
ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಕೃಪಾ ಪೋಷಿತ ಯಕ್ಷಗಾನ ಮಂಡಳಿ, ಪಾವಂಜೆ ಮೇಳದವರಿಂದ ಕುಕ್ಕೆ ಸುಬ್ರಹ್ಮಣ್ಯದ ರಥಬೀದಿಯಲ್ಲಿ “ಶ್ರೀ ದೇವಿಮಹಾತ್ಮೆ” ಎಂಬ ಯಕ್ಷಗಾನ ಬಯಲಾಟ ಜರಗಿತು.
ಈ ಸಂದರ್ಭದಲ್ಲಿ ಮೇಳದ ಪ್ರಧಾನ ಭಾಗವತರಾದ ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿ, ದೇವಿಪಾತ್ರಧಾರಿ ಅಕ್ಷಯ ಕುಮಾರ್ ಮಾರ್ನಾಡ್, ರಾಕೇಶ್ ರೈ ಅಡ್ಕ,ಹಾಗೂ ನೆಪಥ್ಯ ಕಲಾವಿದ ರಮೇಶ್ ಜೋಗಿ ಇವರನ್ನು ಪಟ್ಲ ಅಭಿಮಾನಿ ಬಳಗ, ಜೆಸಿಸ್ ಸುಬ್ರಹ್ಮಣ್ಯ ಹಾಗೂ ಊರ ನಾಗರಿಕರ ಪರವಾಗಿ ಸನ್ಮಾನಿಸಲಾಯಿತು.
ದೇವಳದ ಸಹಾಯಕ ಕಾರ್ಯ ನಿವಾಹಣಾಧಿಕಾರಿಗಳಾದ ಶ್ರೀಮತಿ ಪುಷ್ಪಲತಾ, ಮೋಹನದಾಸ ರೈ, ದೀಪಕ್ ನಂಬಿಯಾರ್, ಪದ್ಮನಾಭ ಮುಚ್ಚಿಂತಾಯ, ರವಿ ಕಕ್ಕೆಪದವು, ಚಂದ್ರ ಶೇಖರ ನಾಯರ್, ಮೊದಲಾದವರು ಉಪಸ್ಥಿತರಿದ್ದರು.ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ಕೃಷ್ಣ ಶರ್ಮ ಕಾರ್ಯಕ್ರಮ ನಿರೂಪಿಸಿದರು.