ಮಳೆಗಾಲದಲ್ಲಿ ಒಂದು ದಿನ

ರಾತ್ರಿ 10:30 ರ ಸಮಯ. ನಾಳೆ ಬೆಳಿಗ್ಗೆ ಬೇಗ ಏಳಬೇಕೆಂದು ಅಲಾರಾಂ ಇರಿಸಿ ಮಲಗಿದೆ. ಆಗತಾನೇ ಮಳೆ ಶುರುವಾಗಿತ್ತು. ಹೊತ್ತು ಕಳೆದು ಬೆಳಗಾಯಿತು. ಬೆಳಿಗ್ಗೆ ಬೇಗ ಏಳಬೇಕೆಂದು ಅಲಾರಾಂ ಇರಿಸಿ ಮಲಗಿದ್ದ ನನಗೆ ಮಳೆಯಿಂದಾಗಿ ಏಳಲು ಮನಸ್ಸಾಗಲಿಲ್ಲ. ಇನ್ನೂ ಸ್ವಲ್ಪ ಹೊತ್ತು ನಿದ್ರಿಸೋಣ ಎಂದು ಪುನಃ ಮಲಗಿದೆ. ಅಲಾರಾಂ ಬಡಿದುಕೊಳ್ಳುತ್ತಲೇ ಇತ್ತು, ಆದರೆ ಏಳಲು ಮನಸ್ಸಾಗಲಿಲ್ಲ. ಸ್ವಲ್ಪ ಹೊತ್ತಿನ ನಂತರ ಕಣ್ಣು ತೆರೆದು ನೋಡಿದಾಗ ಮನೆಯ ಹೊರಗೆ ಬೆಳಕು ಕಾಣುತ್ತಿತ್ತು. ಬಡಬಡನೇ ಎದ್ದು ಗಂಟೆ ನೋಡಿದಾಗ ಎಂಟು ಗಂಟೆ ಕಳೆದಿತ್ತು, “ಅಯ್ಯೋ ದೇವಾ ಬೆಳಿಗ್ಗೆ ಬೇಗ ಏಳಬೇಕೆಂದು ಅಲಾರಾಂ ಇರಿಸಿ ಮಲಗಿದ್ದೆ, ಆದರೆ ಈ ಮಳೆಯಿಂದಾಗಿ ಪ್ರತೀ ದಿನ ಏಳುವುದಕ್ಕಿಂತಲೂ ತಡವಾಗಿ ಏಳಬೇಕಾಯ್ತು” ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾ ಮನೆಯ ಹೊರಗಡೆ ಬಂದೆ. ರಾತ್ರಿ ಕಳೆದು ಹಗಲಾದರೂ ಮಳೆ ಬಿಡುವ ಸಂಭವ ಕಾಣುತ್ತಿರಲಿಲ್ಲ. ಆಕಾಶ ಪೂರ್ತಿ ಮೋಡ ಮುಸುಕಿದ ವಾತಾವರಣವಿತ್ತು, ಇನ್ನು ಮಳೆ ಬಿಡುವ ಸಂಭವವಿಲ್ಲ ಎಂದು ಖಾತ್ರಿಯಾಯಿತು. ನಂತರ ಇನ್ನೇನು ಮಾಡುವುದು ಎಂದು ಮೊಬೈಲ್ ಹಿಡಿದುಕೊಂಡು ಕುಳಿತೆ. ಆದರೆ ನಾನು ಬೆಳಿಗ್ಗೆ ಎದ್ದ ಸಮಯವೇ ಸರಿ ಇಲ್ಲ ಎಂಬಂತೆ ಮೊಬೈಲ್ ನಲ್ಲಿ ಕರೆನ್ಸಿ ಖಾಲಿಯಾಗಿತ್ತು. ಇನ್ನೇನು ಮಾಡುವುದು ಎಂದು ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ ಸುಮ್ಮನೆ ಮಳೆಯನ್ನು ನೋಡುತ್ತಾ ಕುಳಿತೆ. ಆಗ ಹಿಂದಿನ ದಿನ ಯಾರದ್ದೋ ವಾಟ್ಸಾಪ್ ಸ್ಟೇಟಸ್ ನಲ್ಲಿ “ಮಳೆ+ಮ್ಯೂಸಿಕ್” ಎಂದು ನೋಡಿದ್ದು ನೆನಪಾಗಿ ಸೀದಾ ಮನೆಯೊಳಗಡೆ ಹೋಗಿ ಸ್ಪೀಕರ್ ಅನ್ನು ತೆಗೆದುಕೊಂಡು ಬಂದು ಮೆಮೊರಿ ಕಾರ್ಡ್ ಹಾಕಿ ಜೋರಾಗಿ ಹಾಡು ಹಾಕಿ ಕುಳಿತೆ. ನಾನು ಸ್ಪೀಕರ್ ನಲ್ಲಿ ಜೋರಾಗಿ ಹಾಡು ಹಾಕಿದ್ದು ಮಳೆಗೆ ಕೇಳಿಸಿತೋ ಏನೋ ಎಂಬಂತೆ ಮಳೆ ಮತ್ತಷ್ಟು ಜೋರಾಗತೊಡಗಿತು. ಹಾಗೆ ಸ್ವಲ್ಪ ಹೊತ್ತಿನಲ್ಲಿ ಮದ್ಯಾಹ್ನವಾಯಿತು. ಮದ್ಯಾಹ್ನ ಊಟದ ನಂತರ ಸಣ್ಣದಾಗಿ ಕಣ್ಣು ತೂಗಿ ನಿದ್ರೆ ಬಂತು. ನಿದ್ರೆಯಿಂದ ಎಚ್ಚರವಾದಾಗ ಸಂಜೆ ಗಂಟೆ ಐದಾಗಿತ್ತು. ಎಚ್ಚರವಾದಾಗ ಸಣ್ಣದಾಗಿ ಗಂಟಲು ನೋವು ಶುರುವಾಗಿತ್ತು, ಚಳಿಯಿಂದ ಗಂಟಲು ನೋವು ಶುರುವಾಗಿರಬಹುದು ಅಂದುಕೊಂಡು ಸುಮ್ಮನಾದೆ. ಸ್ವಲ್ಪ ಹೊತ್ತಿನಲ್ಲಿ ರಾತ್ರಿಯಾಯಿತು. ರಾತ್ರಿಯಾಗುತ್ತಲೇ ಗಂಟಲು ನೋವು ಜೋರಾಗತೊಡಗಿತು, ಜೊತೆಗೆ ತಲೆನೋವು ಕೂಡ ಶುರುವಾಯಿತು. ಜ್ವರ ಬರಬಹುದು ಎಂಬ ಭಯವಿತ್ತು, ಆ ಭಯದಿಂದಲೇ ರಾತ್ರಿ ನಿದ್ರಿಸಿದೆ. ಬೆಳಿಗ್ಗೆ ಎಚ್ಚರವಾದಾಗ ನಿಜವಾಗಿಯೂ ಜ್ವರ ಶುರುವಾಗಿತ್ತು…

. . . . . . . . .

✍️ಉಲ್ಲಾಸ್ ಕಜ್ಜೋಡಿ

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading