Ad Widget

ಐವರ್ನಾಡಿನಲ್ಲಿ ದಿ.ಎನ್.ಎಂ.ಬಾಲಕೃಷ್ಣ ಗೌಡರ ಪುತ್ಥಳಿ ಅನಾವರಣ ; ಸಾಮಾಜಿಕ ಪರಿವರ್ತನೆ ತಂದ ದಿ.ಬಾಲಕೃಷ್ಣ ಗೌಡರ ಮಾರ್ಗದರ್ಶದಂತೆ ಯುವ ಜನತೆ ನಡೆಯಬೇಕಿದೆ – ಡಿ.ವಿ.ಸದಾನಂದ ಗೌಡ

ಸಮಾಜ ಕಟ್ಟಿದವರು, ಸಮಾಜಕ್ಕೆ ಬೆಳಕಾದವರನ್ನು ಸಮಾಜ ಎಂದೂ ನೆನಪಿಸುತ್ತದೆ. ಅದರಂತೆ ಆದರ್ಶ ಪುರುಷರ ಪುತ್ಥಳಿ ನಿರ್ಮಾಣವಾಗಿದೆ. ಆದರ್ಶ ಬದುಕಿನ ಮೂಲಕ ಸಮಾಜಕ್ಕೆ ಬೆಳಕಾಗಿದ್ದ, ಹೊಸ ತಲೆಮಾರಿಗೆ ಪ್ರೇರಣೆಯಾದ ದಿ. ಎನ್.ಎಂ.ಬಾಲಕೃಷ್ಣ ಗೌಡ ಅವರು ಸದಾ ಸ್ಮರಣೀಯರು ಇವರ ಮಾರ್ಗದರ್ಶನದಂತೆ ಯುವ ಜನತೆ ನಡೆಯಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ
ಮಾಜಿ ಕೇಂದ್ರ ಸಚಿವ, ಸಂಸದ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ಐವರ್ನಾಡಿನ ದಿ.ಎನ್.ಎಂ. ಬಾಲಕೃಷ್ಣ ಗೌಡರ ಪುತ್ಥಳಿ ರಚನಾ ಸಮಿತಿ ವತಿಯಿಂದ ಐವನಾರ್ಡಿನಲ್ಲಿ ನಿರ್ಮಾಣಗೊಂಡ ಐವರ್ನಾಡಿನ ಅಣ್ಣ ಎಂದೇ ಎಂದೇ ಖ್ಯಾತರಾದ ದಿ.ಎನ್.ಎಂ.ಬಾಲಕೃಷ್ಣ ಗೌಡರ ಭವ್ಯ ಪುತ್ಥಳಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಐವರ್ನಾಡು ಗ್ರಾಮದ ಬಗ್ಗೆ ಎನ್.ಎಂ.ಬಾಲಕೃಷ್ಣ ಗೌಡರ ಜೀವನ ಹಾಗು ಸಾಮಾಜಿಕ
ಪರಿವರ್ತನೆಯ ಬಗ್ಗೆ ಸಮಗ್ರ ಅಧ್ಯಯನ ನಡೆದು ಅದು ಪ್ರಕಟಗೊಳ್ಳಬೇಕು ಅದು ಮುಂದಿನ ತಲೆಮಾರಿಗೆ ಪ್ರೇರಣೆಯಾಗಬಹುದು ಎಂದು ಅವರು ಸಲಹೆ ನೀಡಿದರು. ಶಾಲೆಗಳೇ ಇಲ್ಲದ ದಿನಗಳಲ್ಲಿ ಶಾಲೆ ಕಟ್ಟಿಸಿದ ಖ್ಯಾತಿ ದಿ. ಬಾಲಕೃಷ್ಣರದ್ದು ಎಂದರು.

