Ad Widget

ಸುಳ್ಯ : ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿ.ಕೃಷ್ಣಪ್ಪ ಆಯ್ಕೆ

ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ 124 ಮಂದಿ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ. ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಆಪ್ತ ಪುತ್ತೂರಿನ ಜಿ.ಕೃಷ್ಣಪ್ಪ ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಸುಳ್ಯ ಕ್ಷೇತ್ರಕ್ಕೆ ಕಾಂಗ್ರೆಸ್ ಹೊಸ ಅಭ್ಯರ್ಥಿ ಘೋಷಿಸಲಾಗಿದೆ.
ಕಳೆದ ನಾಲ್ಕು ಬಾರಿ ಸುಳ್ಯದಿಂದ ಸ್ಪರ್ಧಿಸಿದ್ದ ಡಾ.ರಘು ಬದಲಿಗೆ ಈ ಬಾರಿ ಕೃಷ್ಣಪ್ಪರಿಗೆ ಟಿಕೆಟ್ ನೀಡಲಾಗಿದೆ. ಕೆಪಿಸಿಸಿ ಸಂಯೋಜಕರಾಗಿರುವ ಜಿ.ಕೃಷ್ಣಪ್ಪ ಅವರು ಸುಳ್ಯ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿಯಾಗಿದ್ದಾರೆ.
ಭಾರಿ ನಿರೀಕ್ಷೆ ಇಟ್ಟು ತಾಲೂಕಿನ ವಿವಿಧೆಡೆ ಸಮಾಜಸೇವೆಯ ಕೆಲಸ ಆರಂಭಿಸಿದ್ದ ಮಡಿಕೇರಿಯ ನಂದಕುಮಾರ್ ಅವರಿಗೆ ನಿರಾಸೆಯಾಗಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!