ಕನ್ನಯ್ಯ ಲಾಲ್ ಭೀಕರ ಹತ್ಯೆಯನ್ನು ಖಂಡಿಸಿ ವಿ.ಹೆಚ್.ಪಿ. ಪ್ರತಿಭಟನೆ – ರಾಷ್ಟ್ರಪತಿಗೆ ಮನವಿ

ರಾಜಸ್ಥಾನದ ಉದಯಪುರ ಎಂಬಲ್ಲಿ ನಡೆದ ಟೈಲರ್ ಕನ್ನಯ್ಯ ಲಾಲ್ ರವರ ಭೀಕರ ಹತ್ಯೆಯನ್ನು ಖಂಡಿಸಿ ಸುಳ್ಯ ವಿಶ್ವ ಹಿಂದೂ ಪರಿಷದ್, ಬಜರಂಗದಳ ಪ್ರಖಂಡದ ವತಿಯಿಂದ ಪ್ರತಿಭಟನಾ ಸಭೆಯು ಸುಳ್ಯ ತಾಲೂಕು ಕಛೇರಿ ಮುಂಭಾಗದಲ್ಲಿ ಜೂ.30 ರಂದು ನಡೆಯಿತು. ಬಳಿಕ ಸೇರಿದ ಸಂಘಟನೆಯ ಕಾರ್ಯಕರ್ತರು ತಹಶಿಲ್ದಾರರ ಮುಖಾಂತರ ಹತ್ಯೆಗೈದ ಕೊಲೆಗಡುಕರಿಗೆ ತಕ್ಕ ಶಿಕ್ಷೆ ವಿಧಿಸುವಂತೆ ರಾಷ್ಟ್ರಪತಿಯವರಿಗೆ ಮನವಿಯನ್ನು...

ಸುಬ್ರಹ್ಮಣ್ಯದಿಂದ ಹಿಂತಿರುಗಿದ ರಾಜ್ಯಪಾಲರು – ಸುಳ್ಯ- ಮಡಿಕೇರಿ ಮಾರ್ಗವಾಗಿ ಬೆಂಗಳೂರಿಗೆ

ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರವರು ನಿನ್ನೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ , ದೇವರ ದರ್ಶನ ಪಡೆದು, ಸರ್ಪ ಸಂಸ್ಕಾರ ಪೂಜೆ ನೆರವೇರಿಸಿ ಇಂದು ಸುಳ್ಯ ಮಾರ್ಗವಾಗಿ ಮಡಿಕೇರಿಗೆ ತೆರಳಿದರು. ಸುಳ್ಯ ನಗರದಲ್ಲಿ ಸುಳ್ಯ ಪೋಲೀಸರು ಬಂದೋಬಸ್ತ್ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
Ad Widget

5 ನೇ ಬಾರಿಗೆ ಸದ್ದಿನೊಂದಿಗೆ ಕಂಪಿಸಿದ ಭೂಮಿ

ಕೊಡಗು ಹಾಗೂ ದಕ್ಷಿಣ ಕನ್ನಡ ಗಡಿ ಭಾಗಗಳಲ್ಲಿ ೫ನೇ ಬಾರಿ ಕಂಪನದ ಅನುಭವ ಉಂಟಾಗಿದೆ. ಚೆಂಬು, ಗೂನಡ್ಕ ಹಾಗೂ ಉಬರಡ್ಕದಲ್ಲಿ 10.45 ಕ್ಕೆ ಕಂಪಿಸಿದೆ ಎಂದು ತಿಳಿದು ಬಂದಿದೆ. ಜನರು ಕಂಪನಕ್ಕೆ ಹೆದರಿ ಮನೆಯಿಂದ ಹೊರಗೆ ಬಂದಿದ್ದಾರೆ ಎನ್ನಲಾಗಿದೆ.

