Ad Widget

ಸುಳ್ಯದಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ತೊಂದರೆಗೀಡಾದವರಿಗೆ ಮೊದಲ ಆಶ್ರಯ ಕೇಂದ್ರ ಓಪನ್ !

ಸುಳ್ಯ ತಾಲೂಕಿನಾಧ್ಯಂತ ಸತತವಾಗಿ ಮಳೆಯಾಗುತ್ತಿದ್ದು ಇತ್ತ ಗುರುಂಪುವಿನಲ್ಲಿ ಬರೆ ಕುಸಿತ ಪ್ರಕರಣ ಹಾಗೂ ನಾನ ಕಡೆಗಳಲ್ಲಿ ಪ್ರಕೃತಿ ವಿಕೋಪ ಸಂಭವಿಸಿ ಜೀವ ಹಾನಿಗು ಮೊದಲೇ ಎಚ್ಚೆತ್ತುಕೊಂಡ ಆಡಳಿತ ವರ್ಗ ಇದೀಗ ಮೊದಲ ಆಶ್ರಯ ಕೇಂದ್ರವನ್ನು ಸುಳ್ಯದ ವಿವೇಕಾನಂದ ವೃತದ ಬಳಿಯಲ್ಲಿನ ಹಾಸ್ಟೆಲ್ ನಲ್ಲಿ ಸಂಪೂರ್ಣ ವ್ಯವಸ್ಥೆಗಳನ್ನು ಮಾಡಿದ್ದು ತಾಲೂಕು ಆಡಳಿತ ಎಲ್ಲಾ ರೀತಿಯಲ್ಲಿ ಸರ್ವ ಸನ್ನದ್ದವಾಗಿದೆ...

⛔BREAKING NEWS ⛔ 🛑ಮುಂದುವರಿದ ಮಳೆ – ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ 🛑

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು ರೆಡ್ ಅಲರ್ಟ್ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳಿಗೆ ಜು.7 ರಂದು ಕೂಡ ರಜೆ ವಿಸ್ತರಿಸಿ ಘೋಷಣೆ ಮಾಡಲಾಗಿದೆ. ನೀರು ಇರುವ ತಗ್ಗು ಪ್ರದೇಶ ಕೆರೆ, ನದಿ, ಸಮುದ್ರ...
Ad Widget

ಸತತವಾಗಿ ಸುರಿಯುತ್ತಿರುವ ಮಳೆ ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ.

ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರಿದಿದ್ದು, ಮುಂಜಾಗೃತ ಕ್ರಮವಾಗಿ ದ.ಕ. ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರ, ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳಿಗೆ ನಾಳೆಯೂ (ಜು.7 ) ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ನೈಸರ್ಗಿಕ ವಿಕೋಪ ಮುನ್ಸೂಚನೆಯಂತೆ ಆರೆಂಜ್‌ ಅಲರ್ಟ್‌ ಘೋಷಣೆಯಾಗಿದ್ದು, ಪ್ರವಾಸಿಗರು, ಮೀನುಗಾರರು...

ನಾಳೆ ಎಸ್ ಡಿ ಆರ್ ಎಫ್ ಕೂರ್ನಡ್ಕಕ್ಕೆ , ಕೊಚ್ಚಿ ಹೋದ ವ್ಯಕ್ತಿಯ ಗುರುತು ಪತ್ತೆ !

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ಇಂದು ತಮ್ಮ ಕೆಲಸವನ್ನು ಮುಗಿಸಿ ಹಿಂದುರುಗುತ್ತಿದ್ದ ನಾಲ್ವರ ಪೈಕಿ ಓರ್ವ ಅಡಿಕೆ ಪಾಲದಿಂದ ಆಯತಪ್ಪಿ ಬಿದ್ದ ಪ್ರಕರಣದಲ್ಲಿ ಪ್ರಾಥಮಿಕ ಮಾಹಿತಿಯಂತೆ ಆಯತಪ್ಪಿ ಬಿದ್ದ ವ್ಯಕ್ತಿಯನ್ನು ನಾರಾಯಣ ಅಂದಾಜು 45 ವರ್ಷ ಎಂದು ಹೇಳಲಾಗಿದ್ದು ಇದೀಗ ರಾತ್ರಿಯಾದ ಹಿನ್ನಲೆಯಲ್ಲಿ ಹುಡುಕಾಟ ಕಷ್ಟ ಸಾಧ್ಯವಾಗಿದ್ದು ನಾಳೆ ಮುಂಜಾನೆ ಎಸ್ ಡಿ...

ಸಂಪಾಜೆಯಲ್ಲಿ ಧೀಡೀರ್ ಬಾವಿ ಕುಸಿತ !

ಸುಳ್ಯ ತಾಲೂಕಿನ ಸಂಪಾಜೆ ಕೆಳೆದ ಮೂರು ವರ್ಷಗಳಿಂದ ಪ್ರಕೃತಿ ವಿಕೋಪ ಗೊಳ್ಳುತ್ತಿದ್ದು ಇಂದು ಕ್ಲಾರೆನ್ಸ್ ಡಿಸೋಜಾ ಸಂಪಾಜೆ ರವರ ಬಾವಿ ದಿಡೀರ್ ಕುಸಿತಗೊಂಡಿದ್ದು ಕೊಟ್ಟಿಗೆ, ಮನೆ ಸಮೀಪ ಅಪಾಯದ ಸ್ಥಿತಿ ತಲುಪಿದೆ ಎಂದು ತಿಳಿದು ಬಂದಿದೆ.

