ಕೊಲ್ಲಮೊಗ್ರದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಮಯೂರ ಕಲಾಮಂದಿರದಲ್ಲಿ ಮಾ.20 ರಂದು ನಡೆಯಿತು. ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಯೋಜನೆಯಡಿ ಕೊಡುವ ತಾಲೂಕು ಕೃಷಿ ಪ್ರಶಸ್ತಿಯನ್ನು ಸುಳ್ಯ ತಾಲೂಕಿನ 7 ಮಂದಿ ಕೃಷಿಕರಿಗೆ ನೀಡಲಾಯಿತು. ಹೈನುಗಾರಿಕೆಯಲ್ಲಿ ಜಿಲ್ಲಾ ಪ್ರಶಸ್ತಿ ಪಡೆದ ವಿಶ್ವನಾಥ್ ಪೈ, ಸಮಗ್ರ ಕೃಷಿ ಪದ್ಧತಿ ಘಟಕದಡಿ ನೀಡುವ ಪ್ರಶಸ್ತಿಗೆ ಕೊಲ್ಲಮೊಗ್ರದ ಜಯಪ್ರಕಾಶ್ ಕಟ್ಟ, ತೋಟಗಾರಿಕ ಘಟಕದ ಅಡಿಯಲ್ಲಿ ನೀಡಲಾಗುವ ಕೃಷಿ ಪ್ರಶಸ್ತಿಗೆ ಕೆ.ಟಿ.ಭಾಗೀಶ್ ಕೊಯಿಕುಳಿ, ಸಾವಯವ ಕೃಷಿ ಪ್ರಶಸ್ತಿಗೆ ಆಲೆಟ್ಟಿಯ ಕೃಷ್ಣಪ್ರಸಾದ್ ಕೆ, ಸಮಗ್ರ ಕೃಷಿ ಪದ್ಧತಿ ಘಟಕದ ಅಡಿ ನೀಡುವ ಪ್ರಶಸ್ತಿಗೆ ಕಲ್ಮಡ್ಕದ ಕೃಷ್ಣಪ್ಪ ಪಾಲಾರ್, ತೋಟಗಾರಿಕಾ ಘಟಕದ ಅಡಿ ನೀಡುವ ಪ್ರಶಸ್ತಿಗೆ ಗುತ್ತಿಗಾರಿನ ರಾಕೇಶ್ ಎಂ.ಸಿ, ಜೇನುಕೃಷಿಗೆ ಯೇನೆಕಲ್ಲಿನ ಮುರಳೀಧರ ಜಿ.ಟಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಬಂದರು,ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಮಾನ್ಯ ಶ್ರೀ ಎಸ್.ಅಂಗಾರ, ಮಾನ್ಯ ಸಹಾಯಕ ಆಯುಕ್ತರು ಪುತ್ತೂರು ಹಾಗೂ ಮಾನ್ಯ ಸುಳ್ಯ ತಾಲೂಕು ತಹಶೀಲ್ದಾರ್, ತಾ.ಪಂ.ಮುಖ್ಯಾಧಿಕಾರಿ ಎನ್ ಭವಾನಿಶಂಕರ ಅವರೊಂದಿಗೆ ಸುಳ್ಯ ತಾಲೂಕಿನ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ:-ಉಲ್ಲಾಸ್ ಕಜ್ಜೋಡಿ