂಗ್ಲೀಷ್ ಮಾಧ್ಯಮ ತರಗತಿಗಳ ನಿರ್ವಹಣೆಗೆ ಕ್ಲಬ್ಬಿನ ವತಿಯಿಂದ ಹಾಗೂ ಕ್ಲಬ್‌ನ ಪೂರ್ವಾಧ್ಯಕ್ಷರಾದ ರೊ| ತೀರ್ಥಕುಮಾರ್ ಕುಂಚಡ್ಕರವರ ಸಹಕಾರದೊಂದಿಗೆ ಸುಮಾರು 1.10 ಲಕ್ಷ ದೇಣಿಗೆ ನೀಡಲಿದ್ದೇವೆ ಎಂದು ತಿಳಿಸಿದರು.
ಪದಗ್ರಹಣ ಸಂದರ್ಭದಲ್ಲಿ ಸುಳ್ಯದ ಹಿರಿಯ ವೈದ್ಯರಾದ ಶಂಕರ್ ಭಟ್ ಹಾಗೂ ರಂಗಮಯೂರಿ ನಿರ್ದೇಶಕ ಲೋಕೇಶ್ ಊರುಬೈಲು ರವರನ್ನು ಗೌರವಿಸಲಾಗುವುದು ಎಂದು ಅಧ್ಯಕ್ಷರಾದ ಗಿರೀಶ್ ನಾರ್ಕೋಡು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪ್ರಮೋದ್ ಕುಮಾರ್ , ಮುರಳೀಧರ ರೈ , ನವೀನ್ ಕುಮಾರ್ , ಪ್ರವೀಣ್ ಕುಮಾರ್ ,ಶಿವಕುಮಾರ್ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!