Ad Widget

ಎ.12 ರಿಂದ ಕೇಶವ ಕೃಪಾದಲ್ಲಿ ಅಂತರ್ ರಾಜ್ಯ ವೇದ ಯೋಗ ಮತ್ತು ಕಲಾ ಶಿಬಿರ

ಹಳೆಗೇಟಿನಲ್ಲಿರುವ ಶ್ರೀ ಕೇಶವಕೃಪಾದಲ್ಲಿ 22 ನೇ ವರ್ಷದ ಅಂತರ್ ರಾಜ್ಯ ಮಟ್ಟದ ವೇದ, ಯೋಗ,ಕಲಾ ಶಿಬಿರ ಎ. 12 ರಿಂದ ಮೇ.30 ರವರೆಗೆ ನಡೆಯಲಿದೆ ಎಂದು ಸಂಚಾಲಕ ವೇದಮೂರ್ತಿ ಅಭಿರಾಮ್ ಭಟ್ ಹೇಳಿದರು.
ಅವರು ಮಾ.26 ರಂದು ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿ, ಶಿಬಿರದಲ್ಲಿ ಉಚಿತವಾಗಿ ವೇದ ಯೋಗ ಹಾಗೂ ಕಲಾ ಶಿಕ್ಷಣದೊಂದಿಗೆ ಅಶನ, ವಸನ, ಪಠ್ಯ, ಪುಸ್ತಕಗಳು, ವ್ಯಾಸಪೀಠ ಇವುಗಳನ್ನು ಉಚಿತವಾಗಿ ನಡೆಸಿಕೊಂಡು ಬಂದಿದೆ. ಶಿಬಿರದಲ್ಲಿ ಯೋಗಾಭ್ಯಾಸ, ಭಜನೆ, ಸಂಕೀರ್ತನೆ, ಹಾಡು ಕುಣಿತ ಹಾಗೆಯೇ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿ ಜಾದೂ, ಮಿಮಿಕ್ರಿ, ಮುಖವಾಡ ತಯಾರಿ, ಬೊಂಬೆ ತಯಾರಿ, ಮಾತುಗಾರಿಕೆ, ಜಾನಪದ ನೃತ್ಯ ಹಾವುಗಳ ಮಾಹಿತಿ, ಯಕ್ಷಗಾನ, ರಂಗಕಲೆ, ರಂಗನಾಟ, ರಂಗಗೀತೆ, ಚಿತ್ರ ಕಲೆ ಇವಗಳನ್ನು ಸುಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು. ಮೂರು ವರ್ಷಗಳ ಪೂರೈಸಿದ ವಿದ್ಯಾರ್ಥಿಗಳಿಗೆ ಅಗ್ನಿಮುಖ ಪ್ರಯೋಗ ಹಾಗೂ ದುರ್ಗಾಸಪ್ತಶತೀ ಪಾಠಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಹಾಗೂ ಋಗ್ವೇದ, ಯಜುರ್ವೇದ ವಿಭಾಗಗಳಲ್ಲಿ ಒಟ್ಟು 6 ತರಗತಿಗಳು ನಡೆಯಲಿದ್ದು, ರಾಜ್ಯ ಪ್ರಸಿದ್ಧ ವೇದ ವಿದ್ವಾಂಸರು, ಕಲಾ ತಜ್ಞರು, ಯೋಗ ಶಿಕ್ಷಕರು, ಭಾಗವಹಿಸಲಿದ್ದಾರೆ. ಶಿಬಿರದಲ್ಲಿ 120 ವಿದ್ಯಾರ್ಥಿಗಳಗಷ್ಟೇ ಅವಕಾಶ ಎಂದರು.
ಉದ್ಘಾಟನಾ ಸಂಭ್ರಮವು ಏ.12ರಂದು ನಡೆಯಲಿಗದೆ ಕಾರ್ಯಕ್ರಮವನ್ನು ಶಿಬಿರದ ಹಿರಿಯ ವಿದ್ಯಾರ್ಥಿ, ಮೈಸೂರಿನ ನರರೋಗತಜ್ಞರಾದ ಡಾ| ಶಾಸ್ತಾರ ಪನೆಯಾಲ ಹಾಗೂ ಶ್ರೀಮತಿ ಸೀಮಾ ಶಾಸ್ತಾರ ದಂಪತಿಗಳು ಉದ್ಘಾಟಿಸಲಿದ್ದು, ಸರಣಿಶಿವಪೂಜಾ ಅಭಿಯಾನ 2021ರ ಸಂಚಾಲಕರಾದ ಶ್ರೀ ಗೋಪಾಲಕೃಷ್ಣ ಭಟ್ ‘ಶಿವನಿವಾಸ ಇವರು ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ. ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ವಿನಾಯಕ ಭಟ್ಟ, ಗಾಳಿಮನೆ ಇವರು ದಿಕ್ಕೂಚಿ ಉಪನ್ಯಾಸ ಮಾಡಲಿದ್ದು, ಸುಳ್ಯ ಹವ್ಯಕ ವಲಯದ ಅಧ್ಯಕ್ಷರಾದ ಶ್ರೀ ವಿಷ್ಣುಕಿರಣ ನೀರಬಿದಿರೆ ಇವರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್ ವಗೆನಾಡು ಉಪಸ್ಥಿತರಿದ್ದು ಶುಭಾಶಂಸನೆಯನ್ನು ಮಾಡಲಿದ್ದಾರೆ ಎಂದು ಕಾರ್ಯಕ್ರಮದ ಬಗ್ಗೆ ವಿವರ ನೀಡಿದರು. ಗೋಷ್ಠಿಯಲ್ಲಿ ಗೋಪಾಲಕೃಷ್ಣ ಭಟ್ ಉಬರಡ್ಕ, ಪುರೋಹಿತ ನಾಗರಾಜ್ ಭಟ್ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!