Ad Widget

ಕಲ್ಮಕಾರು :- ಗುಳಿಕ್ಕಾನಕ್ಕೆ ಭೂ ವಿಜ್ಞಾನಿಗಳು ಮತ್ತು ಗಣಿ ಇಲಾಖೆಯ ಅಧಿಕಾರಿಗಳ ಭೇಟಿ : ಸ್ಥಳ ಪರಿಶೀಲನೆ, ಮಾಹಿತಿ ಸಂಗ್ರಹ

ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಮಕಾರಿನ ಗುಳಿಕ್ಕಾನದ ಗುಡ್ಡದಲ್ಲಿ 2018 ರಲ್ಲಿ ಭೂಮಿ ಆಳವಾಗಿ ಬಿರುಕು ಬಿಟ್ಟಿತು. ಆ ಸಂದರ್ಭದಲ್ಲಿ ಗುಳಿಕ್ಕಾನದ ಗುಡ್ಡದ ಭಾಗದಲ್ಲಿ 10 ಕುಟುಂಬಗಳು ವಾಸಿಸುತ್ತಿದ್ದವು. ಅಲ್ಲಿರುವ ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಿ 4 ವರ್ಷಗಳಾದರೂ ಈವರೆಗೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಗುಳಿಕ್ಕಾನ ಪ್ರದೇಶ ಜನರ ವಾಸಕ್ಕೆ ಯೋಗ್ಯವಾಗಿದೆಯೇ ಎಂದು ತಿಳಿಯಲು...

ಅಡ್ಡನಪಾರೆ : ಮನೆ ಮೇಲೆ ಮರ ಬಿದ್ದು ಸಂಪೂರ್ಣ ಹಾನಿ : ಮಹಿಳೆಯ ತಲೆಗೆ ಗಾಯ

ನಿರಂತರ ಮಳೆಯಿಂದ ಮನೆ ಮೇಲೆ ಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡ ಹಾಗೂ ಮನೆಯೊಳಗಿದ್ದ ಮಹಿಳೆಯ ತಲೆಗೆ ಗಂಭೀರ ಗಾಯಗಳಾದ ಘಟನೆ ಇಂದು ನಡೆದಿದೆ. ದೇವಚಳ್ಳ ಗ್ರಾಮದ ಅಡ್ಡನಪಾರೆ ನಿವಾಸಿ ದೈವ ನರ್ತಕ ಚಿದಾನಂದ ಅವರ ಮನೆಗೆ ಮನೆಗೆ ಮರ ಬಿದ್ದು ಮನೆ ಸಂಪೂರ್ಣ ಕುಸಿದಿದೆ. ಮನೆಯೊಳಗಿದ್ದ ಚಿದಾನಂದ ರವರ ಪತ್ನಿ ಶೀಲಾವತಿಯ ತಲೆಗೆ ಗಂಭೀರ...
Ad Widget

ಬೊಳುಬೈಲು : ನವಚೇತನ ಚಿಣ್ಣರ ಕೂಟ ಉದ್ಘಾಟನೆ

ನವಚೇತನ ಯುವಕ ಮಂಡಲ (ರಿ.) ಬೊಳುಬೈಲು ಇದರ ನವಚೇತನ ಚಿಣ್ಣರ ಕೂಟದ ಉದ್ಘಾಟನಾ ಸಮಾರಂಭ ಜು‌.3ರಂದು ಯುವಕ ಮಂಡಲದ ಸಭಾಭವನ ಯುವಸದನ ಬೊಳುಬೈಲುನಲ್ಲಿ ನಡೆಯಿತು.ಸ್ನೇಹ ಶಿಕ್ಷಣ ಸಂಸ್ಥೆ ಸುಳ್ಯ ಇದರ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಉದ್ಘಾಟಿಸಿ, ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದ ಅವರು ಉದ್ಯೋಗದ ಕಾರಣಕ್ಕಾಗಿ ಶಿಕ್ಷಣ ಪಡೆಯುವ ಪ್ರಸ್ತುತ ಸಂದರ್ಭದಲ್ಲಿ ಮಕ್ಕಳ...

ಸುಬ್ರಹ್ಮಣ್ಯ : ಭಾರಿ ಮಳೆಯಿಂದ ಸ್ನಾನ ಘಟ್ಟ ಮುಳುಗಡೆ

ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕುಮಾರಧಾರ ನದಿ ತುಂಬಿ ಹರಿಯುತ್ತಿದೆ. ಇದರಿಂದಾಗಿ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ. ಸದ್ಯ ಪ್ರವಾಹ ನೀರಿನಲ್ಲೇ ಭಕ್ತರು ತೀರ್ಥಸ್ನಾನ ನೆರವೇರಿಸುತ್ತಿರುವ ದೃಶ್ಯ ಕಂಡುಬರುತ್ತಿದೆ. ಭಕ್ತರು ನದಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ.

