Ad Widget

ಬಾಳಿಲ: ತೆಂಗಿನ ಮರ ಏರುವ ಬಗ್ಗೆ ಪ್ರಾತ್ಯಕ್ಷಿಕೆ

ಮಾ.02ರಂದು ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ತೆಂಗಿನ ಮರ ಏರುವ ಕುರಿತು ಶ್ರೀ ವಿಠಲ ಗೌಡ ಕಡೀರ ಇವರು ಪ್ರಾತ್ಯಕ್ಷಿಕೆ ನೀಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲಾ ಶಿಕ್ಷಕರು ಮತ್ತು ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಾಲೆಯ ರಾಮನ್ ಇಕೋ ಕ್ಲಬ್ ಕಾರ್ಯಕ್ರಮ ನಡೆಸಿಕೊಟ್ಟಿತು.

ಬಾಳಿಲ: ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ ಇಲ್ಲಿ ಮಾ.02ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಪ್ರಗತಿಪರ ಕೃಷಿಕ ವಿಠಲ ಗೌಡ ಕಡೀರ ಭಾಗವಹಿಸಿದ್ದರು. ಅವರು ಸಮಗ್ರ ಕೃಷಿ ವಿಧಾನಗಳು, ಕೃಷಿಯಲ್ಲಿ ಸ್ವಾವಲಂಬಿ ಬದುಕು ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಮುಖ್ಯಗುರುಗಳಾದ ಯಶೋಧರ ನಾರಾಲು ಸ್ವಾಗತಿಸಿದರು. ಗಣಿತ ಶಿಕ್ಷಕರಾದ ಉದಯಕುಮಾರ್ ರೈ ಎಸ್ ವಂದಿಸಿದರು. ಇಕೋ ಕ್ಲಬ್...
Ad Widget

ದಾಖಲೆಗಳು ಬಿದ್ದುಸಿಕ್ಕಿರುತ್ತದೆ….

ಮಡಪ್ಪಾಡಿ ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಪಾರೆಪ್ಪಾಡಿ ಯವರಿಗೆ ಗುತ್ತಿಗಾರು ಸಮೀಪ ಪಾನ್ ಕಾರ್ಡ್, ಎಟಿಎಂ ಹಾಗೂ ಡ್ರೈವಿಂಗ್ ಲೈಸೆನ್ಸ್ ದಾಖಲೆಗಳು ಬಿದ್ದು ಸಿಕ್ಕಿದ್ದು ಕಳೆದುಕೊಂಡವರು 9483923043 ಸಂಖ್ಯೆಯನ್ನು ಸಂಪರ್ಕಿಸುವಂತೆ ವಿನಂತಿಸಿದ್ದಾರೆ.

ಕುಲ್ಕುಂದ : ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ

ಕುಲ್ಕುಂದ ಬಸವನಮೂಲೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಮಾ.01 ರಂದು ವರ್ಷಂಪ್ರತಿಯಂತೆ ಮಹಾಶಿವರಾತ್ರಿಯ ಪ್ರಯುಕ್ತ ಮಹಾಮೃತ್ಯುಂಜಯ ಯಾಗ, ಶ್ರೀ ಬಸವೇಶ್ವರ ದೇವರಿಗೆ ಶತರುದ್ರಾಭಿಷೇಕ, ರಂಗಪೂಜೆ, ಮಹಾಪೂಜೆ ನಡೆಯಿತು.ಬೆಳಿಗ್ಗೆ ದೀಪಾರಾಧನೆಯೊಂದಿಗೆ ಅಹೋರಾತ್ರಿ ಭಜನಾ ಸೇವೆ ಪ್ರಾರಂಭಗೊಂಡಿತು. ಬಳಿಕ ಶ್ರೀ ಬಸವೇಶ್ವರ ದೇವರಿಗೆ ಬೆಳಿಗ್ಗಿನ ಮಹಾಪೂಜೆ ನಡೆದು ಪ್ರಸಾದ ವಿತರಣೆ, ಶ್ರೀ ದೇವಸ್ಥಾನದ ಸಾಲ ತೀರುಸುವರೆ ನಿಧಿಕುಂಭ ಸಮರ್ಪಣೆ ನಡೆದು...

ಐವರ್ನಾಡು : ಕಟ್ಟಿಂಗ್ ಮೆಷಿನ್ ತಾಗಿ ಕಾರ್ಮಿಕ ಮೃತ್ಯು

ಕಟ್ಟಿಂಗ್ ಮೆಷಿನ್ ತಾಗಿ ಗಂಭೀರ ಗಾಯಗೊಂಡು ಕಾರ್ಮಿಕನೋರ್ವ ಮೃತಪಟ್ಟ ಘಟನೆ ಇಂದು ಐವರ್ನಾಡಿನಿಂದ ವರದಿಯಾಗಿದೆ. ಐವರ್ನಾಡು ನಾಟಿಕೇರಿ ನಿವಾಸಿ ದಯಾನಂದ (36) ಮೃತಪಟ್ಟ ದುರ್ದೈವಿ. ಕಟ್ಟಿಂಗ್ ಮೆಷಿನ್ ತೊಡೆಯ ಭಾಗಕ್ಕೆ ತಾಗಿ ಗಂಭೀರ ಗಾಯಗೊಂಡ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ರಕ್ತಸ್ರಾವದಿಂದ ಮೃತಪಟ್ಟರೆಂದು ತಿಳಿದುಬಂದಿದೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಮಾ.06: ಅರೆಭಾಷೆ ಸಾಮಾಜಿಕ ಚಿತ್ರ “ಕೇಸ್ ಪುಸ್ಕ” ಬಿಡುಗಡೆ

ಏನೆಕಲ್ಲಿನ ಕಲಾಮಾಯೆ ಸಂಸ್ಥೆಯ ಸಾರಥ್ಯದಲ್ಲಿ ನಿರ್ಮಾಣಗೊಂಡಸುಧೀರ್ ಏನೆಕಲ್ ನಟಿಸಿ ನಿರ್ದೇಶಿಸಿರುವ ಅರೆಭಾಷೆ ಸಾಮಾಜಿಕ ಚಿತ್ರ "ಕೇಸ್ ಪುಸ್ಕ" ಮಾ. 06 ರಂದು ಸಂಜೆ 06 ಗಂಟೆಗೆ ಕನ್ನಡ ಭವನ ಅಂಬೆಟಡ್ಕ ಸುಳ್ಯ ಇಲ್ಲಿ ಬಿಡುಗಡೆಗೊಂಡು ಪ್ರದರ್ಶನ ಕಾಣಲಿದೆಸಿನಿಮಾದ ಕಥೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಸುಧೀರ್ ಏನೆಕಲ್ ನಿರ್ವಹಿಸಿದ್ದುಛಾಯಾಗ್ರಾಹಕರಾಗಿ ಯಕ್ಷಿತ್ ಸಿ. ಕಲ್ಲುಗುಂಡಿ, ಪುಷ್ಪರಾಜ್ ಏನೆಕಲ್. ಗೀತೆ...
error: Content is protected !!