ಮಳೆಯ ಅಬ್ಬರಕ್ಕೆ ಆಲೇಟ್ಟಿಯ ಕೂರ್ನಡ್ಕ ಬಳಿ ನಾಲ್ವರಲ್ಲಿ ಓರ್ವ ನೀರು ಪಾಲು.

ಸುಳ್ಯ ತಾಲೂಕಿನ ಆಲೇಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ಅಪರಿಚಿತ ವ್ಯಕ್ತಿಯೋರ್ವ ನೀರಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು ಸ್ಥಳಕ್ಕೆ ಅಗ್ನಿ ಶಾಮಕ ದಳ, ಕಂದಾಯ ಇಲಾಖೆ ,ಪೊಲೀಸರ ದೌಡಾಯಿಸಿದ್ದು ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ. ತಾಹಾಶೀಲ್ದಾರ್ ಭೇಟಿ ಚಿತ್ರ. ಕೊಡಗು ಕಡೆಯಿಂದ ರಬ್ಬರ ಟ್ಯಾಪಿಂಗ್ ಮಾಡುವ ಕೂಲಿಕಾರ್ಮಿಕರ ನಾಲ್ವರ ತಂಡ ಮಾವಜಿ ಕಡೆಯಿಂದ ಬಡ್ಡಡ್ಕ ಕಡೆಗೆ ನಡೆದುಕೊಂಡು...

ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ 9ನೇ ಶಾಖೆ ಬೆಳ್ಳಾರೆಯಲ್ಲಿ ಉದ್ಘಾಟನೆ.

ಬೆಳ್ಳಾರೆ: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ 9 ನೇ ಶಾಖೆಯು ಬೆಳ್ಳಾರೆಯಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಖಜಾನೆಯಾಗಿ ಬೆಳೆಯಲಿದೆ ಎಂದು ಶ್ರೀ ಆದಿ ಚುಂಚನಗಿರಿ ಮಹಾ ಸಂಸ್ಥಾನದ ಕಾವೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರು ಹೇಳಿದರು.ಬೆಳ್ಳಾರೆಯಲ್ಲಿ ಜು.6ರಂದು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು....

ಬಾಳುಗೋಡು : ಭಾರೀ ಮಳೆಗೆ ಮುಳುಗಿದ ಪದಕ ಸೇತುವೆ

ಕಳೆದೆರಡು ದಿನಗಳಿಂದ ಸುಳ್ಯ ತಾಲೂಕಿನಾದ್ಯಂತ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ನಿನ್ನೆಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಬಾಳುಗೋಡು ಗ್ರಾಮದ ಪದಕ ಸೇತುವೆ ಇಂದು ಕೆಲಕಾಲ ಮುಳುಗಡೆಯಾಗಿ ಸಂಚಾರಕ್ಕೆ ತೊಡಕುಂಟಾಗಿತ್ತು ಎಂದು ತಿಳಿದುಬಂದಿದೆ.

ಗುತ್ತಿಗಾರು : ಚಿಕಿತ್ಸೆಗಾಗಿ ಸಹಾಯಹಸ್ತ

ಗುತ್ತಿಗಾರು ಗ್ರಾಮದ ವಳಲಂಬೆ ನಿವಾಸಿ ಗಣಪಯ್ಯ ಹೊಸೊಳಿಕೆ ರವರಿಗೆ ಬ್ರೈನ್ ಎಮರೇಜ್ ಆಗಿದ್ದು, ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿದ್ದಾರೆ. ಇವರ ಚಿಕಿತ್ಸಾ ವೆಚ್ಚಕ್ಕೆ ಹೆಚ್ಚಿನ ಹಣದ ಅವಶ್ಯಕತೆಯನ್ನು ಮನಗಂಡು ಕಿರಣರಂಗ ಅದ್ಯಯನ ಸಂಸ್ಥೆಯ ಅಧ್ಯಕ್ಷ ಯೋಗೀಶ್ ಹೊಸೊಳಿಕೆ ಹಾಗೂ ವಳಲಂಬೆ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಪುರ್ಲುಮಕ್ಕಿ...

ಚೆಂಬು ವನಮಹೋತ್ಸವ ಕಾರ್ಯಕ್ರಮ.

ಮಡಿಕೇರಿ ವಿಭಾಗದ ಸಂಪಾಜೆ ಪ್ರಾದೇಶಿಕ ವಲಯದ ವತಿಯಿಂದ ಚೆಂಬು ಗ್ರಾಮದ ಕೂಡಡ್ಕ,ಹಿರಿಯ ಪ್ರಾಥಮಿಕ ಶಾಲೆ ಇವರ ಸಹಭಾಗಿತ್ವದಲ್ಲಿ, ಕೋಟಿ ವೃಕ್ಷ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ವನಮಹೋತ್ಸವ ಕಾರ್ಯಕ್ರಮ ಜು.4 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಪರಿಸರದ ಮಹತ್ವದ ಬಗ್ಗೆ ತಿಳಿಸಿ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು, ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿಗಳಾದ ಮಧುಸೂದನ್. ಯಂ. ಕೆ, ಶಾಲೆ...
Loading posts...

All posts loaded

No more posts

error: Content is protected !!