ಬೆಂಗಳೂರಿನ ಜ್ಞಾನ ಮಂದಾರ ಅಕಾಡೆಮಿ ಸಂಸ್ಥಾಪಕರ ದಿನಾಚರಣೆ ಅಂಗವಾಗಿ, ಎಸ್.ಪಿ.ಬಾಲಸುಬ್ರಹ್ಮಣ್ಯ ನೆನಪಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಸಂಗೀತ ಜ್ಞಾನವಿರುವ ವಾದ್ಯಗೋಷ್ಠಿಯೊಂದಿಗೆ ಹಾಡುವ 12 ರಿಂದ 20 ವರ್ಷದೊಳಗಿನ ಅಭ್ಯರ್ಥಿಗಳು ಅರ್ಹರು. ಈ ಕೆಳಕಂಡ ಚಲನ ಚಿತ್ರಗಳಾದ ನ್ಯಾಯವೇ ದೇವರು, ಸಾಕ್ಷಾತ್ಕಾರ, ಬೆಂಕಿಯ ಬಲೆ, ದೇವರ ಮಕ್ಕಳು, ಗೆಜ್ಜೆ ಪೂಜೆ, ಕಸ್ತೂರಿ ನಿವಾಸ, ಬಂಧನ, ನೀ ಬರೆದ ಕಾದಂಬರಿ, ಬಂಗಾರದ ಮನುಷ್ಯ, ಒಲವಿನ ಉಡುಗೆರೆ, ಬೆಳ್ಳಿಮೋಡ, ಹಸಿರು ತೋರಣ, ಗಂಧದ ಗುಡಿ, ಚಿತ್ರಗಳ ಯಾವುದಾದರೂ ಒಂದು ಹಾಡನ್ನು ಹಾಡಿ ಸಿ.ಡಿ.ಯೊಂದಿಗೆ ಆಸ್ತಕರು ನಿಮ್ಮಗಳ ವೈಯಕ್ತಿಕ ವಿವರ ಭಾವಚಿತ್ರದೊಂದಿಗೆ ನಿರ್ದೇಶಕರು ಜ್ಞಾನ ಮಂದಾರ ಅಕಾಡೆಮಿ ನಂ.39, ಗಾಣಿಗರಹಳ್ಳಿ, ಚಿಕ್ಕಬಾಣವಾರ ಅಂಚೆ, ಬೆಂಗಳೂರು 90 ಇಲ್ಲಿಗೆ ಅಂಚೆ ಅಥವಾ ಪ್ರೊಫೆಷನಲ್ ಕೋರಿಯರ್ ಮುಖಾಂತರ ಏ. 20 ರೊಳಗೆ ಕಳಿಸಿ ಕೊಡಲು ಪತ್ರಿಕಾ ಪ್ರಕಟಣೆಯಲ್ಲಿ ಕೋರಲಾಗಿದೆ.
ಚೆನ್ನಾಗಿ ಹಾಡಿದ ಮೂರು ಮಂದಿ ಅಭ್ಯರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನದ ಜೊತೆಗೆ, ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಕನ್ನಡ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಹೊರನಾಡು ಕನ್ನಡಿಗರಿಗೆ ಮುಂಬೈನಲ್ಲಿ ಕರ್ನಾಟಕದವರಿಗೆ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ.