ಸಂಪಾಜೆ: ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತ್ರತ್ವದಲ್ಲಿ ಅಡಿಕೆ ಹಳದಿರೋಗ ವಿರುದ್ಧ ಹೋರಾಟ ಸಮಿತಿ ಸಭೆ ಶನಿವಾರ ಸಂಪಾಜೆಯ ಯಶೋದ ಮುತ್ತಯ್ಯ ಗೌಡ ಸಭಾಂಗಣದಲ್ಲಿ ಜರಗಿತು. ರಾಜಾರಾಮ್ ಕಳಗಿ ಅಧ್ಯಕ್ಷ ತೆ ವಹಿಸಿದ್ದರು. ಮಲೆನಾಡು ಜನಹಿತ ರಕ್ಷಣಾ ವೇದಿಕೆ ಕೇಂದ್ರ ಸಮಿತಿ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಿ, ಪ್ರತೀ ಗ್ರಾಮ ಮಟ್ಟದಲ್ಲಿ ಸಮಿತಿ ರಚನೆ ಮತ್ತು ಮನೆಮನೆ ಜಾಗೃತಿ ಯಾಗಬೇಕು. ಗ್ರಾಮಸ್ಥರೊಂದಿಗೆ ಚರ್ಚಿಸಿ ಬೇಡಿಕೆಗಳ ಪಟ್ಟಿಗೆ ಅಭಿಪ್ರಾಯ ಸಂಗ್ರಹಿಸಬೇಕು. ಗ್ರಾಮ ತಾಲೂಕು ಮತ್ತು ಸಹಾಯಕ ಆಯುಕ್ತರ ಕಚೇರಿಎದುರು ಪ್ರತಿಭಟನೆ ನಡೆಸಲು ಗ್ರಾಮಸ್ಥರು ಕೈಜೋಡಿಸಬೇಕು. ಯಾವುದೇ ದೇಣಿಗೆ ಸಂಗ್ರಹ, ಆಡಂಬರದ ಸಮಾವೇಶ ನಮ್ಮ ಹೋರಾಟದ ಮಾದರಿಯಲ್ಲ ಎಂದರು.
ಪ್ರಮುಖರಾದ ವರದರಾಜ್ ಸಂಕೇಶ್ ಸ್ವಾಗತಿಸಿದರು. ಬನ್ನೂರು ಪಟ್ಟೆ ಪ್ರದೀಪ್ ಕುಮಾರ್ ಕರಿಕೆ ನಿರೂಪಿಸಿ, ವಂದಿಸಿದರು. ವೇದಿಕೆಯಲ್ಲಿ, ಗ್ರಾಮದ ವಿಶ್ವನಾಥ ಪೆಲ್ತಡ್ಕ ಸಮಿತಿಹೋರಾಟ ಪ್ರಮುಖರಾದ ಉಮೇಶ್ ಕಜ್ಜೋಡಿ ಉಪಸ್ಥಿತರಿದ್ದರು. ಮಲೆನಾಡು ವೇದಿಕೆಯ ಪ್ರಮುಖರಾದ ಭಾನುಪ್ರಕಾಶ್ ಪೆರುಮುಂಡ, ಜಯರಾಮ ಕಟ್ಟೆಮನೆ, ಭರತ್ ಕನ್ನಡ್ಕ ಉಪಸ್ಥಿತರಿದ್ದರು.
- Thursday
- November 21st, 2024