- Thursday
- April 23rd, 2026
ಸುಳ್ಯದ ಅಂಬಟೆಡ್ಕದಲ್ಲಿರುವ ವಿದ್ಯುತ್ ಗುತ್ತಿಗೆದಾರರ ಸಂಘದ ವಾಣಿಜ್ಯ ಸಂಕೀರ್ಣದ ಮೇಲೆ ಅಳವಡಿಸಿದ್ದ ಅಲ್ಯೂಮಿನಿಯಂ ಶೀಟಿನಿಂದ ನಿರ್ಮಿಸಿದ ಛಾವಣಿ ಬೀಸಿದ ಭಾರಿ ಗಾಳಿಗೆ ಹಾರಿ ಕಂದಾಯ ಇಲಾಖೆಯ ಹೋಬಳಿ ಕಛೇರಿ ಎದುರಿಗೆ ಬಿದ್ದಿದೆ. ಈ ವೇಳೆ ಅಲ್ಲಿ ಯಾರು ಇಲ್ಲದಿದ್ದುದರಿಂದ ಸಂಭಾವ್ಯ ಅಪಾಯ ತಪ್ಪಿದೆ.
ಸುಳ್ಯದಿಂದ ಮಂಡೆಕೋಲಿಗೆ ತೆರಳುವ ರಸ್ತೆಗೆ ಬೃಹದಾಕಾರದ ಗಾಳಿಮರವೊಂದು ಅಡ್ಡಲಾಗಿ ಬಿದ್ದಿ ರಸ್ತೆ ಸಂಚಾರ ಅಡಚಣೆಯಾಗಿದೆ. ಕಾಂತಮಂಗಲದ ಜೀಜಬಾಯಿ ವೃತ್ತದ ಬಳಿ ಈ ಮರ ಬುಡಸಮೇತ ರಸ್ತೆಗೆ ಮಗುಚಿಬಿದ್ದಿದ್ದು , ವಿಧ್ಯುತ್ ತಂತಿಗಳು ಕಟ್ಟಾಗಿದ್ದು ಇದೀಗ ಮೆಸ್ಕಾಂ ಹಾಗೂ ಊರಿನವರ ಸಹಾಯದಲ್ಲಿ ಮರ ತೆರವು ಕಾರ್ಯ ನಡೆಯುತ್ತಿದೆ.
ನೆಹರೂ ಮೆಮೋರಿಯಲ್ ಕಾಲೇಜು ಇಲ್ಲಿನ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಶ್ರೀಮತಿ ಮಮತಾ ಪುರುಷೋತ್ತಮ ಇವರ ಸಂಶೋಧನಾ ಪ್ರೌಢ ಪ್ರಬಂಧಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.ಇವರು ಡಾ. ಶಂಕರ ನಾರಣಪ್ಪ, ಅಸೋಸಿಯೇಟ್ ಪ್ರೊಫೆಸರ್, ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮೈಸೂರು ಇವರ ಮಾರ್ಗದರ್ಶನದಲ್ಲಿ “Role of Women members...