ಜೇಸಿಐ ಪಂಜ ಪಂಚಶ್ರೀಗೆ ವಲಯಾಭಿವೃದ್ಧಿ ಪ್ರಶಸ್ತಿ

ಜೇಸಿಐ ವಿಟ್ಲ ಘಟಕದ ವತಿಯಿಂದ ಜು.3 ರಂದು ನಡೆದ ವಲಯದ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನದಲ್ಲಿ ಜೇಸಿಐ ಪಂಜ ಪಂಚಶ್ರೀ ಘಟಕಕ್ಕೆ ವಲಯದಿಂದ ಕೊಡಮಾಡುವ ವಲಯಾಭಿವೃದ್ಧಿ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯನ್ನು ಜೇಸಿಐ ಪಂಜ ಪಂಚಶ್ರೀಯ ಘಟಕಾಧ್ಯಕ್ಷರಾದ ಜೆ.ಎಫ್.ಎಮ್ ಶಿವಪ್ರಸಾದ್ ಹಾಲೆಮಜಲು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಘಟಕದ ಪೂರ್ವಾದ್ಯಕ್ಷರಾದ ಜೆ.ಎಫ್.ಎಂ. ನಾಗಮಣಿ ಕೆದಿಲ, ಉಪಾಧ್ಯಕ್ಷರಾದ ಜೆ ಎಫ್ ಎಮ್...

ಕಣ್ಕಲ್ : ಶಾಲಾ ಮಕ್ಕಳಿಗೆ ಸಮವಸ್ತ್ರ ಮತ್ತು ನೋಟ್ ಪುಸ್ತಕ ವಿತರಣೆ, ಸನ್ಮಾನ

ಕೇನ್ಯ ಶ್ರೀ ದುರ್ಗಾ ಸೇವಾ ಸಂಘದ "ನಮ್ಮೂರ ಶಾಲೆ ಉಳಿಸಿ ಅಭಿಯಾನಕ್ಕೆ ಓಗೊಟ್ಟು ಮುಂಬಯಿಯ ಓಂ ಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ್" ಇವರು ಕೇನ್ಯ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಣ್ಕಲ್ ಇಲ್ಲಿನ ಮಕ್ಕಳಿಗೆ ಸಮವಸ್ತ್ರ ಮತ್ತು ನೋಟ್ ಪುಸ್ತಕ ಗಳನ್ನು ಕೊಡುಗೆಯಾಗಿ ನೀಡಲಾಯಿತು. ಕಣ್ಕಲ್ ಶಾಲೆಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ...

ನೀನಾಸಂ ಗೆ ಆಯ್ಕೆ ಆದ ಮಮತಾ ಕಲ್ಮಕಾರ್‌ಗೆ ರಂಗಮನೆಯಲ್ಲಿ ಆತ್ಮಿಯವಾಗಿ ಬೀಳ್ಕೊಡುಗೆ

ರಾಜ್ಯದ ಅತ್ಯತ್ತಮ ಮತ್ತು ಪ್ರತಿಷ್ಠಿತ ರಂಗ ತರಬೇತಿ ಸಂಸ್ಥೆಯಾದ ನೀನಾಸಂ ಗೆ ಇತ್ತೀಚೆಗೆ ಆಯ್ಕೆ ಪ್ರಕ್ರಿಯೆ ನಡೆದಿದ್ದು ಸುಳ್ಯ ತಾಲೂಕಿನ ಕಲ್ಮಕಾರಿನ ಮಮತ ಆಯ್ಕೆಯಾಗಿದ್ದಾರೆ. ರಾಜ್ಯದ ವಿವಿಧ ಕಡೆಗಳಿಂದ ಸುಮಾರು 125 ರಂಗಾಸಕ್ತರು ಭಾಗವಹಿಸಿದ್ದು ಅದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಮತಾ ಕಲ್ಮಕಾರು ಆಯ್ಕೆ ಆಗಿರುವುದು ಹೆಮ್ಮೆಯ ವಿಚಾರ. ಸುಳ್ಯದ ರಂಗಮನೆಯ ವಿದ್ಯಾರ್ಥಿ ಆಗಿರುವ ಮಮತ...
error: Content is protected !!