ಆಡಳಿತ ಪಕ್ಷ ತನ್ನ ಕೆಲಸವನ್ನು ಮಾಡುವಂತೆಯೇ
ವಿರೋಧ ಪಕ್ಷ ತನ್ನ ಕೆಲಸವನ್ನು ಮಾಡಬೇಕು. ಪ್ರಜಾಪ್ರಭುತ್ವಕ್ಕೆ ಅದು ಅನಿವಾರ್ಯ. ಆದರೆ ಇಂದು ಕಾಣುತ್ತಿರುವ ಅಡ್ಜಸ್ಟ್ಮೆಂಟ್ ಪೊಲಿಟಿಕ್ಸ್ ದೇಶದ ರಾಜಕೀಯ ವ್ಯವಸ್ಥೆಯನ್ನು ಅಧಃಪತನಕ್ಕೆ ತಳ್ಳುತ್ತಿದೆ. ಇದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ಅವರು ಹೇಳಿದರು. ಸದಾ ಮೊಬೈಲ್‌ನಲ್ಲಿಯೇ
ಮುಳುಗಿರುವವರನ್ನು ಕಾಣುತ್ತೇವೆ. ಒಂದು ಮೊಬೈಲ್
ಇದ್ದರೆ ಎಲ್ಲವನ್ನೂ ಸಾಧಿಸಿದ್ದೇನೆ ಎಂಬ ಭಾವನೆ ಬೇಡ
ಎಂದು ಅವರು ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಕೊಡುಗೆ ನೀಡಿದವರನ್ನು ಸಮಾಜ ಸದಾ ಸ್ಮರಿಸುತ್ತದೆ ಎಂಬುದಕ್ಕೆ ಇಂದಿನ ಕಾರ್ಯಕ್ರಮ ಉತ್ತಮ ಉದಾಹರಣೆ ಎಂದರು. ಎಂ.ಎನ್.ಬಾಲಕೃಷ್ಣ ಗೌಡರು ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ ಕಾರಣದಿಂದ ಅವರು ಮರೆಯಾಗಿ 50 ವರ್ಷ ಕಳೆದ ಬಳಿಕವೂ ಪುತ್ಥಳಿ ನಿರ್ಮಾಣ ಮಾಡಿ ಅವರಿಗೆ ಗೌರವ ಸಲ್ಲಿಸುವ ಕಾರ್ಯ ನಡೆದಿದೆ. ಜೊತೆಗೆ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಕೆಲಸ ಆಗಬೇಕು ಎಂದರು. ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ, ಸಂಸ್ಕರಣಾ
ಭಾಷಣ ಮಾಡಿದ ಖ್ಯಾತ ಸಾಹಿತಿ ಸುಬ್ರಾಯ ಚೊಕ್ಕಾಡಿ ಜನಪ್ರಿಯ ಜನನಾಯಕರಾಗಿದ್ದ ಬಾಲಕೃಷ್ಣ ಗೌಡರಿಗೆ ಸಲ್ಲಿಸಿದ ಗೌರವ ಇದು. ಅವರ ಸತ್ಕಾರ್ಯಗಳ ಕಾರಣದಿಂದ ಅವರು ಸದಾ ನೆನಪಿನಲ್ಲಿರುತ್ತಾರೆ ಎಂದರು. ನಾಮಫಲಕವನ್ನು ಅನಾವರಣಗೊಳಿಸಿದ ರಾಜ್ಯ ಒಕ್ಕಲಿಗ ಗೌಡರ ಸಂಘದ ಉಪಾಧ್ಯಕ್ಷ ಹಾಗು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಪ್ರಧಾನ ಕಾರ್ಯದರ್ಶಿ ಡಾ.ರೇಣುಕಾಪ್ರಸಾದ್ ಕೆ.ವಿ ಅವರನ್ನು ಸನ್ಮಾನಿಸಲಾಯಿತು. ಸುಳ್ಯ ಸಾಂದೀಪ್ ವಿಶೇಷ ಶಾಲೆಯ ಅಧ್ಯಕ್ಷ ಎಂ.ಬಿ.ಸದಾಶಿವ, ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಎಂ.ಎನ್. ಬಾಲಕೃಷ್ಣ ಗೌಡರ ಪುತ್ರಿ ಎಂ.ಎನ್.ಜ್ಯೋತ್ಸ್ನಾ ಪತಿ ದಯಾಕರ ಬಂಗಾರ ಅವರನ್ನು ಸನ್ಮಾನಿಸಲಾಯಿತು. ಕಬಡ್ಡಿ ಪಟು ಸಚಿನ್ ಪ್ರತಾಪ್ ಅವರನ್ನು ಅಭಿನಂದಿಸಲಾಯಿತು. ಪುತ್ಥಳಿ ರಚನಾ ಸಮಿತಿಯ ಕೋಶಾಧಿಕಾರಿ ರವಿಪ್ರಸಾದ್ ಚೆಮ್ನೂರು, ಉಪಾಧ್ಯಕ್ಷರಾದ ಮಾಧವ ಭಟ್ ಶೃಂಗೇರಿ, ಸುಜಾತ ಪವಿತ್ರಮಜಲು, ಅಚ್ಚುತ ಗೌಡ ಕುದುಂಗು, ದಾಮೋದರ ಗೌಡ ಜಬಳೆ, ಡಾ.ಬಾಲಸುಬ್ರಹ್ಮಣ್ಯ ಭಟ್ ಪಾಲೆಪ್ಪಾಡಿ, ಪದ್ಮನಾಭ ಗೌಡ ನೂಜಾಲು, ಸಂಚಾಲಕರಾದ
ಮಹೇಶ್ ಜಬಳೆ, ಸಾತ್ವಿಕ್ ಕುದುಂಗು, ರಾಮಚಂದ್ರ ಗೌಡ ಪಳ್ಳತ್ತಡ್ಕ, ಕೇಶವ ಗೌಡ ಹಸಿಯಡ್ಕ, ಚಂದ್ರಶೇಖರ ಮಡ್ತಿಲ, ನವೀನಚಂದ್ರ ಚಾತುಬಾಯಿ, ರಮೇಶ್ ಗೌಡ ಮಿತ್ತಮೂಲೆ,ಸಂಪ್ರೀತ್ ಮಿತ್ತಮೂಲೆ, ಶಾಂತರಾಮ
ಕಣಿಲೆಗುಂಡಿ,ಶಿವಪ್ರಸಾದ್ ಕಟ್ಟತ್ತಾರು, ಸುಬ್ರಹ್ಮಣ್ಯ
ಬಾಂಜಿಕೋಡಿ, ಅನಂತಕುಮಾರ ಖಂಡಿಗೆಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ಥಳಿ ರಚನಾ ಸಮಿತಿಯ ಅಧ್ಯಕ್ಷ ಎಸ್.ಎನ್.ಮನ್ಮಥ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ದಿನೇಶ್ ಮಡ್ತಿಲ ವಂದಿಸಿದರು. ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!