ಕಲ್ಮಕಾರು :-l ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಮನೆಯ ಮಾಡಿನ ದುರಸ್ತಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಲಯ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯದ ವತಿಯಿಂದ ಜೂ.28 ರಂದು ಕಲ್ಮಕಾರು ಪದ್ನಡ್ಕದ ಕಮಲ ಎಂಬುವವರ ಮನೆಯ ಮಾಡಿನ ದುರಸ್ತಿ ಕಾರ್ಯ ಮಾಡಲಾಯಿತು. ಜೂ.28 ರಿಂದ ಜೂ.30 ರವರೆಗೆ ದುರಸ್ತಿ ಕಾರ್ಯ ನಡೆಸಲಾಯಿತು. ಜೂ.30 ರಂದು ಮನೆಯ ಸ್ವಚ್ಚತೆ ಮಾಡಿ ಮನೆಯವರಿಗೆ ಬಿಟ್ಟು ಕೊಡಲಾಯಿತು.ಈ ಮಾಡಿನ...

ಸುಳ್ಯ ಮಾರ್ಗವಾಗಿ ರಾಜ್ಯಪಾಲರು ಮಡಿಕೇರಿಗೆ – ಅಡ್ಡಾದಿಡ್ಡಿ ವಾಹನ ನಿಲ್ಲಿಸದಂತೆ ಪೋಲೀಸರ ಸೂಚನೆ

ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಕುಕ್ಕೆ ಸುಬ್ರಹ್ಮಣ್ಯದಿಂದ ಸುಳ್ಯ ಮಾರ್ಗವಾಗಿ ಮಡಿಕೇರಿಗೆ ಪ್ರಯಾಣಿಸಲಿದ್ದು, ಸುಳ್ಯ ನಗರ ಸೇರಿದಂತೆ ಸುಬ್ರಹ್ಮಣ್ಯ-ಸುಳ್ಯ- ಮಡಿಕೇರಿ ಮಾರ್ಗದಲ್ಲಿ ವಾಹನ ಚಾಲಕರು ಅಡ್ಡಾದಿಡ್ಡಿಯಾಗಿ ವಾಹನ ಪಾರ್ಕಿಂಗ್ ಮಾಡದಂತೆ, ವಾಹನ ಚಲಾಯಿಸದಂತೆ ಪೊಲೀಸ್ ಪ್ರಕಟಣೆ ಹೊರಡಿಸಲಾಗಿದೆ.

ಸುಳ್ಯ ತಾಲೂಕಿನಲ್ಲಿ 4 ನೇ ಬಾರಿಗೆ ಕಂಪಿಸಿದ ಭೂಮಿ – 1.8 ತೀವ್ರತೆ ದಾಖಲು

ಸುಳ್ಯ : ನಾಲ್ಕನೇ ಬಾರಿಗೆ ಸುಳ್ಯದ ವಿವಿಧೆಡೆ ಭೂಕಂಪದ ಅನುಭವವಾಗಿದೆ. ರಾತ್ರಿ ಗಂಟೆ ಸರಿಸುಮಾರು 1-15 ಕ್ಕೆ ಕಂಪಿಸಿದ ಅನುಭವವಾಗಿದೆ. ಸಂಪಾಜೆ, ಗೂನಡ್ಕ, ಪೆರಾಜೆ, ಅರಂಬೂರು, ಶಾಂತಿನಗರ, ಹಳೆಗೇಟು ಭಾಗದಲ್ಲಿ ಭೂಮಿ ಕಂಪಿಸಿದ್ದು ಇನ್ನು ಹಲವರಿಗೆ ದೊಡ್ಡ ಶಬ್ದದ ಅನುಭವವಾಗಿದೆ‌ ಎಂದು ತಿಳಿದುಬಂದಿದೆ. ರಿಕ್ಟರ್ ಮಾಪಕದಲ್ಲಿ 1.8 ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ. ಈ ಬಾರಿ...
error: Content is protected !!