Ad Widget

ಬಾಳಿಲ ವಿದ್ಯಾಭೋದಿನಿ ಹಿ.ಪ್ರಾ.ಶಾಲೆಯಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಅಡುಗೆ ತಯಾರಿ ತರಬೇತಿ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪಂಜ ಸ್ಥಳೀಯ ಸಂಸ್ಥೆಯ ಅಡಿಯಲ್ಲಿ ಬಾಳಿಲ ವಿದ್ಯಾಭೋದಿನಿ ಹಿರಿಯ ಪ್ರಾಥಮಿಕ ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಅಡುಗೆ ತಯಾರಿ ತರಬೇತಿಯನ್ನು ಮಾ.19 ರಂದು ನಡೆಸಲಾಯಿತು.

. . . . .


ಅಡುಗೆ ಪ್ರಾವಿಣ್ಯತಾ ನಿಟ್ಟಿನಲ್ಲಿ ಈ ಅಡುಗೆ ತರಬೇತಿಯನ್ನು ನಡೆಸಲಾಗಿದ್ದು ಹಲವು ವಿದ್ಯಾರ್ಥಿಗಳು ತರಬೇತಿ ಪಡೆದುಕೊಂಡರು.
ಸ್ಕೌಟ್ ಮಾಸ್ಟರ್ ಶಿವಪ್ರಸಾದ್ ಜಿ., ಗೈಡ್ ಕ್ಯಾಪ್ಟನ್ ಯಶೋಧ ಎನ್.ಕೆ, ಶುಭಾ.ಡಿ ಮಾರ್ಗದರ್ಶನ ನೀಡಿದರು.


ನಿರ್ಣಾಯಕರಾಗಿ ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು, ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಮೂರ್ತಿ, ಶಿಕ್ಷಕಿ ರಮ್ಯ ಸಹಕರಿಸಿದರು.
ಈ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಭುವನೇಶ್ವರ ಪೂದೆ, ಉಪಾಧ್ಯಕ್ಷೆ ಹರಿಣಾಕ್ಷಿ, ಶಾಲಾ ಮುಖ್ಯೋಪಾಧ್ಯಾಯರಾದ ಸುಬ್ಬಯ್ಯ.ವೈ.ಬಿ ಹಾಗೂ ಅಧ್ಯಾಪಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!