Ad Widget

ಬಾಳುಗೋಡು : ಮರದ ಕಾಲು ಸೇತುವೆ ಕೊಚ್ಚಿ ಹೋಗಿ 11 ಮನೆಗಳ ಸಂಪರ್ಕ ಕಡಿತ – ನಿರ್ಲಕ್ಷ್ಯಕ್ಕೆ ಒಳಗಾದ ಉಪ್ಪುಕಳ

ಬಾಳುಗೋಡು ಗ್ರಾಮದ ಉಪ್ಪುಕಳ ಎಂಬಲ್ಲಿ ಸ್ವಾತಂತ್ರ್ಯ ಬಂದಾಗಿನಿಂದಲೂ ಮರದ ಪಾಲ ನಿರ್ಮಿಸಿ ಮಳೆಗಾಲ ದೈನಂದಿನ ಚಟುವಟಿಕೆಗಳಿಗೆ ತೆರಳುತ್ತಿದ್ದರು. ಶಾಲಾ ಮಕ್ಕಳು ಜೀವ ಕೈಯಲ್ಲಿ ಹಿಡಿದು ಪಾಲ ದಾಟುವ ಸ್ಥಿತಿ ಇಂದಿನವರೆಗೂ ಮುಂದುವರಿದಿದೆ. ಸ್ವಾತಂತ್ರ್ಯ ಬಂದ ಮೇಲಾದರೂ ಸೇತುವೆ ಆಗಬಹುದೆನ್ನುವ ಹಿರಿಯರು ಕನಸು ನನಸಾಗಿಯೇ ಉಳಿದಿದೆ. ಪ್ರತಿ ವರ್ಷ ಮಳೆಗೆ ಮೊದಲು ಈ ಭಾಗದ ನಿವಾಸಿಗಳೇ ಸೇರಿ ಸ್ಥಳೀಯವಾಗಿ ಸಿಗುವ ಮರ,ಬಿದಿರು, ಬಳ್ಳಿಗಳನ್ನು ಬಳಸಿ ಕಾಲು ಸೇತುವೆ ದುರಸ್ತಿ ಪಡಿಸಿ ಜೀವಮಾನ ಕಳೆಯುತ್ತಿದ್ದಾರೆ. ಈ ಭಾರಿ ಸುರಿದ ವಿಪರೀತ ಮಳೆಗೆ ಹೆಚ್ಚಿನ ಪ್ರವಾಹ ಬಂದು ಕಾಲು ಸೇತುವೆ ನೀರಿನಲ್ಲಿ ಭಾಗಶಃ ಕೊಚ್ಚಿ ಹೋಗಿದೆ. ಇಲ್ಲಿ ನೆಲೆಸಿರುವ 11 ಮನೆಗಳಿಗೆ ಈ ದಾರಿಯಿಲ್ಲದಾಗಿದೆ.

ಯಾವುದೇ ಬೇಡಿಕೆ ಸಲ್ಲಿಸಿದರೂ, ಮತದಾನ ಬಹಿಷ್ಕರಿಸಿದರೂ ಯಾರು ಕ್ಯಾರೇ ಅನ್ನುತ್ತಿಲ್ಲ, ಕಾರಣ ಜನಸಂಖ್ಯೆ ಕಡಿಮೆ. ಇಲ್ಲಿ ಒಟ್ಟು 49 ಜನ ನಿವಾಸಿಗಳಿದ್ದು, ಒಬ್ಬ ಅಂಗವಿಕಲರಾಗಿದ್ದಾರೆ.

ಬೇಸಿಗೆ ಕಾಲದಲ್ಲಿ ಹೊಳೆಯ ನೀರು ಕಡಿಮೆಯಾದ ನಂತರ ವಾಹನಗಳು ಹೋಗಲು ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಈಗ ಕಾಲು ಸೇತುವೆ ಕೊಚ್ಚಿ ಹೋಗಿ ಶಾಲೆಗೆ ಹೋಗುವ ವಿದ್ಯಾರ್ಥಿಗಳ ಭವಿಷ್ಯ ಹಾಗೂ ಅಸೌಖ್ಯತೆಗೊಳಗಾದವರ ಪಾಡು ಹೇಳತೀರದಾಗಿದೆ. ಜನರ ಬೇಡಿಕೆಗೆ ಯಾವುದೇ ಅಧಿಕಾರಿಗಳು,ಜನಪ್ರತಿನಿಧಿಗಳು ಕ್ಯಾರೇ ಅನ್ನುತ್ತಿಲ್ಲ ಎಂಬ ಅಳಲನ್ನು ನಿವಾಸಿಗಳು ತೋಡಿಕೊಳ್ಳುತ್ತಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!